ಐಫೋನ್ x ತಯಾರಿಗೆ 23 ಸಾವಿರ ಖರ್ಚು, 89 ಸಾವಿರಕ್ಕೆ ಮಾರಾಟ

Posted By:
Subscribe to Oneindia Kannada

ಆಪಲ್ ಕಂಪನಿಗೆ ತನ್ನ ಹೊಚ್ಚ ಹೊಸ ಐಫೋನ್ xನಿಂದ ಅತಿ ಹೆಚ್ಚು ಲಾಭ ಬರುತ್ತಿದೆ ಎಂಬುದು ನಿಮಗೆ ಗೊತ್ತಿದೆಯೆ? ಐಫೋನ್ 8ರ ಸರಣಿಗಿಂತ ಶೇ 25ರಷ್ಟು ಹೆಚ್ಚು ವೆಚ್ಚ ಐಫೋನ್ xಗೆ ತಗುಲುತ್ತದೆ. ಆದರೆ ಐಫೋನ್ 8ರ ಸರಣಿಯ ಒಂದು ಫೋನ್ ಮಾರಿದರೆ ಆಗುವ ಲಾಭಕ್ಕಿಂತ ಶೇ 43ರಷ್ಟು ಹೆಚ್ಚು ಲಾಭ ಐಫೋನ್ x ಮಾರಾಟದಿಂದ ಆಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಐಫೋನ್ X ಪ್ರಿ ಆರ್ಡರ್ ಆರಂಭ, ಫೋನ್ ಬಗ್ಗೆ ಗೊತ್ತಿರಬೇಕಾದ 5 ಅಂಶಗಳು

ಒಂದು ಐಫೋನ್ x ತಯಾರಿಸಲು 357.50 ಅಮೆರಿಕನ್ ಡಾಲರ್ ವೆಚ್ಚ ತಗುಲುತ್ತದೆ. ಅದನ್ನು 999 ಅಮೆರಿಕನ್ ಡಾಲರ್ ಗೆ ಮಾರಾಟ ಮಾಡಲಾಗುತ್ತದೆ. ಅಂದರೆ ಒಟ್ಟು ಮಾರ್ಜಿನ್ ಶೇ 64ರಷ್ಟು. ಐಫೋನ್ 8 ಅನ್ನು 699 ಅಮೆರಿಕನ್ ಡಾಲರ್ ಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ಶೇ 59ರಷ್ಟು ಮಾರ್ಜಿನ್ ಇದೆ.

Apple's price 89,000 iPhone X costs RS 23,200 to make

ನವೆಂಬರ್ ಮೂರರಿಂದ ಐಫೋನ್ x ಮಾರಾಟ ಆರಂಭವಾಗಿದೆ. ಬೇಡಿಕೆ ಕೂಡ ಅದ್ಭುತವಾಗಿದೆ. ಐಫೋನ್ 8 ಕಳೆದ ಆವೃತ್ತಿಯ ಐಫೋನ್ 7ರ ಅಪ್ ಗ್ರೇಡ್. ಇನ್ನು ಆ ಮೊಬೈಲ್ ಫೋನ್ ಅದಕ್ಕೂ ಹಿಂದಿನ ಸರಣಿ 2014ರಲ್ಲಿ ಬಿಡುಗಡೆಯಾದ ಐಫೋನ್ 6 ಸರಣಿಯ ಅಪ್ ಗ್ರೇಡ್.

ಬಿಸಿ ದೋಸೆಯಂತೆ ಬಿಕರಿಯಾದ ಲಕ್ಷ ರುಪಾಯಿಯ ಐಫೋನ್ x

ಆದರೆ, ತಾಂತ್ರಿಕ ತಜ್ಞರ ಈ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಲು ಆಪಲ್ ಕಂಪನಿ ನಿರಾಕರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Apple Inc’s new flagship iPhone X makes the company more money per phone than its iPhone 8 model, according to an analysis, which found the iPhone X’s flashier parts cost Apple 25 percent more than the iPhone 8, but that it retailed 43 percent higher.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ