ವಿಪ್ರೋಗೆ ಜೂನ್ 30ರ ತ್ರೈ ಮಾಸಿಕದಲ್ಲಿ 2,121 ಕೋಟಿ ನಿವ್ವಳ ಲಾಭ

ಬೆಂಗಳೂರು, ಜುಲೈ 20: ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಸೇವೆಗಳ ರಫ್ತುದಾರ ಕಂಪೆನಿ ವಿಪ್ರೋದ ಮೊದಲ ತ್ರೈಮಾಸಿಕ ಲಾಭವು ಮಾರುಕಟ್ಟೆ ತಜ್ಞರ ನಿರೀಕ್ಷೆಯನ್ನೂ ಮೀರಿದೆ.

ಬ್ಯಾಂಕಿಂಗ್, ಫೈನಾನ್ಷಿಯಲ್ ಸರ್ವೀಸಸ್ ಮತ್ತು ಇನ್ಷೂರೆನ್ಸ್ ನಿಂದ ಬಂದ ಹೆಚ್ಚುವರಿ ಆದಾಯದಿಂದ ಈ ಮಟ್ಟದ ಸಾಧನೆ ಸಾಧ್ಯವಾಗಿದೆ. ಮಾರ್ಚ್ ನಿಂದ ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈ ಮಾಸಿಕದಲ್ಲಿ ಕಂಪೆನಿಯ ನಿವ್ವಳ ಲಾಭವು ಒಂದು ವರ್ಷದ ಹಿಂದೆ ಇದೇ ಅವಧಿಗೆ 2077 ಕೋಟಿಯಿತ್ತು. ಈ ಬಾರಿ ಅದೇ ಅವಧಿಗೆ 2,121 ಕೋಟಿಗೆ ಏರಿಕೆ ಆಗಿದೆ ಎಂದು ಶುಕ್ರವಾರ ಬೆಂಗಳೂರು ಮೂಲದ ವಿಪ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿ ತಜ್ಞರು 1952 ಕೋಟಿ ರುಪಾಯಿ ಲಾಭವಾಗಬಹುದು ಎಂಬ ಅಂದಾಜಿತ್ತು. ಐಟಿ ಸೇವೆಯ ಆದಾಯವು 5% ಪ್ರಗತಿ ಕಂಡು, ಮೊದಲ ತ್ರೈಮಾಸಿಕದಲ್ಲಿ 13,700 ಕೋಟಿ ಆದಾಯ ಬಂದಿದೆ. ಇನ್ನು ಬ್ಯಾಂಕಿಂಗ್, ಫೈನಾನ್ಷಿಯಲ್ ಸರ್ವೀಸ್ ಹಾಗೂ ಇನ್ಷೂರೆನ್ಸ್ ಉದ್ಯಮ 17.5% ಬೆಳವಣಿಗೆ ಕಂಡು 4110 ಕೋಟಿ ಆದಾಯ ತಂದಿದೆ.

Bengaluru based Wipro Q1 profit rises to ₹2,121 crore

ಸೆಪ್ಟೆಂಬರ್ ಮೂವತ್ತರ ತ್ರೈಮಾಸಿಕಕ್ಕೆ ಐಟಿ ಸೇವೆಗಳ ಆದಾಯ 0.3-2.3% ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ವಿಪ್ರೋ ಹೇಳಿದೆ. ಇನ್ನು ಆದಾಯವು 2.01 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 2.05 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆ ಆಗುವ ನಿರೀಕ್ಷೆಯಿದೆ ಎಂದು ಕಂಪೆನಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+