ಬಿಗ್ ಬಾಸ್ಕೆಟ್ ನಿಂದ ಇನ್ಮುಂದೆ ತಾಜಾ ಮಾಂಸ ಮಾರಾಟ!

ಬೆಂಗಳೂರು, ಜೂನ್ 05 : ಭಾರತದ ಅತಿದೊಡ್ಡ ಆನ್ ಲೈನ್ ದಿನಸಿ ಅಂಗಡಿ ಬಿಗ್ ಬಾಸ್ಕೆಟ್ ಇನ್ಮುಂದೆ ಬ್ರಾಂಡೆಡ್ ಕಾಸ್ಮೆಟಿಕ್, ತಾಜಾ ಮಾಂಸವನ್ನು ಮಾರಾಟ ಮಾಡುವುದಾಗಿ ಪ್ರಕಟಿಸಿದೆ.

ಸೌಂದರ್ಯವರ್ಧಕಗಳ ಆನ್ ಲೈನ್ ಮಾರಾಟ ಕ್ಷೇತ್ರದಲ್ಲಿ ಸ್ಟಾರ್ ಅಪ್ ಸಂಸ್ಥೆ ನ್ಯಾಕಾ ಹಾಗೂ ಮಾಂಸ ಮಾರಾಟದಲ್ಲಿ ಲಿಸಿಯಸ್ ಹಾಗೂ ಜಾಪ್ ಫ್ರೆಶ್ ಪ್ರಮುಖವಾಗಿವೆ.

ಬಿಗ್ ಬಾಸ್ಕೆಟ್ ನ ಸಿಇಒ, ಸಹ ಸ್ಥಾಪಕ ಹರಿ ಮೆನನ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಈ ಎರಡು ಕ್ಷೇತ್ರಕ್ಕೆ ಬಿಗ್ ಬಾಸ್ಕೆಟ್ ಕಾಲಿರಿಸುತ್ತಿದೆ. ಹೋಟೆಲ್, ರೆಸ್ಟೊರೆಂಟ್ ಹಾಗೂ ಕೆಟರರ್ಸ್ ಗೆ ಅನುಕೂಲವಾಗಲೆಂದು ತಾಜಾ ಮಾಂಸ ಮಾರಾಟಕ್ಕೆ ಮುಂದಾಗಿದ್ದೇವೆ. ಇದೇ ರೀತಿ ಸೌಂದರ್ಯವರ್ಧಕ ಕ್ಷೇತ್ರದ ಉತ್ಪನ್ನಗಳನ್ನು ತಲುಪಿಸಲಾಗುವುದು ಎಂದರು.

BigBasket to sell cosmetics, fresh meat on its platform

ಡೈಲಿನಿಂಜಾ ಹಾಗೂ ಮಿಲ್ಕ್ ಬಾಸ್ಕೆಟ್ ನಂಥ ಸಣ್ಣ ಪ್ರಮಾಣದ ದಿನಸಿ ಅಂಗಡಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಮಾರುಕಟ್ಟೆ ವಿಸ್ತರಣೆಗೂ ಬಿಗ್ ಬಾಸ್ಕೆಟ್ ಮುಂದಾಗಿದೆ. ಅಗತ್ಯ ಪೂರೈಕೆ ವಸ್ತುಗಳಾದ ಡೈರಿ ಉತ್ಪನ್ನಗಳು, ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಆರ್ಡರ್ ಮಾಡಿದ ಕೆಲ ಗಂಟೆಗಳಲ್ಲೇ ಗ್ರಾಹಕರಿಗೆ ತಲುಪಿಸುವ ಗುರಿ ಸಾಧಿಸಲಾಗಿದೆ ಎಂದು ಬಿಗ್ ಬಾಸ್ಕೆಟ್ ವಕ್ತಾರರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+