ಬ್ರಿಗೇಡ್ ಮುಕುಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

ಬೆಂಗಳೂರು, ಅ.4: ಬೆಂಗಳೂರು ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ಬ್ರಿಗೇಡ್ ಗ್ರೂಪ್ ಗೆ 2013-14ನೇ ಸಾಲಿನ ಭಾರತದ ಅತ್ಯುತ್ತಮ ಕಂಪನಿ ಎಂಬ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಜಾಗತಿಕ ಮಟ್ಟದ ತರಬೇತಿ ಮತ್ತು ಸಲಹಾ ಸಂಸ್ಥೆಯಾಗಿರುವ ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ ಟಿಟ್ಯೂಟ್ ನೀಡಿದೆ.

ಬ್ರಿಗೇಡ್ ಗ್ರೂಪ್ ಗೆ ಇದು ಸತತ ನಾಲ್ಕನೇ ಬಾರಿ ದೊರೆಯುತ್ತಿರುವ ಪ್ರಶಸ್ತಿ. ಎಲ್ಲಾ ಕ್ಷೇತ್ರಗಳ ಅತ್ಯಂತ ಖ್ಯಾತನಾಮ 100 ಉದ್ಯಮಗಳ ಪೈಕಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಬ್ರಿಗೇಡ್ ಎರಡನೇ ಸ್ಥಾನದಲ್ಲಿದೆ.

Great place to work
ಪ್ರಶಸ್ತಿ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್, ಬ್ರಿಗೇಡ್ ಗ್ರೂಪ್ನಲ್ಲಿ ನಮ್ಮ ಸಿಬ್ಬಂದಿ ವರ್ಗದ ಶ್ರಮಕ್ಕೆ ಸಂದ ಪ್ರಶಸ್ತಿ ಇದಾಗಿದೆ ಎಂದು ಹೇಳಿದ್ದಾರೆ. ಸತತ ನಾಲ್ಕನೇ ಬಾರಿ ಈ ಪ್ರಶಸ್ತಿ ಸಿಕ್ಕಿರುವುದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈನ ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ ಟಿಟ್ಯೂಟ್ ನ ಪ್ರೀತಿ ಮಲ್ಹೋತ್ರ ಅವರು ಬ್ರಿಗೇಡ್ ಗ್ರೂಪ್ ತಂಡಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ವಿತರಿಸಿದರು. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+