Get Updates
Get notified of breaking news, exclusive insights, and must-see stories!

ದೀಪಾವಳಿ ಹಬ್ಬಕ್ಕಾಗಿ ಅಮೆಜಾನ್ ನಿಂದ ಮತ್ತೆ ಭರ್ಜರಿ ಆಫರ್

ಬೆಂಗಳೂರು, ಅಕ್ಟೋಬರ್ 31: ದಸರಾ ಹಬ್ಬದ ನಂತರ ಈಗ ದೀಪಾವಳಿ ಹಬ್ಬಕ್ಕಾಗಿ ಆನ್ ಲೈನ್ ರೀಟೈಲ್ ಮಾರಾಟ ಸಂಸ್ಥೆ ಅಮೆಜಾನ್ ಇಂಡಿಯಾ ಸಜ್ಜಾಗಿದೆ.

ಕಳೆದ ಒಂದೂವರೆ ತಿಂಗಳಿನಲ್ಲಿ ಮೂರನೇ ಬಾರಿಗೆ ಈ ರೀತಿ ಡಿಸ್ಕೌಂಟ್ ಸೇಲ್ ಕೊಡುಗೆ ನೀಡುತ್ತಿದೆ. ಅಮೆಜಾನ್ ನ ಗ್ರೇಟ್ ಇಂಡಿಯಾ ಫೆಸ್ಟಿವಲ್ ದೀಪಾವಳಿ ಸೇಲ್ ನವೆಂಬರ್ 2ರಿಂದ ಶುರುವಾಗಲಿದೆ. ನವೆಂಬರ್ 2 ರ ಮಧ್ಯರಾತ್ರಿ 11.59 ರಿಂದ ಶುರುವಾಗಿ ನವೆಂಬರ್ 5ರವರೆಗೆ ಈ ಸೇಲ್ ನಡೆಯಲಿದೆ.

ಅಮೆಜಾನ್ ನಲ್ಲಿ ಹೆಚ್ಚಾಗಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಜೋರಾಗಿದೆ. ಸ್ಮಾರ್ಟ್ ಫೋನ್, ಎಚ್ ಡಿ ಟಿವಿ, ಫ್ರಿಜ್, ಫ್ಯಾಷನ್ ಉತ್ಪನ್ನ, ಮೇಲೆ ಭಾರೀ ರಿಯಾಯಿತಿ ಸಿಗಲಿದೆ.

Amazon Great Indian Festival from Nov 2: Offers on OnePlus 6T

ಎಚ್ ಡಿ ಎಫ್ ಸಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೇಲೆ ಶೇಕಡಾ 10ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಮೊದಲ ದಿನ 500 ರೂಪಾಯಿಗಿಂತ ಹೆಚ್ಚು ಶಾಪಿಂಗ್ ಮಾಡಿದರೆ, ಚಲನಚಿತ್ರ ಹಾಗೂ ರಿಚಾರ್ಜ್ ವೋಚರ್ ದೊರೆಯಲಿದೆ.

ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನ್ ಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಮುಗಿದಿದೆ ಇದಲ್ಲದೆ, ರೆಡ್ಮಿ 6ಎ ಫೋನ್ ಪ್ರತಿ ದಿನ 12 ಗಂಟೆಗೆ ಫ್ಲಾಶ್ ಸೇಲ್ ನಲ್ಲಿ ಗ್ರಾಹಕರಿಗೆ ಸಿಗಲಿದೆ. ಎಂಐ ಟಿವಿ ಮಾರಾಟವು ಪ್ರತಿ ದಿನ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಲ್ಯಾಪ್ ಟಾಪ್ ಗಳ ಮೇಲೆ 25 ಸಾವಿರದವರೆಗೆ ರಿಯಾಯಿತಿ ಸಿಗಲಿದೆ. ಜತೆಗೆ ಆಕರ್ಷಕ ಕ್ಯಾಶ್ ಬ್ಯಾಕ್ ,ಇವಿಎಂ ಸೌಲಭ್ಯಗಳು ಲಭ್ಯವಿರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+