ಗೋದ್ರೇಜ್, ಡಾಬರ್‌ಗೆ ಬಾಬಾ ರಾಮ್‌ದೇವ್ ಶಾಕ್

Subscribe to Oneindia Kannada

ಬೆಂಗಳೂರು, ಮಾರ್ಚ್, 23: ಭಾರತೀಯರು ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಉತ್ಪನ್ನಕ್ಕೆ ಮಾರುಹೋಗಿದ್ದಾರೆ. ಕಳೆದ ಕಳೆದ 10 ತಿಂಗಳಲ್ಲಿ ಪತಂಜಲಿ ವಹಿವಾಟು ದುಪ್ಪಟ್ಟಾಗಿದೆ.

ಮಾರುಕಟ್ಟೆಯಲ್ಲಿ ಸ್ಥಾನ ಭದ್ರ ಮಾಡಿಕೊಂಡ ರಾಮ್ ದೇವ್ ಅನೇಕ ಕಂಪನಿಗಳಿಗೆ ಭರ್ಜರಿ ಹೊಡೆತ ನೀಡಿದ್ದಾರೆ. ಡಾಬರ್, ಮಾರಿಕೋ ಹಾಗೂ ಗೋದ್ರೆಜ್ ವಹಿವಾಟನ್ನು ಹರಿದ್ವಾರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಪತಂಜಲಿ ಕೆಲವೇ ದಿನದಲ್ಲಿ ಹಿಂದೆ ಹಾಕಲಿದೆ.[ಬಾಬಾ ರಾಮದೇವ್ ಹೊಸ ಸಾಹಸ, ವಿಶ್ವವಿದ್ಯಾಲಯ ಸ್ಥಾಪನೆ!]

Baba Ramdev's Patanjali may soon overtake Dabur, Marico and Godrej Consumer

2016ರ ಜನವರಿ ತಿಂಗಳ ಅಂತ್ಯಕ್ಕೆ ಪತಂಜಲಿ 3,267 ಕೋಟಿ ರು. ವಹಿವಾಟು ನಡೆಸಿದೆ. ಕಳೆದ ವರ್ಷ ಇದೇ ಅವದಿಯಲ್ಲಿ 1,587 ಕೋಟಿ ರು. ವ್ಯಾಪಾರ ನಡೆಸಿತ್ತು. ಎರಡು ವರ್ಷಕ್ಕೆ ಹೋಲಿಸಿದರೆ ಶೇ.106 ವಹಿವಾಟು ಏರಿಕೆಯಾಗಿದೆ ಎಂದು ರೇಟಿಂಗ್ ಏಜೆನ್ಸಿ ಬ್ರಿಕ್‌ವರ್ಕ್ ವರದಿ ಮಾಡಿದ್ದು ಜನರು ಪತಂಜಲಿ ಉತ್ಪನ್ನಗಳಿಗೆ ಮಾರುಹೋಗಿದ್ದನ್ನು ತಿಳಿಸುತ್ತದೆ.[ಯೋಗ ಗುರು ರಾಮ್ ದೇವ್ ಮೋಜಿನ ರೈಡ್ ನೋಡಿ]

2015ರ ಡಿಸೆಂಬರ್ಅಂತ್ಯೆದ ವೇಳೆಗೆ ಮಾರಿಕೋ 3,903 ಕೋಟಿ ರು. ವಹಿವಾಟು ನಡೆಸಿದ್ದರೆ, ಗೋದ್ರೇಜ್ 3,585 ಕೋಟಿ ರೂ. ವಹಿವಾಟು ದಾಖಲಿಸಿತ್ತು. ಡಾಬರ್ ಸಂಸ್ಥೆಯು 4,233 ಕೋಟಿ ರೂ ವ್ಯವಹಾರ ನಡೆಸಿತ್ತು. ಆದರೆ ಏಕಾಏಕಿ ವಹಿವಾಟಿನ ವೇಗ ವೃದ್ಧಿ ಮಾಡಿಕೊಂಡಿರುವ ಪತಂಜಲಿ ಉಳಿದ ಕಂಪನಿಗಳನ್ನು ಮುಂದಿನ ಒಂದೆರಡು ತಿಂಗಳಲ್ಲಿ ಹಿಂದೆ ಹಾಕಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Baba Ramdev's Patanjali Ayurved has narrowed its gap with consumer product companies including Dabur, Marico and Godrej Consumer as the Baba Ramdev-led firm more than doubled its sales in the past ten months.
Please Wait while comments are loading...