ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಅದೆಂಥ ಮಿಂಚು, ಇದೆಂಥ ತಲ್ಲಣ?

By: ಕೆ.ಜಿ.ಕೃಪಾಲ್
Subscribe to Oneindia Kannada

ಅಂಕಣಕಾರರು ಹಾಗೂ ಷೇರು ದಲ್ಲಾಳಿಗಳಾದ ಕೆಜಿ ಕೃಪಾಲ್ ಅವರು ಆಕ್ಸಿಸ್ ಬ್ಯಾಂಕ್ ಷೇರಿಗೆ ಸಂಬಂಧಿಸಿದ ಹಾಗೆ ಏರಿಳಿತಗಳನ್ನು ಅದರ ಕಾರಣಗಳನ್ನು ದಾಖಲಿಸಿದ್ದಾರೆ. ತುಂಬ ಸೂಕ್ಷ್ಮವಾಗಿ ಮಾರುಕಟ್ಟೆಯ ಸುದ್ದಿಯನ್ನು ಗಮನಿಸುವ ಕೃಪಾಲ್ ಅವರು, ಇಂದಿನ ಪರಿಸ್ಥಿತಿಯ ವಿಶ್ಲೇಷಣೆ ಮಾಡಿದ್ದಾರೆ.

ಷೇರುಪೇಟೆಯಲ್ಲಿ ಸದಾ ಸದ್ದು ಮಾಡುತ್ತಿರುವುದೇ ಮುಖ್ಯ ಎಂಬಂತೆ ಆಗಿದೆ ಪರಿಸ್ಥಿತಿ. ಅಂಥವುಗಳ ಪೈಕಿ ಕೆಲವು ವೈಶಿಷ್ಟ್ಯವಾಗಿಯೂ, ವೈವಿಧ್ಯವಾಗಿಯೂ ಇರುತ್ತವೆ. ಈಗ ವಾರ್ಷಿಕ ಗರಿಷ್ಠಮಟ್ಟಕ್ಕೆ ತಲುಪಿರುವ, ಅದು ಡೆರಿವೇಟಿವ್ಸ್ ಮಾರ್ಕೆಟ್ ಸೆಟ್ಲ್ ಮೆಂಟ್ ಅಂತಿಮ ಘಟ್ಟದಲ್ಲಿ, ಆಕ್ಸಿಸ್ ಬ್ಯಾಂಕ್ ಅನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲು ಇತರೆ ಖಾಸಗಿ ಬ್ಯಾಂಕ್ ಗಳಾದ ಕೋಟಕ್ ಮಹಿಂದ್ರಾ ಬ್ಯಾಂಕ್, ಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಗಳು ಪ್ರಯತ್ನಿಸುತ್ತಿವೆ ಎಂಬ ಸುದ್ದಿಯು ಈ ಷೇರಿನಲ್ಲಿ ಮಿಂಚು ಸಂಚರಿಸುವಂತೆ ಮಾಡಿತು.[ವಾಟ್ಸಪ್ ಕಿರಿಕಿರಿ, ಎಲ್ಲರ 'ಸ್ಟೇಟಸ್' ಕಳಚಿದ ಫೇಸ್ಬುಕ್!]

Axis Bank

ಈ ಷೇರಿನ ಬೆಲೆಯು ವರ್ಷದ ನಂತರ 500 ರುಪಾಯಿಯ ಗಡಿ ದಾಟುವಂತಾಯಿತು. ಆಕ್ಸಿಸ್ ಬ್ಯಾಂಕ್ ಸದಾ ಸುದ್ಧಿಯಲ್ಲಿರುವುದೇ ವಿಶೇಷ. ಈ ಬ್ಯಾಂಕ್ ಹಿಂದಿನ ಹೆಸರು ಯುಟಿಐ ಬ್ಯಾಂಕ್ ಲಿಮಿಟೆಡ್. ಇದು 2001ರಲ್ಲಿ ಅಂದಿನ ಖಾಸಗಿ ವಲಯದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ನಲ್ಲಿ ವಿಲೀನಗೊಳ್ಳಬೇಕಾಗಿತ್ತು. ಆ ಸಂದರ್ಭದಲ್ಲಿ ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಮತ್ತು ಡೇಲೈಟ್, ಹಸ್ಕಿನ್ ಅಂಡ್ ಸೆಲ್ಸ್ ಸಂಸ್ಥೆಗಳು ಪ್ರತಿ 4 ಗ್ಲೋಬಲ್ ಷೇರಿಗೆ 9 ಯುಟಿಐ ಬ್ಯಾಂಕ್ ಷೇರನ್ನು ನೀಡಬಹುದಾದ ಶಿಫಾರಸು ಮಾಡಿದ್ದವು.

ಆದರೆ, ನಂತರದ ದಿನಗಳಲ್ಲಿ ಅಂದರೆ 2004ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ದುರ್ಬಲಗೊಂಡು, ಅಸ್ತಿತ್ವವನ್ನು ಉಳಿಸಿಕೊಳ್ಳಲಾಗದೆ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ವಿಲೀನಗೊಂಡಿತು. ಆದರೆ ಯುಟಿಐ ಬ್ಯಾಂಕ್ ಪ್ರವರ್ಧಮಾನಕ್ಕೆ ಬಂದು ಮುಂಚೂಣಿಯಲ್ಲಿದೆ. 2007ರಲ್ಲಿ ಇದರ ಹೆಸರನ್ನು ಆಕ್ಸಿಸ್ ಬ್ಯಾಂಕ್ ಎಂದು ಬದಲಿಸಲಾಗಿದೆ.[ಏ.1ರಿಂದಲೇ ಎಸ್ ಬಿಐ ಜತೆ 5 ಸಹವರ್ತಿ ಬ್ಯಾಂಕ್‌ ಗಳ ವಿಲೀನ]

lic india

ಬಂಡವಾಳ ಹಿಂತೆಗೆತದ ಗುರಿ
2003ರಲ್ಲಿ ಯುನಿಟ್ ಟ್ರಸ್ಟ್ ಆಫ್ ಇಂಡಿಯಾದ ಹೂಡಿಕೆಯನ್ನು ಮುಂದುವರೆಸಿಕೊಂಡು ಸರ್ಕಾರವು ಸ್ಪೆಷಲ್ ಅಂಡರ್ ಟೇಕಿಂಗ್ ಆ ಯುಟಿಐ ಎಂಬ ನಾಮಾಂಕಿತದಲ್ಲಿ ಸುಮಾರು ಐವತ್ತು ಕಂಪನಿಗಳ ಷೇರುಗಳನ್ನು ಹೊಂದಿದೆ. ಕೇಂದ್ರ ಸರ್ಕಾರದ ಡಿಸ್ ಇನ್ವೆಸ್ಟ್ ಮೆಂಟ್ ಕಾರ್ಯಕ್ರಮದಡಿಯಲ್ಲಿ ಈ ಹಿಂದೆ ಸರ್ಕಾರವು ವಿವಿಧ ಕಂಪನಿಗಳಲ್ಲಿನ ತನ್ನ ಸ್ಟೇಕನ್ನು ಮಾರಾಟ ಮಾಡಿ ಬಂಡವಾಳ ಹಿಂತೆಗೆತದ ಗುರಿಯತ್ತ ಸಾಗಿದೆ.

ಸದ್ಯಕ್ಕೆ ಕೇಂದ್ರ ಸರ್ಕಾರವು 'ಸ್ಪೆಷಲ್ ಅಂಡರ್ ಟೇಕಿಂಗ್ ಆಫ್ ಯು ಟಿ ಐ' (SUUTI ) ಅಡಿಯಲ್ಲಿ ಶೇ. 12.02 ರಷ್ಟು ಭಾಗಿತ್ವವನ್ನು ಹೊಂದಿದೆ. ಅದೇ ರೀತಿ ಶೇ 9.10ರಷ್ಟು ಐಟಿಸಿ ಮತ್ತು ಶೇ 6.69ರಷ್ಟು ಸ್ಟೇಕ್ ಅನ್ನು ಲಾರ್ಸನ್ ಅಂಡ್ ಟೋಬ್ರೋ ಕಂಪನಿಯಲ್ಲಿ ಹೊಂದಿದೆ.[ಬಿಗ್ ಡೀಲ್ : ಟೆಲೆನಾರ್ ಖರೀದಿಸಿದ ಭಾರ್ತಿ ಏರ್ ಟೆಲ್]

demonetisation

ಪ್ರಯೋಜನ ಪಡೆಯಬಹುದೇ ಕೇಂದ್ರ ಸರಕಾರ
ಈ ತಿಂಗಳ ಮೊದಲವಾರದಲ್ಲಿ ಬಜೆಟ್ ನಂತರ ಐಟಿಸಿ ಷೇರಿನ ಬೆಲೆಯು ರು.290ರ ಸಮೀಪದಲ್ಲಿದ್ದಾಗ ಶೇ.2ರಷ್ಟನ್ನು ಮಾರಾಟ ಮಾಡಿದೆ. ಈಗ ಆಕ್ಸಿಸ್ ಬ್ಯಾಂಕ್ ವಾರ್ಷಿಕ ಗರಿಷ್ಠ ಮಟ್ಟದಲ್ಲಿರುವಾಗ ಅದರ ಪ್ರಯೋಜನ ಪಡೆದುಕೊಳ್ಳಲು ಕೇಂದ್ರ ಸರಕಾರ ಮುಂದಾಗಬಹುದೇ?

ಮಾರ್ಚ್ 2014ರಲ್ಲಿ ಒಮ್ಮೆ ಆಕ್ಸಿಸ್ ಬ್ಯಾಂಕ್ ಷೇರುಗಳನ್ನು ಪ್ರತಿ ಷೇರಿಗೆ ರು. 1313.25ರಂತೆ ಸರಕಾರ ಮಾರಾಟ ಮಾಡಿತ್ತು. ಆಗ ಎಲ್ ಐಸಿ ಆಫ್ ಇಂಡಿಯಾ ರು 10 ಮುಖಬೆಲೆಯ 85 ಲಕ್ಷ ಷೇರುಗಳನ್ನು ಮತ್ತು ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ರು 10 ಮುಖಬೆಲೆಯ 38 ಲಕ್ಷ ಷೇರುಗಳನ್ನು ಖರೀದಿಸಿದ್ದವು. ಜನವರಿ 2017ರಲ್ಲಿ ಕಂಪನಿಯ ತ್ರೈಮಾಸಿಕ ಫಲಿತಾಂಶ ಉತ್ತಮವಾಗಿಲ್ಲವೆಂಬ ಕಾರಣಕ್ಕಾಗಿ ಒಂದೇ ದಿನ ಶೇ 7ರಷ್ಟರ ಕುಸಿತವನ್ನು ಆಕ್ಸಿಸ್ ಬ್ಯಾಂಕ್ ದಾಖಲಿಸಿತ್ತು.[ಟಿಸಿಎಸ್ ನಿಂದ 16,000 ಕೋಟಿ ರೂ. ಷೇರು ಮರು ಖರೀದಿ; ಏನಿದು?]

KG Kripal

ಲೈಸೆನ್ಸ್ ರದ್ದು ಎಂಬ ಗಾಳಿ ಸುದ್ದಿ
ನೋಟು ನಿಷೇಧದ ನಂತರ ಆಕ್ಸಿಸ್ ಬ್ಯಾಂಕ್ ನ ಕೆಲವು ಶಾಖೆಗಳಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿಯೇ ಆರ್ ಬಿಐ ಈ ಬ್ಯಾಂಕ್ ನ ಲೈಸೆನ್ಸ್ ರದ್ದುಗೊಳಿಸಲಿದೆ ಎಂಬ ಗಾಳಿ ಸುದ್ದಿಯು ಪೇಟೆಯಲ್ಲಿ ತೇಲಾಡಿತು.

ಈಗ ಆಧಾರ್ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಆಪಾದನೆ ಮೇಲೆ ಯುನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ ಕ್ರಿಮಿನಲ್ ಕೇಸ್ ದಾಖಲಿಸಿದೆ. ಬ್ಯಾಂಕ್ ನ ಷೇರಿನ ದರಗಳ ಏರಿಳಿತದೊಂದಿಗೆ ಅದರ ಅಸ್ತಿತ್ವವೂ ಅಸ್ಥಿರವಾಗಿದ್ದರಿಂದ ಹೂಡಿಕೆದಾರರು ಸದಾ 'ಶ್ವಾನ ನಿದ್ದೆ' ಯಂತೆ ಎಚ್ಚರವಾಗಿರುವುದು ಅನಿವಾರ್ಯವಾಗಿದೆ.[ಷೇರು ಮಾರುಕಟ್ಟೆ: ಕಂಪೆನಿ ಫಲಿತಾಂಶ ಮತ್ತು ಷೇರು ಖರೀದಿ ಹೇಗೆ?]

ಲೇಖಕರ ಬಳಿ ಮಾತನಾಡಲು ಸೋಮವಾರದಿಂದ ಶನಿವಾರದವರಗೆ ಸಂಜೆ 4.30ರ ನಂತರ ಮೊ 9886313380 ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Axis bank again in the news. So, after a small break Axis bank sahres enter the price range of 500. Why share price is hiking, reason or news behind this increase analysed by columnist and stock broker KG Kripal.
Please Wait while comments are loading...