• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಂಪ್ರದಾಯಿಕ ವಿಲ್ಲಾಗಳ ಒಂದು ರೌಂಡ್ ಹಾಕ್ಕೊಂಡ್ ಬನ್ನಿ

|

ಬೆಂಗಳೂರು, ಸೆಪ್ಟೆಂಬರ್. 28: ಸಾಂಪ್ರದಾಯಿಕ ರೀಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿರುವ ಮೇಸನ್ಸ್ ಯಲಹಂಕ- ಜಕ್ಕೂರು ರಸ್ತೆಯಲ್ಲಿ ತನ್ನ ಮೊದಲ ಯೋಜನೆ' ಮೇಸನ್ಸ್ ಉದ್ಭವ್' ಮೂಲಕ ವಿಲ್ಲಾಗಳ ಸಾಲನ್ನು ತೆರೆದಿಟದ್ಟಿದೆ. ಸಾಂಪ್ರದಾಯಿಕ ವಾಸ್ತುಶಿಲ್ಪವನ್ನು ಆಧುನಿಕ ಸನ್ನಿವೇಶಕ್ಕೆ ತಕ್ಕಂತೆ ನಿರ್ಮಿಸಲಾಗಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ.

ಇತ್ತೀಚೆಗೆ ನಡೆದ ವಿಲ್ಲಾಗಳ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಸನ್ಸ್ ಸಿಇಒ ರೋಹಿತ್ ಶೃಂಗೇರಿ, ನಾವು ಶ್ರೀಮಂತ ಸಾಂಪ್ರದಾಯಿಕ ನಿರ್ಮಾಣ ವಾಸ್ತುಶಿಲ್ಪವನ್ನು ಹೊಂದಿದ್ದು, ಅದರಲ್ಲಿ ಸ್ಥಳೀಯ ವಾತಾವರಣ ಹಾಗೂ ಸ್ಥಳೀಯ ಸಂಪನ್ಮೂಲ ಹಾಗೂ ಸ್ಥಳೀಯವಾಗಿ ಲಭ್ಯವಿರುವ ಕರಕುಶಲ ಕಲೆಯನ್ನು ಬಳಸುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಆಧುನಿಕತೆಯ ಹೆಸರಲ್ಲಿ ಇವೆಲ್ಲವೂ ಮಾಯವಾಗುತ್ತಿದೆ. ಮೇಸನ್ಸ್ ಉದ್ಭವವು "ಹೊಸತರ ಉದಯ" ಎನ್ನುವ ಅರ್ಥವನ್ನು ಹೊಂದಿದೆ ಎಂದು ಹೇಳಿದರು.

Bengaluru: Maysons Realty's traditional villas

ಇಲ್ಲಿನ ಪ್ರತಿಯೊಂದು ಮನೆಗೂ ವಿವಿಧ ಹೂವಿನ ಹೆಸರನ್ನು ಇಡಲಾಗಿದೆ ಹಾಗೂ ನಾಲ್ಕು ಬೆಡ್ ರೂಂಗಳನ್ನು ಹೊಂದಿದೆ. ಪ್ರತಿ ಮನೆಗಳು 3850ರಿಂದ 4250 ಚದರ ಅಡಿಯನ್ನು ಹೊಂದಿದೆ. ಪ್ರತಿ ಮನೆಗಳು ಉತ್ತರ ಹಾಗೂ ದಕ್ಷಿಣಾಭಿಮುಖವಾಗಿದ್ದು, ನೈಸರ್ಗಿಕ ಬೆಳಕು ಮನೆ ಪೂರ್ತಿ ಹರಿದು ಹೋಗುವಂತೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. [ಹೆಚ್ಚಿನ ಮಾಹಿತಿಗೆ ತಾಣ ವೀಕ್ಷಣೆ ಮಾಡಬಹುದು]

ವಿಲ್ಲಾಗಳ ವಿಶೇಷತೆಗಳು

* ಹೊರಗಡೆ ಕಾಣುವಂತಹ ಇಟ್ಟಿಗೆ, ಆಕ್ಸೈಡ್ ಫಿನಿಶ್, ಹಾಗೂ ಲೈಮ್ ಪ್ಲಾಸ್ಟರ್ ಸಹಯೋಗದೊಂದಿಗೆ ಈ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಎಲ್ಲ ಮನೆಗಳ ನಿರ್ಮಾಣದಲ್ಲಿ ಮರವನ್ನು ಬಳಸಲಾಗಿದೆ.

* ಕೆಳ ಅಂತಸ್ತಿನ ಲಿವಿಂಗ್ ಏರಿಯಾವು ಉದ್ದನೆಯ ಗಾರ್ಡನ್ ಪ್ರದೇಶಕ್ಕೆ ತೆರೆದಿದ್ದು, ಕಾಂಪೌಂಡ್ ಹಾಲ್ ತನಕ ಕಾಣುತ್ತದೆ.

* ಸೋಲಾರ್ ಪ್ಯಾನಲ್ ಗಳನ್ನು ಮನೆಗಳಲ್ಲಿ ಅಳವಡಿಸಲಾಗಿದ್ದು, ಶಕ್ತಿಯ ಸ್ವಾವಲಂಬನೆ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ನೈಸರ್ಗಿಕ ರೀತಿಯಲ್ಲಿ ಆಧುನಿಕತೆಯನ್ನು ಬಳಸಿಕೊಳ್ಳಲಾಗಿದೆ.

* ಅಡುಗೆ ಮನೆಯಲ್ಲಿನ ತ್ಯಾಜ್ಯವು ಕಾಂಪೊಸ್ಟ್ ಗೊಬ್ಬರವಾಗುವಂತೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಮನೆ ಕೊಳ್ಳುವವರಿಗೆ ಬೋನಸ್ ಕೊಡುಗೆ

* ಜಕ್ಕೂರು ಕೆರೆ ವಿಲ್ಲಾದಿಂದ ಕೆಲವೇ ಕಿಲೋಮಿಟರ್ ದೂರದಲ್ಲಿದ್ದು, ಪಕ್ಷಿ ಪ್ರಿಯರಿಗೆ ಪ್ರತಿ ನಿತ್ಯವೂ ಹಕ್ಕಿಗಳನ್ನು ನೋಡುವ ಅವಕಾಶವು ಸಿಗುತ್ತದೆ.

* ಆಧುನಿಕ ಸ್ಟೇಟ್ ಆಫ್ ಆರ್ಟ್ ಆಟೋಮೇಷನ್ ವ್ಯವಸ್ಥೆಯನ್ನು ಈ ಮನೆಗಳಿಗೆ ಅಳವಡಿಸಲಾಗಿದೆ.

* ಸ್ಟೈಲಿಶ್ ಆಗಿರುವ ಕ್ಲಬ್ ಹೌಸ್ ಇಲ್ಲಿದ್ದು, ಇತ್ತೀಚಿನ ಜಿಮ್, ಸ್ವಿಮ್ಮಿಂಗ್ ಪೂಲ್ ಹಾಗೂ ಮನರಂಜನಾ ಪ್ರದೇಶವನ್ನು ಇದು ಹೊಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು real estate ಸುದ್ದಿಗಳುView All

English summary
Maysons Realty makes its debut in the real estate landscape of Bengaluru with Maysons Udbhava an exclusive set of row villas located on the Yelahanka-Jakkur Road. These row homes will epitomize the very premise of Maysons – traditional architecture in the modern context. Maysons Udbhava is a cluster of limited edition row houses, set in a linear fashion independent from one another. Each of the homes, named after flowers, is of 4 bedrooms. The homes range over a 3850sqft to 4250ft.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more