ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bank Strike : ನ.19ಕ್ಕೆ ಬ್ಯಾಂಕ್ ಮುಷ್ಕರ, ಎಟಿಎಂ ವ್ಯವಹಾರವೂ ವ್ಯತ್ಯಯ

|
Google Oneindia Kannada News

ನವದೆಹಲಿ, ನವೆಂಬರ್ 09; ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ನವೆಂಬರ್ 19ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಆದ್ದರಿಂದ ಬ್ಯಾಂಕಿಂಗ್, ಎಟಿಎಂ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ನವೆಂಬರ್‌ 19ರ ಶನಿವಾರ ದೇಶಾದ್ಯಂತ ಮುಷ್ಕರಕ್ಕೆ ಎಐಬಿಐಎ ಕರೆ ನೀಡಿದೆ. ಇದರಿಂದಾಗಿ ಬ್ಯಾಂಕ್ ತೆರೆದಿರುವ 3ನೇ ಶನಿವಾರ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

Bank Holidays : ಗ್ರಾಹಕರೇ ಗಮನಿಸಿ, ಈ ವಾರ ಮೂರು ದಿನ ಬ್ಯಾಂಕ್ ರಜೆ: ವಿವರಗಳು ಇಲ್ಲಿವೆ Bank Holidays : ಗ್ರಾಹಕರೇ ಗಮನಿಸಿ, ಈ ವಾರ ಮೂರು ದಿನ ಬ್ಯಾಂಕ್ ರಜೆ: ವಿವರಗಳು ಇಲ್ಲಿವೆ

ಎರಡು ಮತ್ತು 4ನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. 1 ಮತ್ತು 3ನೇ ಶನಿವಾರ ಮಾತ್ರ ಬ್ಯಾಂಕ್‌ಗಳು ಕಾರ್ಯ ನಿರ್ವಹಣೆ ಮಾಡುತ್ತವೆ. ಈಗ ಮೂರನೇ ಶನಿವಾರವೂ ಸಹ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಸಂಸದ ಬಿವೈ ರಾಘವೇಂದ್ರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 16 ಲಕ್ಷ ದೋಚಿದ್ದ ಮುಂಬೈ ಹ್ಯಾಕರ್ಸಂಸದ ಬಿವೈ ರಾಘವೇಂದ್ರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 16 ಲಕ್ಷ ದೋಚಿದ್ದ ಮುಂಬೈ ಹ್ಯಾಕರ್

Bank Employees Association Calls Strike On November 19

ವಿವಿಧ ಬ್ಯಾಂಕ್‌ಗಳ ಬೆಂಬಲ; ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಕರೆ ನೀಡಿರುವ ಮುಷ್ಕರಕ್ಕೆ ವಿವಿಧ ಬ್ಯಾಂಕ್‌ಗಳು ಬೆಂಬಲ ನೀಡುವ ನಿರೀಕ್ಷೆ ಇದೆ. ಬ್ಯಾಂಕ್ ಆಫ್ ಬರೋಡ ಈಗಾಗಲೇ ಬೆಂಬಲ ಘೋಷಣೆ ಮಾಡಿದೆ.

ಶಓಮಿ ಸಂಸ್ಥೆ ಬ್ಯಾಂಕ್ ಖಾತೆ ಜಪ್ತಿ, ತಡೆ ನೀಡದ ಹೈಕೋರ್ಟ್ಶಓಮಿ ಸಂಸ್ಥೆ ಬ್ಯಾಂಕ್ ಖಾತೆ ಜಪ್ತಿ, ತಡೆ ನೀಡದ ಹೈಕೋರ್ಟ್

ಸೋಮವಾರದ ಪ್ರಕಟಣೆಯಲ್ಲಿ ಬ್ಯಾಂಕ್ ಆಫ್ ಬರೋಡ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ನವೆಂಬರ್ 19ರಂದು ಮುಷ್ಕರದ ನೋಟಿಸ್ ಕೊಟ್ಟಿದ್ದಾರೆ. ನಮ್ಮ ಸದಸ್ಯರು ಬೇಡಿಕೆ ಈಡೇರಿಕೆಗಾಗಿ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದೆ.

Bank Employees Association Calls Strike On November 19

ಮುಷ್ಕರದ ದಿನ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲು ಬ್ಯಾಂಕ್ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಮುಷ್ಕರವು ನಡೆದರೆ ಕಚೇರಿ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ಬ್ಯಾಂಕ್ ತಿಳಿಸಿದೆ.

ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ಅಕ್ಟೋಬರ್‌ನಲ್ಲಿಯೇ ಬ್ಯಾಂಕ್ ಉದ್ಯೋಗಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಸೋನಾಲಿ ಬ್ಯಾಂಕ್, ಎಂಯುಎಫ್‌ಜಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಸ್ಟಾಡೆಂರ್ಡ್‌ ಚಾರ್ಟರ್ ಬ್ಯಾಂಕ್ 3,300 ಉದ್ಯೋಗಿಗಳನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನೋಟಿಸ್‌ಗಳನ್ನು ಸಹ ನೀಡಿದೆ ವರ್ಗಾವಣೆ ಮಾಡಿದೆ ಎಂದು ಹೇಳಿದ್ದರು.

ಭಾರತದಲ್ಲಿರುವ ಕೆಲವು ವಿದೇಶಿ ಬ್ಯಾಂಕ್‌ಗಳ ಮಾನವ ಸಂಪನ್ಮೂಲ ವಿಭಾಗಗಳು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದರು. ಕೋಲ್ಕತ್ತಾದ ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್ ಸಿಬ್ಬಂದಿಗಳನ್ನು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಸದಸ್ಯರು ಎಂದು ಗುರುತಿಸಲು ವಿಳಂಬ ಮಾಡುತ್ತಿದೆ ಎಂದು ದೂರಲಾಗಿದೆ.

ಹೀಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಸಿಬ್ಬಂದಿಗಳು ನವೆಂಬರ್ 19ರ ಶನಿವಾರ ಮುಷ್ಕರ ನಡೆಸಲಿದ್ದಾರೆ. ಮೂರನೇ ಶನಿವಾರ ಎಂದು ಬ್ಯಾಂಕ್ ಕೆಲಸಗಳಿಗೆ ಜನರು ಹೋಗುವ ಮೊದಲು ಮುಷ್ಕರದ ಬಗ್ಗೆ ತಿಳಿದಿರುವುದು ಒಳಿತು.

ಡಿಜಿಟಲ್ ವ್ಯವಹಾರ ನಡೆಸುವ ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಎಟಿಎಂಗೆ ಹಣ ತುಂಬುವ ವಾಹನಗಳ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ನೀಡಿದರೆ ಶನಿವಾರ ಎಟಿಎಂ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಲಿದೆ.

ಹಲವಾರು ರಜೆಗಳು; ನವೆಂಬರ್‌ 7 ರಿಂದ 14ರ ತನಕ ಬ್ಯಾಂಕ್‌ಗಳಿಗೆ ವಿವಿಧ ಕಾರಣಕ್ಕೆ ಹಲವು ರಜೆಗಳಿವೆ. ಆದರೆ ಮುಂದಿನ ವಾರವಾದ ನವೆಂಬರ್ 19ರಂದು ಸಹ ಮುಷ್ಕರದ ಕಾರಣಕ್ಕೆ ಶನಿವಾರ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ನವೆಂಬರ್ 8ರಂದು ಗುರುನಾನಕ್ ಜಯಂತಿ ಅಂಗವಾಗಿ ಬ್ಯಾಂಕ್ ರಜೆ ಇತ್ತು. ನವೆಂಬರ್‌ 11ರಂದು ಕರ್ನಾಟಕದಲ್ಲಿ ಕನಕದಾಸ ಜಯಂತಿ ಅಂಗವಾಗಿ ಸರ್ಕಾರಿ ರಜೆ ಇದ್ದು, ಬ್ಯಾಂಕ್‌ಗೆ ರಜೆ ಇರಲಿದೆ.

ನವೆಂಬರ್ 12ರಂದು ಎರಡನೇ ಶನಿವಾರ, ನವೆಂಬರ್ 13ರಂದು ಭಾನುವಾರದ ಕಾರಣ ಬ್ಯಾಂಕ್ ರಜೆ ಇರಲಿದೆ.

English summary
All India Bank Employees' Association (AIBEA) called for nationwide strike on November 19th, Saturday. Banking service may effect on strike day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X