ಏ. 30ರೊಳಗೆ ಸ್ವ ದೃಢೀಕರಣ ನೀಡದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಬ್ಲಾಕ್!

ಈ ನಿಯಮವು 2004ರ ಜುಲೈ 1ರಿಂದ 2015ರ ಆಗಸ್ಟ್ 31ರೊಳಗಿನ ಅವಧಿಯಲ್ಲಿ ನೂತನ ಬ್ಯಾಂಕ್ ಖಾತೆ ತೆರೆದಿರುವವರಿಗೆ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ, ಏಪ್ರಿಲ್ 12: ಬ್ಯಾಂಕ್ ಠೇವಣಿದಾರರು ತಮ್ಮ ಠೇವಣಿಯ ಬಗ್ಗೆ ಸ್ವಯಂ ದೃಢೀಕರಣ ಪತ್ರವನ್ನು ಬ್ಯಾಂಕ್ ಗಳಿಗೆ ಏಪ್ರಿಲ್ 30ರೊಳಗೆ ನೀಡಬೇಕಿದೆ. ತಪ್ಪಿದರೆ, ಸಂಬಂಧಪಟ್ಟವರ ಬ್ಯಾಂಕ್ ಅಕೌಂಟ್ ಗಳು ಬ್ಲಾಕ್ ಆಗಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ.

ಅಂದಹಾಗೆ, ಈ ನಿಯಮವು 2014ರ ಜುಲೈ 1ರಿಂದ 2015ರ ಆಗಸ್ಟ್ 31ರೊಳಗಿನ ಅವಧಿಯಲ್ಲಿ ನೂತನ ಬ್ಯಾಂಕ್ ಖಾತೆ ತೆರೆದಿರುವವರಿಗೆ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ವಿದೇಶದಿಂದ ಹಣ ತರಿಸಿಕೊಳ್ಳುವ ಅಥವಾ ವಿದೇಶದಲ್ಲಿರುವ ವ್ಯಕ್ತಿಗಳಿಗೆ ಹಣ ವರ್ಗಾಯಿಸುವ ವೈಯಕ್ತಿಕ ಖಾತೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.

Bank accounts will be blocked if not self-certified by April 30

ಆದಾಯ ತೆರಿಗೆ ಇಲಾಖೆಯೂ ತನ್ನ ಟ್ವಿಟರ್ ಖಾತೆಯ ಮೂಲಕ ಈ ವಿಚಾರವನ್ನು ತಿಳಿಸಿದೆ. Foreign Account Tax Compliance Ac (FACTA) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಅಂದಹಾಗೆ, ಈ ಸ್ವ ದೃಢೀಕರಣದ ವೇಳೆ ಆಧಾರ್ ಕಾರ್ಡ್ ಸಂಖ್ಯೆ ನೀಡುವುದು ಕಡ್ಡಾಯವೇನಿಲ್ಲ ಎಂದು ಬ್ಯುಸಿನೆಸ್ ಟೈಮ್ಸ್ ವರದಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+