ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲೂ EV ಚಾರ್ಜಿಂಗ್ ಕಿಯೋಸ್ಕ್

|
Google Oneindia Kannada News

ಬೆಂಗಳೂರು, ಸೆ. 6: ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನ ಬಳಕೆಗೆ ಬೇಕಾದ ಮೂಲ ಸೌಕರ್ಯ ಒದಗಿಸುವತ್ತ ಕೇಂದ್ರ ಸರ್ಕಾರ ಹೆಜ್ಜೆ ಇರಿಸುತ್ತಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಪೆಟ್ರೋಲ್ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಚಾರ್ಜಿಂಗ್ ಕಿಯೋಸ್ಕ್ ಆರಂಭಿಸಲು ಒಪ್ಪಿಗೆ ಸಿಕ್ಕಿದೆ.

Recommended Video

Namma Metro ಇಂದಿನಿಂದ ಪುನರಾರಂಭ, ಆದರೆ ಷರತ್ತುಗಳು ಅನ್ವಯ | Oneindia Kannada

ಹೀಗಾಗಿ, ಸರಿ ಸುಮಾರು 69,000 ಪೆಟ್ರೋಲ್ ಪಂಪ್ ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟವನ್ನು ಕಾಣಬಹುದು ಎಂದು ಇಂಧನ ಸಚಿವ ಆರ್​.ಕೆ.ಸಿಂಗ್ ಅವರು ಹೇಳಿದರು. ಇಂಧನ ಸಚಿವಾಲಯದ ಹೊಸ ಮಾರ್ಗಸೂಚಿ ಪ್ರಕಾರ, ಎಲ್ಲ ಪೆಟ್ರೋಲ್ ಬಂಕ್​ಗಳಲ್ಲಿ ಒಂದು ಪರ್ಯಾಯ ಇಂಧನ ಭರ್ತಿಗೆ ವ್ಯವಸ್ಥೆ ಮಾಡಬೇಕು, Company-Owned, Company-Operated (COCO) ಪೆಟ್ರೋಲ್​ ಬಂಕ್​ಗಳು EV ಚಾರ್ಜಿಂಗ್ ಸೌಲಭ್ಯ ಒದಗಿಸಬೇಕು ಎಂದಿದ್ದಾರೆ.

ನಿಮ್ಮ ಇ-ವಾಹನಗಳನ್ನು ಇನ್ಮುಂದೆ ಬೆಸ್ಕಾಂ ಚಾರ್ಜ್ ಮಾಡುತ್ತೆನಿಮ್ಮ ಇ-ವಾಹನಗಳನ್ನು ಇನ್ಮುಂದೆ ಬೆಸ್ಕಾಂ ಚಾರ್ಜ್ ಮಾಡುತ್ತೆ

ಆರಂಭಿಕ ಹಂತದಲ್ಲಿ ಬೆಂಗಳೂರು, ದೆಹಲಿ ಎನ್ ಸಿಆರ್​, ಕೋಲ್ಕತಾ, ಚೆನ್ನೈ, ಹೈದರಾಬಾದ್​,ವಡೋದರಾ, ಭೋಪಾಲ್ ಮುಂತಾದೆಡೆ EV ಚಾರ್ಜಿಂಗ್ ಕಿಯೋಸ್ಕ್ ಆರಂಭಿಸಲಾಗುತ್ತದೆ. ಈ ಮೂಲಕ ಇ ಮೊಬಿಲಿಟಿಗೆ ಹೆಚ್ಚಿನ ಬೆಂಬಲ ದೊರೆಯಲಿದೆ ಎಂದು ಸಚಿವಾಲಯ ಹೇಳಿದೆ.

Bengaluru to get EV charging kiosks, Total 69,000 petrol pumps in India

2030ರ ವೇಳೆಗೆ ಸಾಗಣೆ ವ್ಯವಸ್ಥೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಪ್‌ಕಾರ್ಟ್ ಸಂಕಲ್ಪ2030ರ ವೇಳೆಗೆ ಸಾಗಣೆ ವ್ಯವಸ್ಥೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಪ್‌ಕಾರ್ಟ್ ಸಂಕಲ್ಪ

ಎಸಿ ಚಾರ್ಜಿಂಗ್ ವ್ಯವಸ್ಥೆಯನ್ನು ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಬಿಬಿಎಂಪಿ, ಬಿಎಂಆರ್ ಸಿಎಲ್, ಬಿಎಂಟಿಸಿಗಳಲ್ಲಿ ಅಳವಡಿಸಲು ಈ ಹಿಂದೆ ಕರ್ನಾಟಕ ಸರ್ಕಾರ ಯತ್ನಿಸಿತ್ತು. ಈ ಮೂಲಕ ಸರ್ಕಾರಿ ನೌಕರರು ಎಲೆಕ್ಟ್ರಾನಿಕ್ ವಾಹನಗಳ ಸವಾರರು ತಮ್ಮ ಬ್ಯಾಟರಿಗಳನ್ನು ಸುಲಭವಾಗಿ ಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು.

English summary
The Union government is mulling setting up at least one electric vehicle (EV) charging kiosk each at nearly 69,000 petrol pumps across the country including Bengaluru in the first phase to induce people to go for electric mobility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X