• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಟ್ ಕಾಯಿನ್ ಚಲಾವಣೆ ತರುವಷ್ಟು ಸ್ಥಿರತೆ ಹೊಂದಿಲ್ಲ: ಯುಎಸ್ ಅಧಿಕಾರಿ

|

ವಾಷಿಂಗ್ಟನ್, ಫೆಬ್ರವರಿ 23: ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಕಳೆದ ಕೆಲ ದಿನಗಳಲ್ಲಿ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿತ್ತು. ಆದರೆ, ಸೋಮವಾರದಂದು ಬಿಟ್ ಕಾಯಿನ್ ಬೆಲೆ 58, 354 ಡಾಲರ್‌ಗೆ ಕುಸಿತ ಕಂಡಿತ್ತು. ಬಿಟ್ ಕಾಯಿನ್ ಚಲಾವಣೆ ಬಗ್ಗೆ ಯುಎಸ್ ಖಜಾಂಚಿ ಕಾರ್ಯದರ್ಶಿ ಜನೇತ್ ಯೆಲೆನ್ ಅವರು ಪ್ರತಿಕ್ರಿಯಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಟ್ ಕಾಯಿನ್ ಚಲಾವಣೆ ಮಾಡುವಷ್ಟು ಸ್ಥಿರತೆ ಹೊಂದಿಲ್ಲ, ವ್ಯವಹಾರ ನಡೆಸುವಷ್ಟು ದಕ್ಷ ವ್ಯವಸ್ಥೆ ಹೊಂದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಬಿಟ್ ಕಾಯಿನ್ 58. 640.77 ಡಾಲರ್ ಮುಟ್ಟಿತ್ತು. ಕಳೆದ ಶುಕ್ರವಾರ 1 ಟ್ರಿಲಿಯನ್ ಡಾಲರ್ ದಾಟಿತ್ತು. ಟೆಸ್ಲಾ, ಮಾಸ್ಟರ್ ಕಾರ್ಡ್, ಪೇಪಾಲ್, ಬ್ಲಾಕ್ ರಾಕ್ ಗಮನ ಸೆಳೆದಿತ್ತು. ಭಾರಿ ಹೂಡಿಕೆ ನಿರೀಕ್ಷೆ ನಡುವೆ ಕಳೆದ ಎರಡು ದಿನಗಳಲ್ಲಿ ಶೇ 6ರಷ್ಟು ಕುಸಿತ ಕಂಡಿದೆ. ಆಪಲ್, ಮೈಕ್ರೋಸಾಫ್ಟ್, ಗೂಗಲ್ ನಂಥ ಸಂಸ್ಥೆಗಳು ದಶಕಗಳ ನಂತರ ಮುಟ್ಟಿದ್ದ ದಾಖಲೆ ಮೌಲ್ಯವನ್ನು ಬಿಟ್ ಕಾಯಿನ್ 12 ವರ್ಷಗಳಲ್ಲಿ ಸಾಧಿಸಿದೆ. ಇದು ಹೂಡಿಕೆದಾರರ ಗಮನ ಸೆಳೆದಿದೆ ಎಂದು ಜೆಬ್ ಪೇ ಸಿಎಂಒ ಹೇಳಿದ್ದಾರೆ.

English summary
Bitcoin extremely inefficient for transaction, says US Treasury Secretary Janet Yellen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X