ಫೇಸ್ ಬುಕ್ ಜೊತೆ ಕೈಜೋಡಿಸಿದ ಬೆಂಗಳೂರಿನ ಬಾಬಾ ಜಾಬ್ಸ್.ಕಾಂ

Posted By:
Subscribe to Oneindia Kannada

ಬೆಂಗಳೂರು, ಡಿ.07: ಬೆಂಗಳೂರು ಮೂಲದ ಆನ್ ಲೈನ್ ಉದ್ಯೋಗ ತಾಣ ಬಾಬಾಜಾಬ್ ಡಾಟ್ ಕಾಮ್ ಮಹತ್ತರ ಬೆಳವಣಿಗೆಯೊಂದರಲ್ಲಿ ಫೇಸ್ ಬುಕ್ ನ ಎಸ್‍ಎಂಇ ಇಂಡಿಯಾ ಕೌನ್ಸಿಲ್ ನ ಸದಸ್ಯನಾಗಿ ಗುರುತಿಸಲ್ಪಟ್ಟಿದೆ.

ಫೇಸ್‍ಬುಕ್ ನಿಂದ ಏಷ್ಯಾ ಫೆಸಿಫಿಕ್ ನಲ್ಲಿ ನಿರ್ಮಿತ ವ್ಯವಸ್ಥೆ ಇದಾಗಿದೆ. ಫೇಸ್‍ಬುಕ್ ಈ ವೇದಿಕೆಯಲ್ಲಿ 20 ಲಕ್ಷಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ವಹಿವಾಟುದಾರರನ್ನು ಹೊಂದಿದೆ.

ಸಣ್ಣ ಉದ್ಯಮಗಳಿಗೆ ನಾನಾ ವಿಧದಲ್ಲಿ ಸಹಾಯ ಮಾಡಲು ಎಸ್‍ಎಂಇ ಕೌನ್ಸಿಲ್ ಅನ್ನು ಅಭಿವೃದ್ಧಿಗೊಳಿಸಿದೆ. ಇದು ಜಾಗತಿಕವಾಗಿ ಫೇಸ್‍ಬುಕ್ ನಿಂದ ಸ್ಥಾಪಿತ ಎರಡನೆ ಎಸ್‍ಎಂಇ ಕೌನ್ಸಿಲ್ ಇದಾಗಿದೆ. ಮೊದಲನೆಯದು ಅಮೆರಿಕದಲ್ಲಿದೆ. ಜಾಗತಿಕವಾಗಿ 45 ದಶಲಕ್ಷ ಎಸ್‍ಎಂಇಗಳು ಉದ್ಯಮ ಅಭಿವೃದ್ಧಿಗೆ ಫೇಸ್‍ಬುಕ್ ಪುಟವನ್ನು ಬಳಸುತ್ತಿದ್ದಾರೆ. [ಬೆಂಗಳೂರು : ಬಾಬಾ ಜಾಬ್ಸ್ ಉದ್ಯೋಗಿ ಆತ್ಮಹತ್ಯೆ]

Babajob dot com joins Facebook SME India Council

ಬಾಬಾಜಾಬ್ ಡಾಟ್‍ಕಾಂ ಬಗ್ಗೆ ಫೇಸ್‍ಬುಕ್ ಸಿಒಒ ಶೆರ್ಲ್ ಸ್ಯಾಂಡ್‍ಬರ್ಗ್ : ಭಾರತದ ಉದ್ಯೋಗ ಹುಟುಕಾಟ ತಾಣವಾಗಿದ್ದು ಇದು ಇಂಟರ್ನೆಟ್ .ಆರ್ಗ್ ನ ಉಚಿತ ಸೇವೆ ಬಳಸುತ್ತಿದೆ. 60,000 ಜನ ತಾಣಕ್ಕೆ ಭೇಟಿ ನೀಡಿದರೆ ಶೇ.10ರಷ್ಟು ಮಂದಿ ಉದ್ಯೋಗಕ್ಕೆ ಅರ್ಜಿ ಹಾಕುತ್ತಾರೆ. ಅಂದರೆ 6,000 ಜನ ಉದ್ಯೋಗಕ್ಕೆ ಅರ್ಜಿ ಹಾಕುವ ಅವಕಾಶ ಪಡೆಯುತ್ತಾರೆ ಎಂದು ಪೋಸ್ಟ್ ವೊಂದರಲ್ಲಿ ಬರೆದುಕೊಂಡಿದ್ದಾರೆ.

ಬಾಬಾಜಾಬ್ ಡಾಟ್‍ಕಾಂನ ಸಹಸಂಸ್ಥಾಪಕ ಮತ್ತು ಸಿಒಒ ವೀರ್ ಕಶ್ಯಪ್ ಮಾತನಾಡಿ, ಇದು ಕಂಪನಿಗೆ ಮಹತ್ತರ ಹೆಜ್ಜೆ. ತಂತ್ರಜ್ಞಾನ ಮತ್ತು ಇಂಟರ್ನೆಟ್ ಉತ್ಸಾಹಿ ಉದ್ಯೋಗ ಹುಡುಕಾಟದಾರರನ್ನು ಮತ್ತು ಉದ್ಯೋಗದಾತರನ್ನು ಸಂಪರ್ಕಿಸುತ್ತದೆ ಎಂದು ನಾವು ನಂಬಿದ್ದೇವೆ.

ಬಾಬಾ ಜಾಬ್ ನ ಪ್ರತಿಭಾ ವಿಭಾಗದ ಮುಖ್ಯಸ್ಥೆ ಮಾಯಾ ಚಂದ್ರಶೇಖರನ್ ಕೌನ್ಸಿಲ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಜೊತೆಗೆ ಅಮೃತ್ ವಾಲ್ವೆಕರ್(ವ್ರಾಪಿಸ್ಟ್ರಿ), ಅಂಕ ನಾರಾಯಣ್(ಬ್ರಾಸ್ ಟ್ರಾಕ್ಸ್), ಅನಿತಾ ನಾಯಕ್(ಪ್ಲೌರಡ್) ಗೌತಮ್ ಇವಟುರಿ(ಮೆರಾಡಾಕ್ಟರ್), ಆರ್.ಬಾಲಕೃಷ್ಣನ್(ಜಿಐಒ ಅಡ್ವೆಂಚರ್ಸ್) ಮತ್ತು ವಿವೇಕ್ ಐಯ್ಯರ್(ಇಂಗ್ಲಿಷ್ ದೊಸ್ತ್) ಇದ್ದಾರೆ.

ಮಾಯಾ ಪ್ರತಿಕ್ರಿಯಿಸಿ, ಈ ಪಾಲುದಾರಿಕೆ ನಮ್ಮ ಸಂಸ್ಥೆ ಬ್ಲೂಕಾಲರ್ ಆಗುವ ಕನಸಿಗೆ ಸಹಕಾರಿ. ಉದ್ಯೋಗ ಹುಡುಕಾಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಈ ಹೆಜ್ಜೆಯ ಒಂದು ಭಾಗವಾಗಲು ಅತ್ಯಂತ ಸಂತಸವಾಗುತ್ತಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru based online job portal babajob.com has pertnered with Facebook to help small ventures share and discuss ideas to grow their enterprises on the SME India Council. SME India Council is a Facebook initiative to help small ventures from various industries
Please Wait while comments are loading...