ದೇಶದೆಲ್ಲೆಡೆ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳ ರಜಾ ದಿನ ಎಷ್ಟಿದೆ?
ನವದೆಹಲಿ, ನವೆಂಬರ್ 26: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ನವೆಂಬರ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಡಿಸೆಂಬರ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ, ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಮುಗಿದಿದ್ದು, ಬಹುತೇಕ ಎಲ್ಲೆಡೆ ಹಿಂಪಡೆಯಲಾಗಿದೆ. ಜನ ಜೀವನ, ಕಚೇರಿಗಳು ಸಹಜ ಸ್ಥಿತಿಗೆ ಮರಳಿವೆ.
ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಳೆದ ತಿಂಗಳಲ್ಲಿ ಕಡಿಮೆ ರಜೆ ದಿನಗಳಿತ್ತು. ನವೆಂಬರ್ ತಿಂಗಳಲ್ಲಿ ಹಬ್ಬದ ದೆಸೆಯಿಂದ ಹೆಚ್ಚಿನ ರಜೆ ಸಿಕ್ಕಿತ್ತು. ನವೆಂಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 17 ದಿನಗಳ ರಜೆ ಸಿಕ್ಕರೂ ಕರ್ನಾಟಕದಲ್ಲಿ ದೀಪಾವಳಿ, ಕನಕದಾಸ ಜಯಂತಿ ದಿನಗಳಂದು ಮಾತ್ರ ರಜೆ ಇತ್ತು. ದೇಶದೆಲ್ಲೆಡೆ ಡಿಸೆಂಬರ್ ತಿಂಗಳಲ್ಲಿ ಒಟ್ಟಾರೆ, 4 ಭಾನುವಾರದ ರಜೆ ಸೇರಿ 16 ದಿನ ರಜೆ ಇರಲಿದೆ.
ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.

ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ, ಆರ್‌ಬಿಐ ಕಡ್ಡಾಯ ರಜೆ ದಿನಗಳಲ್ಲೂ ಕೆಲವು ನಿರ್ಬಂಧಿತ ಸೇವೆಗಳು ಲಭ್ಯವಿರಲಿದ್ದು, ಆನ್ ಲೈನ್ ಸೇವೆ ಕೂಡಾ ಹಲವು ಬ್ಯಾಂಕುಗಳು ನೀಡುತ್ತಿವೆ. ಇನ್ನು ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ.
ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ಗಮನಿಸಿ: ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದು ರಜೆ ಇರಲಿದೆ. ಮಿಕ್ಕಂತೆ ವಿವಿಧ ರಾಜ್ಯಗಳ ರಜಾ ದಿನಗಳ ಬಗ್ಗೆ ವಿವರ ಮುಂದಿದೆ..
| ಡಿಸೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ | |||
|---|---|---|---|
| ದಿನ | ದಿನಾಂಕ | ರಜಾ ದಿನ | ನಗರ |
| ಡಿಸೆಂಬರ್ 01, 2021 | ಬುಧವಾರ | ರಾಜ್ಯೋತ್ಸವ | ನಾಗಲ್ಯಾಂಡ್, ಅರುಣಾಚಲ ಪ್ರದೇಶ |
| ಡಿಸೆಂಬರ್ 03, 2021 | ಶುಕ್ರವಾರ | ವಿಶ್ವ ದಿವ್ಯಾಂಗ ದಿನ/ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ | ತ್ರಿಪುರಾ ಹಾಗೂ ಗೋವಾ |
| ಡಿಸೆಂಬರ್ 05, 2021 | ಭಾನುವಾರ | ವಾರದ ರಜೆ | ಭಾರತದೆಲ್ಲೆಡೆ |
| ಡಿಸೆಂಬರ್ 11, 2021 | ಶನಿವಾರ | ಎರಡನೇ ಶನಿವಾರ | ಭಾರತದೆಲ್ಲೆಡೆ |
| ಡಿಸೆಂಬರ್ 18, 2021 | ಶನಿವಾರ | ಯು ಸೊಸೊ ಥಾಮ್ ಪುಣ್ಯ ಸ್ಮರಣೆ/ಗುರು ಘಸಿದಾಸ್ ಜಯಂತಿ | ಮೇಘಾಲಯ/ಚಂಡೀಗಢ |
| ಡಿಸೆಂಬರ್ 19, 2021 | ಭಾನುವಾರ | ಗೋವಾ ವಿಮೋಚನಾ ದಿನಾಚರಣೆ/ ವಾರದ ರಜೆ | ಗೋವಾ/ ಭಾರತದೆಲ್ಲೆಡೆ |
| ಡಿಸೆಂಬರ್ 24, 2021 | ಶುಕ್ರವಾರ | ಕ್ರಿಸ್‌ಮಸ್ ಹಬ್ಬ ಶುರು | ಮಿಜೋರಾಂ ಹಾಗೂ ಮೇಘಾಲಯ |
| ಡಿಸೆಂಬರ್ 25, 2021 | ಕ್ರಿಸ್‌ಮಸ್ | ಶನಿವಾರ, ನಾಲ್ಕನೇ ಶನಿವಾರ | ಭಾರತದೆಲ್ಲೆಡೆ |
| ಡಿಸೆಂಬರ್ 26, 2021 | ಭಾನುವಾರ | ವಾರದ ರಜೆ | ಭಾರತದೆಲ್ಲೆಡೆ |
| ಡಿಸೆಂಬರ್ 27, 2021 | ಸೋಮವಾರ | ಕ್ರಿಸ್ ಮಸ್ | ಐಜ್ವಾಲ್ |
| ಡಿಸೆಂಬರ್ 30, 2021 | ಗುರುವಾರ | ತಮು ಲೊಸಾರ್/ಯು ಕಿಯಾಂಗ್ ನಂಗ್ಬಾ | ಸಿಕ್ಕಿಂ ಹಾಗೂ ಮೇಘಾಲಯ |
| ಡಿಸೆಂಬರ್ 31, 2021 | ಶುಕ್ರವಾರ | ಹೊಸ ವರ್ಷಾಚರಣೆ | ಮಣಿಪುರ |
| ನವೆಂಬರ್ 19 | ಶುಕ್ರವಾರ | ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಾ | ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರೆಡೆ |
| ನವೆಂಬರ್ 22 | ಸೋಮವಾರ | ಕನಕದಾಸ ಜಯಂತಿ | ಕರ್ನಾಟಕ |
| ನವೆಂಬರ್ 23 | ಮಂಗಳವಾರ | ಸೆಂಗ್ ಕುತ್ಸ್ ನೆಮ್ | ಮೇಘಾಲಯ |
ಇದಲ್ಲದೆ, ಹಬ್ಬ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿ ರಜೆ ಮೇಲೆ ಹೋಗುವ ಸಂದರ್ಭ ಒದಗಬಹುದು. ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ. ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ.
ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್ ಕ್ಲೋಸಿಂಗ್. ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್‌ಬಿಐ ಸಲಹೆ ನೀಡಿದೆ.
ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್‌ಬಿಐ ಸಲಹೆ ನೀಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications