ನೂರಾರು ಫ್ರೆಶರ್‌ಗಳನ್ನು ವಜಾಗೊಳಿಸಿದ Infosys: ಇದಕ್ಕೆ ಕಂಪನಿ ನೀಡಿದ ಕಾರಣವೇನು? ತಿಳಿಯಿರಿ
ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ, ಟೆಕ್ ದೈತ್ಯ Infosys ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ನೂರಾರು ಫ್ರೆಶರ್‌ಗಳನ್ನು ವಜಾಗೊಳಿಸಿದೆ. ಇದಕ್ಕೆ ಕಂಪನಿ ನೀಡಿದ ಕಾರಣವೇನು? ತಿಳಿಯಿರಿ
ಬೆಂಗಳೂರು, ಫೆಬ್ರವರಿ 06: ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ, ಟೆಕ್ ದೈತ್ಯ Infosys ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ನೂರಾರು ಫ್ರೆಶರ್‌ಗಳನ್ನು ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಯ ತ್ರೈಮಾಸಿಕ ವರದಿಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ Q3 ರಲ್ಲಿ ಇನ್ಫೋಸಿಸ್ 6,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ ಎಂದು ತಿಳಿದುಬಂದಿದೆ. 2023 ರ ಅಂತ್ಯದ ವೇಳೆಗೆ ಕಂಪನಿಯು ತನ್ನ ನೇಮಕಾತಿ ಗುರಿಯನ್ನು ತಲುಪಲಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ (CFO) ನಿಲಂಜನ್ ರಾಯ್ ಹೇಳಿದ್ದಾರೆ.
ಬ್ಯುಸಿನೆಸ್ ಟುಡೆಯೊಂದಿಗೆ ಮಾತನಾಡಿರುವ ಆಗಸ್ಟ್ 2022 ರಲ್ಲಿ ನೇಮಕಗೊಂಡ ಫ್ರೆಶರ್ ಒಬ್ಬರು, 'ನನಗೆ SAP ABAP ಸ್ಟ್ರೀಮ್‌ಗಾಗಿ ತರಬೇತಿ ನೀಡಲಾಯಿತು. ನನ್ನ ತಂಡದಲ್ಲಿದ್ದ 150 ಮಂದಿಯಲ್ಲಿ 60 ಮಂದಿ ಮಾತ್ರ ಎಫ್‌ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದಂತೆ ನಮ್ಮೆಲ್ಲರನ್ನೂ ಎರಡು ವಾರಗಳ ಹಿಂದೆ ವಜಾಗೊಳಿಸಲಾಯಿತು. ಹಿಂದಿನ ಬ್ಯಾಚ್‌ನಿಂದ (ಜುಲೈ 2022 ರಲ್ಲಿ ಆನ್‌ಬೋರ್ಡ್ ಆಗಿದ್ದ ಹೊಸಬರು), ಪರೀಕ್ಷೆಯಲ್ಲಿ ವಿಫಲರಾದ ನಂತರ ಸುಮಾರು 85 ಫ್ರೆಶರ್‌ಗಳನ್ನು ವಜಾಗೊಳಿಸಲಾಯಿತು' ಎಂದು ತಿಳಿಸಿದ್ದಾರೆ.
ಕಂಪನಿಯ ವಕ್ತಾರರು ಪ್ರಕಾರ, ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಟ್ರೈನಿಗಳನ್ನು ವಜಾಗೊಳಿಸಲಾಗುತ್ತದೆ.

ಕಳೆದ ತಿಂಗಳ ಆರಂಭದಲ್ಲಿ, ಐಟಿ ದೈತ್ಯ ವಿಪ್ರೋ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನ ನೀಡಿದ 400 ಫ್ರೆಶರ್‌ಗಳನ್ನು ವಜಾಗೊಳಿಸಿತ್ತು. ಉದ್ಯೋಗಿಗಳಿಗೆ ಕಳುಹಿಸಲಾದ ವಜಾಗೊಳಿಸುವ ಪತ್ರದಲ್ಲಿ ವಜಾಗೊಂಡ ಉದ್ಯೋಗಿಗಳು ಕಂಪನಿಯು ಅವರಿಗೆ ಖರ್ಚು ಮಾಡಿದ ತರಬೇತಿ ವೆಚ್ಚದ 75,000 ರೂಗಳನ್ನು ಪಾವತಿಸಲು ಹೊಣೆಗಾರರಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದೆ. ಆದರೆ, ಮೊತ್ತವನ್ನು ಮನ್ನಾ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.
'ನೀವು ಪಾವತಿಸಬೇಕಾದ 75,000 ರೂಪಾಯಿಗಳ ತರಬೇತಿ ವೆಚ್ಚವನ್ನು ಮನ್ನಾ ಮಾಡಲಾಗುವುದು ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.
'ಪ್ರತಿ ವರ್ಷ ಪ್ರವೇಶ ಪಡೆಯು ಉದ್ಯೋಗಿಗಳು, ಅವರ ಗೊತ್ತುಪಡಿಸಿದ ಕೆಲಸದ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟ ಮಟ್ಟದ ಪ್ರಾವೀಣ್ಯತೆಯನ್ನು ನಿರೀಕ್ಷಿಸಲಾಗಿದೆ. ಮೌಲ್ಯಮಾಪನ ಪ್ರಕ್ರಿಯೆಯು ಗ್ರಾಹಕರ ಅಗತ್ಯತೆಗಳು ಮತ್ತು ಸಂಸ್ಥೆಯ ವ್ಯಾಪಾರ ಉದ್ದೇಶಗಳೊಂದಿಗೆ ಉದ್ಯೋಗಿಗಳನ್ನು ಜೋಡಿಸುವುದನ್ನು ಒಳಗೊಂಡಿರುತ್ತದೆ. ಈ ಮೌಲ್ಯಮಾಪನ ಪ್ರಕ್ರಿಯೆಯು ವ್ಯವಸ್ಥಿತ ಮತ್ತು ಸಮಗ್ರವಾಗಿದೆ. ಕಂಪನಿಯಿಂದ ಉದ್ಯೋಗಿಗಳ ಮಾರ್ಗದರ್ಶನ, ಮರುತರಬೇತಿ ಮತ್ತು ಪ್ರತ್ಯೇಕತೆಯಂತಹ ಕ್ರಮಗಳ ಸರಣಿಯನ್ನು ಅನುಸರಿಸುತ್ತದೆ' ಎಂದು ವಿಪ್ರೋ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications