Get Updates
Get notified of breaking news, exclusive insights, and must-see stories!

ಸಕಲೇಶಪುರದಲ್ಲಿ ಸುಂದರ ಕಾಫಿ ತೋಟದ ಮಾಲಿಕರಾಗಿರಿ

ಸದಾ ತಂಪು ತಂಪು ವಾತಾವರಣ, ಎತ್ತೆತ್ತ ನೋಡಿದತ್ತ ಬೆಚ್ಚನೆ ಅನುಭವ ನೀಡುವ ಹಚ್ಚ ಹಸಿರಿನ ನೋಟ, ಕಣ್ಣು ಹಾಯಿಸಿದತ್ತ ಮುದ ನೀಡುವ ಗುಡ್ಡ ಬೆಟ್ಟ, ಕಾಫಿ ಹೂವಿನ ಘಮಲು, ಇನ್ನು ಚಳಿಗಾಲದಲ್ಲಂತೂ ಭೂಮಿಯ ಮೇಲಿದ್ದೆವೋ, ಸ್ವರ್ಗವೇ ಧರೆಗಿಳಿದು ಬಂದಂತಿದೆಯೋ ಎಂಬಂತಹ ಅನುಭವ.

Click this for more details

ಇಂಥ ತಾಣ ಇರುವುದು ಮತ್ತೆಲ್ಲೂ ಅಲ್ಲ, ಕರ್ನಾಟಕದ ಹಾಸನ ಜಿಲ್ಲೆಯ ಮಲೆನಾಡಿನ ತಾಣ ಸಕಲೇಶಪುರದಲ್ಲಿ. ಇಂಥ ಹಸಿರಿನಿಂದ ತುಂಬಿದ ಸುಂದರ ಪರಿಸರದಲ್ಲಿ, ಶಾಂತಿಯುತ ವಾತಾವರಣದಲ್ಲಿ, ಒಂದು ನಿವೇಶನವನ್ನೋ ಜಾಗವನ್ನೋ ಕೊಂಡುಕೊಂಡು ನಿಶ್ಚಿಂತೆಯಿಂದ ವಾಸಿಸಬೇಕು ಎಂಬುದು ಹಲವು ಧನವಂತರ ಕನಸಾಗಿರುತ್ತದೆ.

ಇಂಥದೊಂದು ಕನಸನ್ನು ನನಸು ಮಾಡಲು ಮುಂದೆ ಬಂದಿದೆ ವೈಬೆಜ್ ಎಸ್ಟೇಟ್ಸ್. ವೈಬೆಜ್ ಎಸ್ಟೇಟ್ ನಿಂದ ಪ್ರಮೋಟ್ ಆಗುತ್ತಿರುವ, ಪ್ರಕೃತಿ ಸಿರಿಯಿಂದ ಕಂಗೊಳಿಸುವ ಸಕಲೇಶಪುರದಲ್ಲಿರುವ ಎಸ್ಟೇಟ್ ಗಳು ಆ ರೀತಿ ಕನಸು ಕಾಣುವವರಿಗೆ ಹೇಳಿ ಮಾಡಿಸಿದಂತಿವೆ.

ಈ ಎಸ್ಟೇಟ್ ಗಳನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸಲಾಗುತ್ತಿದ್ದು, ಎಲ್ಲ ಸೌಲಭ್ಯಗಳನ್ನು ಮತ್ತು ಎಲ್ಲ ಬಗೆಯ ಸೇವೆಗಳನ್ನು ಹೊಂದಿವೆ. ಈ ಎಸ್ಟೇಟ್ ಗಳಲ್ಲಿ ಕಳೆದ 5 ವರ್ಷಗಳಿಂದ ಕಾಫಿಯನ್ನು ಉತ್ಪಾದಿಸಲಾಗುತ್ತಿದ್ದು, ನೋಡಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಇದನ್ನು ನಿರ್ವಹಿಸುತ್ತಿರುವ ಅಸೋಸಿಯೇಟ್ ಮ್ಯಾನೇಜ್ಮೆಂಟ್ ಕಂಪನಿ ಎಸ್ಟೇಟ್ ನಿರ್ವಹಣೆಯ ಬಗ್ಗೆ ಕಾಲಕಾಲಕ್ಕೆ ಎಲ್ಲ ಮಾಹಿತಿಗಳನ್ನು ಒದಗಿಸುತ್ತಿರುತ್ತದೆ. ಅಲ್ಲಿಯ ಪರಿಸ್ಥಿತಿಯಲ್ಲಿ ಏನಾದರೂ ಏರುಪೇರು ಕಂಡುಬಂದರೆ, ವಾತಾವರಣದಲ್ಲಿ ಬದಲಾವಣೆಯಾದರೆ ಕೂಡ ಮಾಹಿತಿ ರವಾನಿಸುತ್ತದೆ.

ಕಾಫಿ ಎಸ್ಟೇಟ್ ನ ನಿರ್ವಹಣೆಯ ಮಾಹಿತಿ, ಅದಕ್ಕೆ ತಗಲಿರುವ ವೆಚ್ಚ ಕೂಡ ಮಾಲಿಕರಿಗೆ ತಿಳಿಸಲಾಗುತ್ತದೆ. ಅತ್ಯಂತ ವೃತ್ತಪರತೆಯಿಂದ ನಿರ್ವಹಣೆಯನ್ನು ಮಾಡುತ್ತಿರುವುದರಿಂದ ಯಾವುದೇ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ. ಮನಸ್ಸು ಕೂಡ ನಿರಾಳವಾಗಿರುತ್ತದೆ.

ಇಂತಹ ಕಾಫಿ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಜಾಣತನವಲ್ಲವೆ? ನೀವು ಗುರುತಿಸಲಾಗಿರುವ ಕಾಫಿ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರಿಂದ ಹಣವನ್ನು ಸದ್ವಿನಿಯೋಗ ಮಾಡಿದಂತಾಗುತ್ತದೆ ಮತ್ತು ಉತ್ತಮ ಆದಾಯವನ್ನೂ ಪಡೆಯಬಹುದು. ಬೆಲೆ ಎಕರೆಗೆ 25 ಲಕ್ಷ ರುಪಾಯಿಯಿಂದ ಆರಂಭ.

ಸಕಲೇಶಪುರ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಮುಂಗಾರು ಮಳೆಯ ಚಿತ್ರಣ ಜ್ಞಾಪಕಕ್ಕೆ ಬರುವುದಿಲ್ಲವೆ? ಹಾಸನ ಜಿಲ್ಲೆಯಲ್ಲಿರುವ ಸಕಲೇಶಪುರ ಪ್ರಸಿದ್ಧ ಗಿರಿಧಾಮವಾಗಿ ಹೆಸರುವಾಸಿಯಾಗಿದೆ. ಅಲ್ಲಿಯ ಸ್ನಿಗ್ಧ ಸೌಂದರ್ಯ, ಹಚ್ಚಹಸಿರುವ ಪ್ಲಾಂಟೇಷನ್ ಗಳು, ಮುದ ನೀಡುವ ಗುಡ್ಡಬೆಟ್ಟಗಳು, ಪ್ರಣಯಸದೃಶ ವಾತಾವರಣ ಹಾಲಿಡೇಗೆ ಹೇಳಿ ಮಾಡಿಸಿದಂತಿದೆ.

ಚಾರಣಿಗರಿಗೆ ಫೆವರಿಟ್ ತಾಣವಾಗಿರುವ ಸಕಲೇಶಪುರ ಸಮುದ್ರಮಟ್ಟದಿಂದ 949 ಮೀಟರ್ (3,113 ಚದರ ಅಡಿ) ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳಲ್ಲಿ ಇದು ಸಮಶೀತೋಷ್ಣದ ಹವಾಮಾನವನ್ನು ಹೊಂದಿರುವ ಕಾರಣ, ಇಲ್ಲಿ ಬೆಳೆಗಳಿಂದ ಕಾಂಚಾಣ ಝಣಝಣ. ಸುತ್ತಲಿನ ಹಳ್ಳಿಗಳಲ್ಲಿರುವ ಕಾಫಿ ಬೆಳೆಗಾರರು ಕೂಡ ಕಾಫಿ ಮಾರಾಟ ಮಾಡಲು ಸಕಲೇಶಪುರಕ್ಕೆ ಬರುತ್ತಾರೆ. ಇನ್ನೇಕೆ ತಡ, ವೈಬೆಜ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿ, ಜಾಣತನ ಮೆರೆಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+