ಎಟಿಎಂ ಕಾರ್ಡ್ ಬಿಡುಗಡೆ ಮಾಡಿದ ಬಂಧನ್ ಬ್ಯಾಂಕ್‌

Subscribe to Oneindia Kannada

ಕೋಲ್ಕತ್ತ, ಫೆಬ್ರವರಿ, 10 : ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಆರಂಭವಾಗಿರುವ ‘ಬಂಧನ್‌ ಬ್ಯಾಂಕ್‌' ಅಂತಾರಾಷ್ಟ್ರೀಯ ಡೆಬಿಟ್‌ ಕಾರ್ಡ್ ಮತ್ತು ಎನ್‌ಆರ್‌ಐ ಬ್ಯಾಂಕಿಂಗ್‌ ಸೇವೆಗೆ ಚಾಲನೆ ನೀಡಿದೆ.

ಬಂಧನ್‌ ಬ್ಯಾಂಕ್‌ ಅಂತರರಾಷ್ಟ್ರೀಯ ಡೆಬಿಟ್‌ ಕಾರ್ಡ್ ಮತ್ತು ಎನ್‌ಆರ್‌ಐ ಬ್ಯಾಂಕಿಂಗ್‌ ಸೇವೆಗೆ ಮಂಗಳವಾರ ಚಾಲನೆ ನೀಡಿದೆ. ಡೆಬಿಟ್‌ ಕಾರ್ಡ್‌ಗೆ ವೀಸಾ ಇಂಟರ್‌ನ್ಯಾಷನಲ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವೀಸಾ ಕ್ಲಾಸಿಕ್‌ ಮತ್ತು ವೀಸಾ ಪ್ಲಾಟಿನಂ ಎಂಬ ಎರಡು ಬಗೆಯ ಕಾರ್ಡ್‌ಗಳು ಲಭ್ಯವಿವೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಘೋಷ್‌ ತಿಳಿಸಿದ್ದಾರೆ.[ಬಂಧನ್ ಬ್ಯಾಂಕ್ ಎಂದರೇನು? ಯಾಕಾಗಿ?]

money

ಕಳೆದ ಆಗಸ್ಟ್‌ನಲ್ಲಿ ಬ್ಯಾಂಕ್‌ ಆರಂಭವಾಗಿದ್ದು, 612 ಶಾಖೆಗಳು, 203 ಎಟಿಎಂಗಳನ್ನು ತೆರೆದಿದೆ. ಗ್ರಾಹಕರ ಸಂಖ್ಯೆ 7.5 ಲಕ್ಷವನ್ನು ಮೀರಿದ್ದು, ಇಲ್ಲಿವರೆಗೆ 7,500 ಕೋಟಿ ರು. ಠೇವಣಿ ಸಂಗ್ರಹವಾಗಿದೆ.[ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?]

ಬಂಧನ್ ಬ್ಯಾಂಕ್ ಎಂದರೇನು?
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆಗಸ್ಟ್ 23, 2015ರಂದು ಬಂಧನ್ ಬ್ಯಾಂಕ್ ಗೆ ಚಾಲನೆ ನೀಡಿದ್ದರು. ಇದು ಆರ್ ಬಿಐ ನಿಂದ ಅನುಮತಿ ಪಡೆದುಕೊಂಡ ಮೊಟ್ಟ ಮೊದಲ ವಾಣಿಜ್ಯ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಪೂರ್ವ ಭಾರತದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ದೇಶದ ಎಲ್ಲಡೆ ವಿಸ್ತರಿಸಲಾಗತ್ತದೆ ಎಂದು ತಿಳಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bandhan Bank announced the launch of an international debit card in association with Visa. It has also begun banking services for overseas Indians. "Bandhan Bank is now ready to serve the vibrant and affluent Indian diaspora in sync with its core philosophy of serving all strata of the population," managing director and chief executive Chandra Shekhar Ghosh said.
Please Wait while comments are loading...