Budget 2025: ವೈಯಕ್ತಿಕ ಆದಾಯ ತೆರಿಗೆ ಕಡಿತ ಘೋಷಿಸಿ; ಬಾಕ್ಲೇರ್ಸ್ ಒತ್ತಾಯ
2025-2026ನೇ ಸಾಲಿನ ಬಜೆಟ್ ಮಂಡನೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ಬಜೆಟ್ ಬಗ್ಗೆ ಮಧ್ಯಮ ವರ್ಗದ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಆದಾಯ ತೆರಿಗೆ ಕಡಿತ ಈ ಬಾರಿಯ ಮೊದಲ ನಿರೀಕ್ಷೆಯಾಗಿದ್ದು ಕೇಂದ್ರದ ಮೇಲೆ ಒತ್ತಡ ಹೆಚ್ಚಾಗಿದೆ.
ಪ್ರಮುಖ ಬ್ರೋಕರೇಜ್ ಸಂಸ್ಥೆ ಬಾಕ್ಲೇರ್ಸ್, ಬಳಕೆ ಮತ್ತು ಬೇಡಿಕೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಕಡಿತ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದೆ. 2025-2026ರ ಬಜೆಟ್‌ನ ಪೂರ್ವ ವೀಕ್ಷಣೆಯಲ್ಲಿ ಆರ್ಥಿಕ ಬೆಳವಣಿಗೆಗೆ ಬೆಂಬಲ ಕೊಡುವ ಹಣಕಾಸಿನ ಬಲವರ್ಧನೆಯ ಜೊತೆಗೆ ಸಮತೋಲನಗೊಳಿಸುವ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದೆ.

ಹಣಕಾಸಿನ ಹೊರೆ ಹೇರದಂತೆ ಮನವಿ
ಬಾಕ್ಲೇರ್ಸ್‌ನ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞೆ ಆಸ್ತಾ ಗುಡ್ವಾನಿ ಬಜೆಟ್ ಮೇಲಿನ ನಿರೀಕ್ಷೆಗಳ ಬಗ್ಗೆ ಮಾತನಾಡಿದ್ದು, ವೈಯಕ್ತಿಕ ಆದಾಯ ತೆರಿಗೆ ಸ್ಲಾಬ್‌ಗಳನ್ನು ಬದಲಾಯಿಸಬೇಕು. ವೈಯಕ್ತಿಕ ಆದಾಯ ತೆರಿಗೆ ಕಡಿತವನ್ನು ಪರಿಚಯಿಸಬೇಕು. ಜನರ ಮೇಲೆ ಮತ್ತಷ್ಟು ಹೊರೆ ಹಾಕಬಾರದು ಎಂದು ಹೇಳಿದ್ದಾರೆ. ಆದಾಯ ತೆರಿಗೆ ಕಡಿಮೆ ಮಾಡುವ ಮೂಲಕ ಉತ್ತೇಜನ ಕೊಡಬೇಕು. ಇದರಿಂದ ಖಾಸಗಿ ವಲಯದಲ್ಲಿ ಹೂಡಿಕೆ ಹೆಚ್ಚಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಸಾಲಿನ ಬಜೆಟ್‌ನಲ್ಲಿ ಸರ್ಕಾರವ ಸಂಬಳ ಪಡೆಯುವ ತೆರಿಗೆದಾರರಿಗೆ ಪ್ರಮಾಣಿತ ಕಡಿತವನ್ನು 75,000 ರೂಪಾಯಿಗೆ ಮತ್ತು ಕುಟುಂಬ ಪಿಂಚಣಿಯ ಮೇಲಿನ ಕಡಿತವನ್ನು 25,000 ರೂಪಾಯಿಗೆ ಹೆಚ್ಚಿಸಿತ್ತು. ಇದು ಹೊಸ ತೆರಿಗೆ ಪದ್ದತಿಯಲ್ಲಿ ಕಡಿಮೆ ತೆರಿಗೆ ದರವನ್ನು ನೀಡುತ್ತದೆ.
ಈಗ ಜಾರಿಯಲ್ಲಿರುವ ತೆರಿಗೆ ಪದ್ಧತಿ ಪ್ರಕಾರ, 3 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ವಿನಾಯಿತಿ ನೀಡುತ್ತದೆ. 3 ರಿಂದ 7 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು 5% ಆದಾಯ ಪಾವತಿಸಬೇಕಾಗಿದ್ದು, 7 ರಿಂದ 10 ಲಕ್ಷ ರೂಪಾಯಿ ಆದಾಯ ಹೊಂದಿದ್ದರೆ 10% ತೆರಿಗೆ ಪಾವತಿಸಬೇಕಾಗುತ್ತದೆ. 10 ರಿಂದ 12 ಲಕ್ಷ ರೂಪಾಯಿ ಆದಾಯ ಇದ್ದವರಿಗೆ 15%, 12 ರಿಂದ 15 ಲಕ್ಷ ರೂಪಾಯಿ ಆದಾಯ ಇದ್ದವರಿಗೆ 20% ತೆರಿಗೆ ವಿಧಿಸಲಾಗುತ್ತಿದೆ. 15 ಲಕ್ಷ ರೂಪಾಯಿಗಿಂತ ಹೆಚ್ಚಿನ ತೆರಿಗೆ ಹೊಂದಿದ್ದವರು 30% ತೆರಿಗೆ ಪಾವತಿಸಬೇಕಾಗಿದೆ.
ಹಣದುಬ್ಬರವನ್ನು ನಿಯಂತ್ರಿಸಲು ಬಳಸುವ ಆದಾತ ಮತ್ತು ಖರೀದಿ ಶಕ್ತಿಯನ್ನು ಹೆಚ್ಚಿಸಲು ಇಂಧನದ ಮೇಲೆ ವಿಧಿಸಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕು ಎಂದು ಬಾಕ್ಲೇರ್ಸ್ ಹೇಳಿದೆ. ಜಾಗತಿಕವಾಗಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇದ್ದರೂ, 2022ರಿಂದ ಭಾರತದಲ್ಲಿ ಪೆಟ್ರೋಲ್, ಡೀಸಲ್ ದರ ಕಡಿಮೆಯಾಗಿಲ್ಲ ಎಂದು ಅದು ಹೇಳಿದೆ.












Click it and Unblock the Notifications