ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರ್ತಿ ಏರ್‌ಟೆಲ್‌ನಲ್ಲಿ 2 ಬಿಲಿಯನ್ ಡಾಲರ್ ಪಾಲನ್ನು ಖರೀದಿಸಲು ಅಮೆಜಾನ್ ಮಾತುಕತೆ

|
Google Oneindia Kannada News

ನವದೆಹಲಿ, ಜೂನ್ 4:ಭಾರತೀಯ ಮೊಬೈಲ್ ಆಪರೇಟರ್ ಭಾರ್ತಿ ಏರ್‌ಟೆಲ್‌ನಲ್ಲಿ ಕನಿಷ್ಠ 2 ಬಿಲಿಯನ್ ಡಾಲರ್ ಮೌಲ್ಯದ ಪಾಲನ್ನು ಖರೀದಿಸಲು ಅಮೆಜಾನ್.ಕಾಮ್ ಆರಂಭಿಕ ಹಂತದ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಆಕರ್ಷಣೆಯಿಂದಾಗಿ ಈ ಹೂಡಿಕೆ ಸಾಧ್ಯವಾಗಿದೆ ಎಂದಿದ್ದಾರೆ ಟೆಕ್‌ ವಿಶ್ಲೇಷಕರು.

ಭಾರತದ 300 ದಶಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್‌ಟೆಲ್‌ ಯೋಜಿತ ಹೂಡಿಕೆ ಪೂರ್ಣಗೊಂಡರೆ, ಅಮೆಜಾನ್ ಭಾರತೀಯ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಸರಿಸುಮಾರು 5% ಪಾಲನ್ನು ಪಡೆದುಕೊಳ್ಳುತ್ತದೆ.

Amazon In Talks To Buy 2 Billion Dollar Stake In Bharti Airtel

ಅಮೆಜಾನ್ ಮತ್ತು ಭಾರ್ತಿ ಏರ್‌ಟೆಲ್ ನಡುವಿನ ಚರ್ಚೆಗಳು ಭಾರ್ತಿ ಟೆಲಿಕಾಂ ಪ್ರತಿಸ್ಪರ್ಧಿ ಜಿಯೋವನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ನ ಡಿಜಿಟಲ್ ಆರ್ಮ್ ಮೇಲೆ ಜಾಗತಿಕ ಹೂಡಿಕೆದಾರರು ಹೆಚ್ಚು ಹಣ ಹೂಡುತ್ತಿರುವ ಸಂದರ್ಭದಲ್ಲಿ ಬಂದಿದೆ.

50 ಸಾವಿರ ಮಂದಿಗೆ ಉದ್ಯೋಗವಕಾಶವಿದೆ: ಅಮೆಜಾನ್50 ಸಾವಿರ ಮಂದಿಗೆ ಉದ್ಯೋಗವಕಾಶವಿದೆ: ಅಮೆಜಾನ್

ರಿಲಯನ್ಸ್‌ನ ಡಿಜಿಟಲ್ ಘಟಕದಲ್ಲಿ ಇತ್ತೀಚಿನ ವಾರಗಳಲ್ಲಿ ಫೇಸ್‌ಬುಕ್, ಕೆಕೆಆರ್ ಮತ್ತು ಇತರರಿಂದ 10 ಬಿಲಿಯನ್ ಡಾಲರ್ ಹಣ ಸಂಗ್ರಹಿಸಿದೆ.

Amazon In Talks To Buy 2 Billion Dollar Stake In Bharti Airtel

ಭಾರ್ತಿ ಮತ್ತು ಅಮೆಜಾನ್ ನಡುವಿನ ಮಾತುಕತೆ ಆರಂಭಿಕ ಹಂತದಲ್ಲಿದೆ ಮತ್ತು ಒಪ್ಪಂದದ ನಿಯಮಗಳು ಬದಲಾಗಬಹುದು, ಅಥವಾ ಒಪ್ಪಂದಕ್ಕೆ ಬರಬಾರದು ಎಂದು ಮೂರು ಮೂಲಗಳಲ್ಲಿ ಎರಡು ತಿಳಿಸಿವೆ. ಇವೆಲ್ಲ ಚರ್ಚೆಗಳು ಗೌಪ್ಯವಾಗಿರುವುದರಿಂದ ತಿಳಿಸಲು ನಿರಾಕರಿಸಿದೆ.

English summary
Amazon.com is in early-stage talks to buy a stake worth at least $2 billion in Indian mobile operator Bharti Airtel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X