Get Updates
Get notified of breaking news, exclusive insights, and must-see stories!

ಭಾರತದ 60% 'ಸ್ಯಾಂಡ್‌ವಿಚ್‌' ಪೀಳಿಗೆಗೆ ಕಾಡುತ್ತಿದೆ ಭವಿಷ್ಯದ ಆರ್ಥಿಕ ಭದ್ರತೆ ಆತಂಕ: ಅಧ್ಯಯನ

ಭಾರತದ ಸ್ಯಾಂಡ್‌ವಿಚ್‌ ಪೀಳಿಗೆಗೆ ತಮ್ಮ ಸ್ವಂತ ಭವಿಷ್ಯದ ಸಿದ್ಧತೆ ಮಾಡಿಕೊಂಡಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಎಡಲ್ವೈಝ್ ಲೈಫ್ ಇನ್ಶುರೆನ್ಸ್ ನಡೆಸಿದ ಅಧ್ಯಯನದಲ್ಲಿ "ನಾನು ಎಷ್ಟು ಉಳಿಸಿದರೂ ಅಥವಾ ಹೂಡಿಕೆ ಮಾಡಿದರೂ ಭವಿಷ್ಯಕ್ಕೆ ಸಾಲುತ್ತದೆ ಎಂದು ಅನಿಸುವುದೇ ಇಲ್ಲ" ಎಂದು 60% ಜನ ಅಭಿಪ್ರಾಯಪಟ್ಟಿದ್ದಾರೆ.

35 ರಿಂದ 54 ವರ್ಷದೊಳಗಿನ ವ್ಯಕ್ತಿಗಳನ್ನು ಸ್ಯಾಂಡ್‌ವಿಚ್‌ ತಲೆಮಾರು ಎಂದು ಗುರುತಿಸಲಾಗುತ್ತದೆ. ತಮ್ಮ ವಯಸ್ಸಾದ ಪಾಲಕರು ಮತ್ತು ಬೆಳೆಯುತ್ತಿರುವ ಮಕ್ಕಳನ್ನು ಒಳಗೊಂಡ ಎರಡು ತಲೆಮಾರಿನ ಜನರು ಇವರ ಮೇಲೆ ಅವಲಂಬಿತರಾಗಿರುತ್ತಾರೆ. ಯುಗವ್‌ ಸಹಭಾಗಿತ್ವದಲ್ಲಿ ಕಂಪನಿಯು ಈ ತಲೆಮಾರಿನ 4005 ವ್ಯಕ್ತಿಗಳ ಸಮೀಕ್ಷೆಯನ್ನು ನಡೆಸಿದ್ದು, ಇದನ್ನು 12 ಪ್ರಮುಖ ನಗರಗಳಲ್ಲಿ ನಡೆಸಲಾಗಿದೆ. ಈ ತಲೆಮಾರಿನ ಜನರ ವರ್ತನೆಗಳು, ನಂಬಿಕೆಗಳು ಮತ್ತು ಆರ್ಥಿಕ ಸಿದ್ಧತೆಯ ಮಟ್ಟವನ್ನು ಅರ್ಥ ಮಾಡಿಕೊಳ್ಳುವುದು ಇದರ ಗುರಿಯಾಗಿದೆ.

anxiety about financial security indian sandwich generation

ಎಡಲ್ವೈಝ್ ಲೈಫ್ ಇನ್ಶುರೆನ್ಸ್‌ನ ಎಮ್‌ಡಿ ಮತ್ತು ಸಿಇಒ ಸುಮಿತ್ ರೈ ಮಾತನಾಡಿ "ಕಳೆದ ಹಲವು ವರ್ಷಗಳಿಂದ ನಮ್ಮ ಗ್ರಾಹರಕ ಸಂವಾದಗಳ ಮೂಲಕ ತಮ್ಮ ಪಾಲಕರು ಮತ್ತು ಮಕ್ಕಳ ಕಾಳಜಿ ವಹಿಸುವ ನಿಟ್ಟಿನಲ್ಲಿ ಸ್ಯಾಂಡ್‌ವಿಚ್ ತಲೆಮಾರಿನ ಜನರು ಬಳಲುತ್ತಿದ್ದಾರೆ ಎಂಬುದನ್ನು ನಾವು ನಿಕಟವಾಗಿ ಗಮನಿಸಿದ್ದೇವೆ. ಬಯಕೆಗಳ ಬದಲಿಗೆ ಅಗತ್ಯಗಳಿಗೆ ಆದ್ಯತೆ ನೀಡುವ ಇವರು, ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ಅಗತ್ಯಗಳನ್ನು ಅವರು ಪೂರೈಸಬೇಕಿರುತ್ತದೆ. ಇದು ಅವರ ಒಟ್ಟಾರೆ ಆರ್ಥಿಕ ನಿರ್ಧಾರ ಮಾಡುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗೂ ಈ ಪ್ರಕ್ರಿಯೆಯಲ್ಲಿ, ಅವರ ಕನಸುಗಳನ್ನು ಪೂರೈಸುವ ವಿಷಯದಲ್ಲಿ ಹಿಂದೆ ಬೀಳುತ್ತಾರೆ ಮತ್ತು ಭವಿಷ್ಯಕ್ಕೆ ತಾವು ಸಿದ್ಧವಾಗಿಲ್ಲ ಎಂಬ ಭಾವ ಅವರನ್ನು ಕಾಡುತ್ತದೆ." ಎಂದು ಹೇಳಿದ್ದಾರೆ.

ಕುಟುಂಬದ ಮೇಲಿನ ಪ್ರೀತಿಯೇ ಅವರ ಆರ್ಥಿಕ ನಿರ್ಧಾರಗಳನ್ನು ಪ್ರಚೋದಿಸುತ್ತಿರುತ್ತದೆ. ಹೀಗಾಗಿ, ಆರ್ಥಿಕ ಆಯೋಜನೆಯಲ್ಲಿ ಸಮಸ್ಯೆ ಅಥವಾ ಹಣಕಾಸಿನ ಸ್ಥಿತಿಯ ಬಗ್ಗೆ ಅಸಂತೃಪ್ತಿಯನ್ನು ಈ ತಲೆಮಾರಿನ ಜನರು ಎದುರಿಸುತ್ತಿದ್ದಾರೆ ಎಂಬುದನ್ನು ನಮ್ಮ ಅಧ್ಯಯನವು ಸೂಚಿಸುತ್ತಿದೆ. ಹಣ ಖಾಲಿಯಾಗುವ ಬಗ್ಗೆ ಚಿಂತೆ, ಹಿಂದೆ ಬಿದ್ದಿರುವ ಹಾಗೆ ಭಾವಿಸುವುದು ಮತ್ತು ಉತ್ತಮ ಸಾಧನೆ ಮಾಡುತ್ತಿಲ್ಲ ಎಂಬ ಭಾವನೆಯಂತಹ ವಿವಿಧ ಹೇಳಿಕೆಗಳನ್ನು 50% ಕ್ಕೂ ಹೆಚ್ಚು ಜನರು ನೀಡಿದ್ದಾರೆ.

"ಈ ತಲೆಮಾರಿನ ಜನರು ತಮ್ಮ ನಿರೀಕ್ಷೆಗಳ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ತಮ್ಮ ಆದ್ಯತೆಯ ಉತ್ಪನ್ನ ವಿಭಾಗಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಯೋಜನೆ ಮಾಡಿದ್ದೇವೆ ಎಂದು ಭಾವಿಸುತ್ತಾರೆ. ಆದರೆ, ನಮ್ಮ ಅಧ್ಯಯನವು ಕೆಲವು ಕುತೂಹಲಕರ ಸಂಗತಿಗಳನ್ನು ಅನಾವರಣಗೊಳಿಸಿದೆ. ಮುಂದಿನ 1-2 ವರ್ಷಗಳವರೆಗೆ ಈ ಸಕ್ರಿಯ ಹೂಡಿಕೆಗಳನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಜನರು ಕಡಿಮೆ ಪ್ರಮಾಣದಲ್ಲಿ ತೋರಿಸಿದ್ದಾರೆ. ಮೊದಲೇ ಗುರಿ ಹಾಕಿಕೊಂಡಿದ್ದಕ್ಕೆ ನಿಗದಿ ಮಾಡಿದ್ದ ಹಣವನ್ನು ಸಮಯಕ್ಕೂ ಮೊದಲೇ ಅವರು ಪಡೆದುಕೊಂಡಿದ್ದಾರೆ. ಹೀಗಾಗಿ, ತಾವು ನಿಂತಿರುವ ಅಡಿಪಾಯವೇ ಅಲುಗಾಡುತ್ತಿದೆ ಎಂದು ಭಾವಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ" ಎಂದು ರೈ ಹೇಳಿದ್ದಾರೆ.

ಜೀವ ವಿಮೆ, ಆರೋಗ್ಯ ವಿಮೆ, ಮ್ಯೂಚುವಲ್ ಫಂಡ್‌ಗಳು, ಈಕ್ವಿಟಿಗಳು ಮತ್ತು ಬ್ಯಾಂಕ್‌ ಎಫ್‌ಡಿಗಳಂತಹ 5 ಮೆಚ್ಚಿನ ಉತ್ಪನ್ನ ವಿಭಾಗಗಳಲ್ಲಿ, ಎಲ್ಲ ವಿಭಾಗಗಳಲ್ಲೂ ಪ್ರಸ್ತುತ 60% ಕ್ಕಿಂತ ಕಡಿಮೆ ಸಕ್ರಿಯ ಹೂಡಿಕೆಯನ್ನು ಹೊಂದಿದ್ದಾರೆ ಮತ್ತು ಮುಂದಿನ 1-2 ವರ್ಷಗಳಲ್ಲಿ ಅದನ್ನು ಮುಂದುವರಿಸುವ ಬಗ್ಗೆ ಇದಕ್ಕೂ ಕಡಿಮೆ ಜನರು ಆಸಕ್ತಿ ತೋರಿಸಿದ್ದಾರೆ. ಇನ್ನೂ ಮುಂದುವರಿದು ಕೇಳಿದಾಗ, ಈ ಎಲ್ಲ ಉತ್ಪನ್ನ ವಿಭಾಗಗಳನ್ನು ಅವಧಿಗೂ ಮೊದಲೇ ಹಿಂಪಡೆಯಲಾಗಿದೆ. ಅಂದರೆ, ಯಾವ ಗುರಿಗೆ ಅವುಗಳನ್ನು ತೆರೆಯಲಾಗಿತ್ತೋ ಆ ಗುರಿ ಸಾಧನೆಯಾಗುವುದಕ್ಕೂ ಮೊದಲೇ ಹಣವನ್ನು ಹಿಂಪಡೆಯಲಾಗಿದೆ. ಈ ನಗದಿಕರಣಕ್ಕೆ ಪ್ರಚೋದನೆ ನೀಡಿದ್ದ ಅಗತ್ಯಗಳಾಗಿದ್ದರೂ, ಅತ್ಯಂತ ಅಗತ್ಯದ್ದಲ್ಲದ ವೆಚ್ಚಗಳಾದ ರಜೆ, ಹಬ್ಬದ ಸಮಯದಲ್ಲಿ ಖರ್ಚು ಮಾಡುವುದು ಮತ್ತು ಇತರೆ ಅಂಶಗಳು ಚಾಲಕ ಶಕ್ತಿಗಳಾಗಿವೆ.

ಈ ತಲೆಮಾರಿನ ಪ್ರಮುಖ ನಿರೀಕ್ಷೆಗಳಲ್ಲಿ ಮಕ್ಕಳ ಭವಿಷ್ಯ (ಅವರಿಗೆ ಶಿಕ್ಷಣ ಮತ್ತು ವಿವಾಹ), ಪಾಲಕರ ಆರೋಗ್ಯ ಸೇವೆ ಅಗತ್ಯಗಳು ಮತ್ತು ಕುಟುಂಬದ ಜೀವನ ಮಾನದಂಡವನ್ನು ಸುಧಾರಿಸುವುದು ಇತ್ಯಾದಿಯಾಗಿವೆ. ಹಣಕಾಸು ಯೋಜನೆ ಮಾಡುವಾಗ ಅವರು ಸಕಾರಣವಾಗಿ ಉತ್ತಮ ಆತ್ಮವಿಶ್ವಾಸವನ್ನು ತೋರಿಸುತ್ತಾರೆ. ಈ ಪೈಕಿ 94% ಜನರು ತಾವು ವಿವರವಾದ ಯೋಜನೆ ಮಾಡಿದ್ದೇವೆ ಎಂದು ಅಥವಾ ಯಾವುದೋ ಒಂದು ಹಂತದ ಯೋಜನೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೆಚ್ಚಿನ 72% ಜನರು ತಮ್ಮ ಹೂಡಿಕೆಗಳನ್ನು ನಿರ್ದಿಷ್ಟ ನಿರೀಕ್ಷೆಗಳಿಗೆ ಸಂಪರ್ಕಗೊಂಡಿದೆ ಎಂದು ಭಾವಿಸಿದ್ದಾರೆ.

ಆದರೂ, 64% ಜನರು ಹೇಳುವಂತೆ, ತಮ್ಮ ಅಲ್ಪಾವಧಿ ಅಗತ್ಯಗಳಿಗೆ ಯಾವುದೋ ಒಂದು ರೀತಿಯ ಸಾಲವನ್ನು ಬಳಸಿದ್ದೇವೆ ಮತ್ತು ಉಳಿದ 49% ಜನರು ಉಳಿತಾಯವನ್ನು ಬಳಸಿದ್ದೇವೆ ಎಂದು ಹೇಳಿದ್ದಾರೆ. ನಗದು/ಆದಾಯದ ಜೊತೆಗೆ ಸಾಲದಿಂದ ಅವರು ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ನಿರ್ಣಾಯಕ ಅಗತ್ಯವನ್ನು ಅವರು ಪೂರೈಸಿಕೊಂಡಿದ್ದಾರೆ. ಆದರೆ, ರಜೆ, ಮನೆ ನವೀಕರಣ ಇತ್ಯಾದಿ ಪ್ರಮುಖವಲ್ಲದ ಅಗತ್ಯಗಳನ್ನು ಪೂರೈಸಲೂ ಇದು ಅವರಿಗೆ ಅನುಕೂಲ ಮಾಡಿಕೊಟ್ಟಿದೆ.

ತಮ್ಮ ದೀರ್ಘಾವಧಿ ನಿರೀಕ್ಷೆಗಳನ್ನು ಪೂರೈಸಲು ಹಣಕಾಸು ಸಲಕರಣೆಗಳಿಂದ ಬಂದ ಆದಾಯದ ಮೇಲೆ 79% ಜನರು ಅವಲಂಬಿಸಿದ್ದಾರೆ ಮತ್ತು 71% ಜನರು ತಮ್ಮ ರೆಗ್ಯುಲರ್ ಭವಿಷ್ಯದ ಆದಾಯವನ್ನು ಅವಲಂಬಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ತಮ್ಮ ಪ್ರಮುಖ 3 ದೀರ್ಘಕಾಲೀನ ನಿರೀಕ್ಷೆಗಳಲ್ಲಿ ನಿವೃತ್ತಿಯನ್ನೂ ಈ ತಲೆಮಾರು ಪರಿಗಣಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+