ಬಾಷ್ ಗೆ ಭರ್ಜರಿ ಲಾಭ, ಆದಾಯ, 770 ಕೋಟಿ ರು ಹೂಡಿಕೆ

Posted By:
Subscribe to Oneindia Kannada

ಬೆಂಗಳೂರು, ಮೇ 26: ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಪೂರೈಕೆದಾರ ಮತ್ತು ಸೇವಾ ಪ್ರವರ್ತಕ ಬಾಷ್, ಕಳೆದ 12 ತಿಂಗಳಲ್ಲಿ 10,415 ಕೋಟಿ ರೂ. ನಿವ್ವಳ ಮಾರಾಟ ದಾಖಲಿಸಿದ್ದು ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.9.5 ರಷ್ಟು ಏರಿಕೆ ಕಂಡಿದೆ.

ತೆರಿಗೆ ಪೂರ್ವ ಲಾಭ 1859 ಕೋಟಿ ರೂ. ಆಗಿದ್ದು ಶೇ.23.6 ರಷ್ಟು ಬೆಳವಣಿಗೆ ಕಂಡಿದೆ. ಅವಧಿಗೆ ತೆರಿಗೆ ನಂತರದ ಲಾಭ 1,245 ಕೋಟಿ ರೂ. ಆಗಿದ್ದು, ಹಿಂದಿನ ವರ್ಷಕ್ಕಿಂತ ಶೇ.23.2 ರಷ್ಟು ಏರಿಕೆ ಕಂಡಿದೆ.

ಕಂಪನಿ ಆರ್ಥಿಕ ಫಲಿತಾಂಶ ಆಧರಿಸಿ ನಿರ್ದೇಶಕರುಗಳು ಕಳೆದ 12 ತಿಂಗಳ ಅವಧಿಯ ತಲಾ ಷೇರಿಗೆ 85 ರೂ. ಡಿವಿಡೆಂಟ್‍ಗೆ ಶಿಫಾರಸ್ಸು ಮಾಡಿದ್ದು, ಹಿಂದಿನ 15 ತಿಂಗಳಿಗೂ ಇದೇ ಅನ್ವಯವಾಗಲಿದೆ. [ಮರ್ಕೆಲ್ ಎಫೆಕ್ಟ್ : ಬಾಷ್ ಸಂಸ್ಥೆಯಿಂದ 650 ಕೋಟಿ ರು ಹೂಡಿಕೆ]

Bosch profit rises 23% to Rs1,245 crore in fiscal 2016

ಹೂಡಿಕೆ ಮುಂದುವರಿಕೆ: ಹೊಸ ಉತ್ಪಾದನೆ ತಾಣಗಳ ಆರಂಭ
ಕಳೆದ 12 ತಿಂಗಳಲ್ಲಿ 2 ಹೊಸ ಉತ್ಪಾದನೆ ಘಟಕವನ್ನು ಬಾಷ್ ಲಿಮಿಟೆಡ್ ಆರಂಭಿಸಿದೆ. ಬಿಡದಿಯಲ್ಲಿನ ಡೀಸೆಲ್ ಸಿಸ್ಟಮ್ ಘಟಕ 2015ರ ಆಗಸ್ಟ್‍ನಲ್ಲಿ ಆರಂಭಗೊಂಡಿತು. ಭಾರತೀಯ ಮಾರುಕಟ್ಟೆಯ ಅಗತ್ಯತೆ ಪೂರೈಕೆಗೆ ವಿನ್ಯಾಸಗೊಂಡ ಚೆನ್ನೈನ ಪವರ್ ಟೂಲ್ ಘಟಕ ನವೆಂಬರ್.2015ರಲ್ಲಿ ಕಾರ್ಯ ಆರಂಭಿಸಿದೆ. 2015-16ರಲ್ಲಿ ಕಂಪನಿ ಒಟ್ಟಾರೆ 480ಕೋಟಿ ರೂ. ಹೂಡಿಕೆ ಮಾಡಿದೆ. ಈ ವರ್ಷ ಬಿಡದಿ, ನಾಸಿಕ್‍ನ ಕಾಮನ್ ರೈಲ್ ಪಂಪ್ಸ್ ಹಾಗೂ ಇಂಜೆಕ್ಟರ್ ಮತ್ತು ಬೆಂಗಳೂರಿನ ಆರ್&ಡಿ ಟೆಕ್ ಕೇಂದ್ರದಲ್ಲಿ ಸುಮಾರು 770 ಕೋಟಿ ರೂ. ಹೂಡಿಕೆಗೆ ಆಲೋಚಿಸಿದೆ.[ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?]

ಡಾ.ಬನ್ರ್ಸ್ ಪ್ರಕಾರ ಮುಂದಿನ ತ್ರೈಮಾಸಿಕದ ಭವಿಷ್ಯ ಮುಂಗಾರು, ತೈಲ ದರ ಮತ್ತು ಬಡ್ಡಿ ದರ ಹಾಗೂ ಸರ್ಕಾರಿ ಯೋಜನೆಗಳ ವೇಗವನ್ನು ಆಧರಿಸಿದೆ. 'ನಾವು ಆಟೊಮೊಟೀವ್ ಉದ್ಯಮದಲ್ಲಿ ನಿಯಂತ್ರಿತ ಬೆಳವಣಿಗೆ ನಿರೀಕ್ಷಿಸುತ್ತಿದ್ದೇವೆ. ಈ ಸಲ ಭಾರತೀಯ ಮಾರುಕಟ್ಟೆ ಮೇಲೆ ಎಚ್ಚರಿಕೆ ವಹಿಸುತ್ತೇವೆ' ಎಂದರು. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]

ಸೂಚನೆ: ಬಾಷ್ ಲಿಮಿಟೆಡ್ ತನ್ನ ಜನವರಿಯಿಂದ ಡಿಸೆಂಬರ್ ವರೆಗಿನ ಆರ್ಥಿಕ ವರ್ಷವನ್ನು ಏಪ್ರಿಲ್ ನಿಂದ ಮಾರ್ಚ್ ಗೆ ಬದಲಿಸಿಕೊಂಡಿದೆ. ಇದನ್ನು ಆಧರಿಸಿ 2014-15ನೇ ಆರ್ಥಿಕ ವರ್ಷ 15 ತಿಂಗಳ ಅವಧಿಯಾದ್ದಾಗಿದ್ದು ಜನವರಿ 2014ರಿಂದ ಮಾರ್ಚ್2015. ಈ ವರ್ಷ 12 ತಿಂಗಳ ಅವಧಿ. ಏ.2015ರಿಂದ ಮಾ.2016. ಹೀಗಾಗಿ ಬೆಳವಣಿಗೆ ಹೋಲಿಕೆಯನ್ನು 12 ತಿಂಗಳ ಆಧಾರದಲ್ಲಿ ಮಾಡಲಾಗಿದ್ದು ಏ.2014ರಿಂದ ಮಾ.2015 ಹಾಗೂ ಏ.2015ರಿಂದ ಮಾ.2016ರನ್ನು ಪರಿಗಣಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Auto components maker Bosch Ltd posted a 23.2% increase in profit to Rs.1,245 crore for the year ended 31 March 2016 on a 9.5% increase in revenue to Rs.10,415 crore. Bosch plans Rs.770 crore investments in FY17.
Please Wait while comments are loading...