ಕಾರು ಮತ್ತು ಬೈಕ್ ರಿಪೇರಿ, ಸರ್ವೀಸ್‌ಗೆ ಬಿಯಾಂಡ್ ಗರಾಜ್ ಪ್ರೈಮ್
ಬೆಂಗಳೂರು, ಅಕ್ಟೋಬರ್ 01: ಕಾರು ಮತ್ತು ಬೈಕ್ ರಿಪೇರಿ ಮತ್ತು ಸೇವಾ ಉದ್ಯಮದಲ್ಲಿ ಅತ್ಯಂತ ವಿಶ್ವಾಸಾರ್ಹ ಹೆಸರುಗಳಲ್ಲಿ ಒಂದಾದ ಬಿಯಾಂಡ್ ಗರಾಜ್, ಬಿಜಿ-ಪ್ರೈಮ್ ಪ್ರಾರಂಭಿಸಿದೆ. ಇದು ಸಮಗ್ರ, ಮಲ್ಟಿ-ಬ್ರಾಂಡ್ ಕಾರು ಮತ್ತು ಬೈಕ್ ಪರಿಹಾರಗಳನ್ನು ಒದಗಿಸುವ ಅಧೀನ ಸಂಸ್ಥೆಯಾಗಿದೆ. ಕಂಪನಿಯು ಈ ಉದ್ಯಮವನ್ನು ಗ್ರಾಹಕ ಸೇವೆ ಒದಗಿಸಲು ಮತ್ತು ಅವರ ವಾಹನ ರಿಪೇರಿ ಹಾಗೂ ನಿರ್ವಹಣೆಯನ್ನು ಸರಾಗ ಮತ್ತು ಕಡಿಮೆ ವೆಚ್ಚದ್ದಾಗಿಸಲು ಪ್ರಾರಂಭಿಸಿದೆ. ಬಿಯಾಂಡ್ ಗರಾಜ್ ಕೈಗೆಟುಕುವ, ಲಭ್ಯ ಮತ್ತು ಪ್ರಾಯೋಗಿಕ ಸೇವೆಗಳನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಕಂಪನಿಯು ಪ್ರತಿನಿತ್ಯ ಸಮಗ್ರ ಗ್ರಾಹಕ ಸೇವೆಯಲ್ಲಿ ಗುಣಮಟ್ಟ ಹೆಚ್ಚಿಸಲು ಅವಿರತವಾಗಿ ಶ್ರಮಿಸುತ್ತಿದೆ.
ಬಿಜಿ ಜಿನೈನ್ ಸ್ಪೇರ್ಸ್ ಪ್ರಾರಂಭವು ಕಂಪನಿಯು ನಡೆಸಿದ ಅಪಾರ ಸಂಶೋಧನೆ ಮತ್ತು ಗಮನಿಸುವಿಕೆಯ ಫಲಿತಾಂಶವಾಗಿದ್ದು ಅದು ಬಿಡಿಭಾಗಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ದುಬಾರಿ ಬೆಲೆಗೆ ಏರಿಸುವ ಮೂಲಕ ಗ್ರಾಹಕರಿಗೆ ಸಂಕಷ್ಟ ತರುತ್ತಿದ್ದಾರೆ ಎಂದು ಅನಾವರಣಗೊಳಿಸಿತು. ಆದ್ದರಿಂದಲೇ ಬಿಜಿ ಗ್ರಾಹಕರಿಗೆ ಬಿಡಿಭಾಗಗಳು ನೇರವಾಗಿ ಲಭ್ಯವಾಗುವಂತೆ ಮಾಡಲು ನಿರ್ಧರಿಸಿತು, ಇದರಿಂದ ಗ್ರಾಹಕರ ಕೊಳ್ಳುವ ಪ್ರಕ್ರಿಯೆ ಸುಸೂತ್ರವಾಗಿದ್ದಲ್ಲದೆ ಹೆಚ್ಚುವರಿ ಬೆಲೆಗಳ ಹೊರೆ ನಿವಾರಿಸಿತು ಮತ್ತು ಆದ್ದರಿಂದ ಕಂಪನಿಯು ಈ ಸಮಸ್ಯೆ ನಿವಾರಿಸುವ ಪ್ರಯತ್ನದಲ್ಲಿ ಬಿಜಿ ಜಿನೈನ್ ಸ್ಪೇರ್ಸ್ ಅನ್ನು ಪ್ರಾರಂಭಿಸಿತು.

ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಪೂರೈಸುವ ಆಲೋಚನೆ
ಬಿಜಿ ಪ್ರೈಮ್ ಈ ನಿರ್ಧಾರಕ್ಕೆ ಕಾರಣ ಗ್ರಾಹಕರು ಬೆಲೆಗಳು, ಪ್ರಕ್ರಿಯೆಗಳು ಮತ್ತು ಮಲ್ಟಿ-ಬ್ರಾಂಡ್ ವರ್ಕ್‍ಶಾಪ್‍ಗಳಲ್ಲಿ ಬಿಡಿಭಾಗಗಳ ಆಯ್ಕೆಯಲ್ಲಿ ಸಮಾನತೆಯ ಕೊರತೆಯ ಕುರಿತು ದೂರಾಗಿದೆ. ಈ ಅಸಮಾನ ಗುಣಮಟ್ಟ ಮತ್ತು ಬೆಲೆಗಳ ವ್ಯತ್ಯಾಸದಿಂದ ಗ್ರಾಹಕರು ಆಗಾಗ್ಗೆ ಅವರ ಸೇವಾ ಪೂರೈಕೆದಾರರನ್ನು ಬದಲಾಯಿಸುವಂತೆ ಮಾಡುತ್ತಿತ್ತು, ಇದರಿಂದ ಗ್ರಾಹಕರಿಗೆ ನಿರಾಸೆಯುಂಟಾಗುತ್ತಿತ್ತು. ಗ್ರಾಹಕರ ಈ ಅಸಂತೃಪ್ತಿಯನ್ನು ಬಿಜಿ ಗುರುತಿಸಿತು ನಂತರ ಅದು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಪೂರೈಸುವ ಆಲೋಚನೆ ರೂಪಿಸಿತು. ಕಂಪನಿಯು ಪ್ರಮುಖ ಕಾರ್ಯ ನಿರ್ವಹಣೆಯ ತಾಣಗಳಲ್ಲಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ರಿಪೇರಿಗಳು ಮತ್ತು ನಿರ್ವಹಣೆಯಲ್ಲಿ ಪರಿಣಿತಿ ಪಡೆದ ವರ್ಕ್‍ಶಾಪ್‍ಗಳಿಂದ ಬಿಜಿಗೆ, ಬಿಜಿ-ಪ್ರೈಮ್ ಭಾಗವಾಗಲು ಉತ್ತೇಜಕಾರಕ ಪ್ರತಿಕ್ರಿಯೆ ಪಡೆಯಿತು.

ಬಿಯಾಂಡ್ ಗರಾಜ್‍ನ ಸಿಇಒ ಮಹಮೂದ್
ಈ ಹೊಸ ಉದ್ಯಮದ ಕುರಿತು ಬಿಯಾಂಡ್ ಗರಾಜ್‍ನ ಸಿಇಒ ಮಹಮೂದ್ ಕೋಟೆಬಾಗಿಲು,''ಬಿಯಾಂಡ್ ಗರಾಜ್‍ಗೆ ಯಾವುದೇ ತಾಣದಲ್ಲಿರಲಿ, ಎಲ್ಲ ವರ್ಕ್‍ಶಾಪ್‍ಗಳಿಗೂ ಸಾಮರಸ್ಯದ ಬಳಕೆದಾರರ ಅನುಭವ ನೀಡುವ ಗುರಿ ಹೊಂದಿದೆ. ಈ ಗುರಿಯ ಈಡೇರಿಕೆಗೆ, ನಾವು ತ್ವರಿತ ಮತ್ತು ವಿವೇಚನಾಯುಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಇತ್ತೀಚೆಗೆ ಬಿಜಿ ಜಿನೈನ್ ಸ್ಪೇರ್ಸ್ ಬಿಡುಗಡೆ ಮಾಡುವ ಮೂಲಕ ಕೈಗೆಟುಕುವ, ಗುಣಮಟ್ಟದ ಬಿಡಿಭಾಗಗಳ ಕೊರತೆಯ ಸಮಸ್ಯೆಯನ್ನು ನಿಭಾಯಿಸಿದೆವು, ಅದು ಗ್ರಾಹಕರಿಂದ ಸಾಕಷ್ಟು ಪ್ರಶಂಸೆ ಪಡೆಯಿತು ಮತ್ತು ಈಗ ಬಿಜಿ ಪ್ರೈಮ್ ಅದನ್ನು ಅನುಸರಿಸುತ್ತಿದೆ. ಇದು ಹೊಸ ಹೂಡಿಕೆಯ ಮಾದರಿಯಾಗಿದ್ದು ಇದರಲ್ಲಿ ವರ್ಕ್‍ಶಾಪ್‍ಗಳು ಸಂಪನ್ಮೂಲಗಳನ್ನು ಪಡೆಯುತ್ತಾರೆ ಮತ್ತು ಗ್ರಾಹಕರು ತಡೆರಹಿತ, ಗುಣಮಟ್ಟದ ಸೇವೆಗಳನ್ನು ಎಲ್ಲ ಬ್ರಾಂಡ್‍ಗಳಿಗೂ ಪಡೆಯುತ್ತಾರೆ. ಈ ಉದ್ಯಮಗಳು ವಿವಿಧ ವರ್ಕ್‍ಶಾಪ್‍ಗಳಲ್ಲಿ ದುಬಾರಿ ವೆಚ್ಚಗಳು ಮತ್ತು ಸಮತೋಲನವಿಲ್ಲದ ಸೇವೆಗಳ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ಭರವಸೆ ನಮ್ಮದು. ಭವಿಷ್ಯದಲ್ಲೂ ನಾವು ಗ್ರಾಹಕರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ'' ಎಂದರು.

ಬಿಯಾಂಡ್ ಗರಾಜ್ ಬೈಕ್ ಮತ್ತು ಕಾರು ಸರ್ವೀಸ್ ಉದ್ಯಮ
ಬಿಯಾಂಡ್ ಗರಾಜ್ ಬೈಕ್ ಮತ್ತು ಕಾರು ಸರ್ವೀಸ್ ಉದ್ಯಮದಲ್ಲಿ ಪ್ರಮುಖ ಹೆಸರಾಗಿದ್ದು ಅದು ಗುಣಮಟ್ಟದ ಸೇವೆಗಳು ಮತ್ತು ಬಿಡಿಭಾಗಗಳಿಗೆ ಖ್ಯಾತಿ ಪಡೆದಿದೆ. ಕಂಪನಿಯು ಗ್ರಾಹಕರ ಎಲ್ಲ ವಾಹನ ರಿಪೇರಿ ಮತ್ತು ನಿರ್ವಹಣೆಯ ಅಗತ್ಯಗಳಿಗೆ ಒನ್-ಸ್ಟಾಪ್ ತಾಣವಾಗಲು ಬಯಸುತ್ತಿದೆ. ಇದು ತನ್ನ ಕಾರ್ಯಾಚರಣೆಗಳಲ್ಲಿ ಸಂಪೂರ್ಣ ಪಾರದರ್ಶಕತೆ ಸಾಧಿಸಲು ಶ್ರಮಿಸುತ್ತಿದೆ ಮತ್ತು ಗ್ರಾಹಕರ ಸಂತೃಪ್ತಿ ಹಾಗೂ ಸೇವೆಯನ್ನು ತಳಹದಿಯಾಗಿಸಿದೆ. ಈ ಬ್ರಾಂಡ್ ಸತತವಾಗಿ ಗ್ರಾಹಕರ ಸಮಸ್ಯೆಗಳನ್ನು ನಿವಾರಿಸುವ ಮೂಲಕ ರಿಪೇರಿ ಮತ್ತು ನಿರ್ವಹಣೆಯ ಉದ್ಯಮದಲ್ಲಿ ಸತತವಾಗಿ ಮತ್ತು ಗುರುತಿಸುವಂತೆ ವಿಕಾಸಗೊಳ್ಳುವ ಗುರಿ ಹೊಂದಿದೆ.
Recommended Video

ಕಾರು ಮತ್ತು ಬೈಕ್‍ನ ಅತ್ಯುತ್ತಮ ರಿಪೇರಿ ಮತ್ತು ಸೇವೆ
ಬಿಯಾಂಡ್ ಗರಾಜ್ : ಬಿಯಾಂಡ್ ಗರಾಜ್ ಕಾರು ಮತ್ತು ಬೈಕ್‍ನ ಅತ್ಯುತ್ತಮ ರಿಪೇರಿ ಮತ್ತು ಸೇವೆಗಳನ್ನು ಮಾತ್ರ ಉದ್ದೇಶಿಸಿರುವ ಸಮಗ್ರ ಪ್ಲಾಟ್‍ಫಾರಂ ಆಗಿದೆ. ಅವರ ಸೇವೆಗಳು ಕಾರು ಮತ್ತು ಬೈಕ್‍ಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿವೆ. ಇದರಲ್ಲಿ ಸಾಮಾನ್ಯ ಸರ್ವೀಸ್, ಪೇಂಟಿಂಗ್, ಡೆಂಟಿಂಗ್ ಮತ್ತು ವಿಮೆ ಕೆಲಸ ಇತ್ಯಾದಿಗಳು ಒಳಗೊಂಡಿವೆ.












Click it and Unblock the Notifications