ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಸಗಟು ವಿತರಣಾ ವ್ಯವಹಾರ ಮುಚ್ಚಿದ ಅಮೆಜಾನ್

|
Google Oneindia Kannada News

ನವದೆಹಲಿ, ನವೆಂಬರ್‌ 29: ವೆಚ್ಚವನ್ನು ಕಡಿತಗೊಳಿಸುವ ಜಾಗತಿಕ ಕ್ರಮದ ಭಾಗವಾಗಿ ಕೆಲವು ವಿಭಾಗಗಳನ್ನು ಮುಚ್ಚುತ್ತಿರುವ ಇ ಕಾಮರ್ಸ್‌ ಸಂಸ್ಥೆ ಅಮೆಜಾನ್ ಸೋಮವಾರ ಭಾರತದಲ್ಲಿ ತನ್ನ ಸಗಟು ವಿತರಣಾ ವ್ಯವಹಾರವನ್ನು ಮುಚ್ಚುವುದಾಗಿ ಘೋಷಿಸಿದೆ.

ಜಗತ್ತಿನ ಇ-ಕಾಮರ್ಸ್ ದಿಗ್ಗಜ ಎನಿಸಿರುವ ಅಮೆಜಾನ್ ವಿತರಣೆಯನ್ನು ಸ್ಥಗಿತಗೊಳಿಸುತ್ತಿದೆ. ಅದರ ಸಗಟು ಇ-ಕಾಮರ್ಸ್ ವೆಬ್‌ಸೈಟ್ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಕೆಲವು ಭಾಗಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಫುಡ್‌ ಡೆಲಿವರಿ ವ್ಯವಹಾರ ಮುಚ್ಚಲಿದೆ ಅಮೆಜಾನ್‌ಭಾರತದಲ್ಲಿ ಫುಡ್‌ ಡೆಲಿವರಿ ವ್ಯವಹಾರ ಮುಚ್ಚಲಿದೆ ಅಮೆಜಾನ್‌

ಕಂಪನಿಯು ಈ ಹಿಂದೆ ತನ್ನ ಆಹಾರ ವಿತರಣೆ ಮತ್ತು ಅಕಾಡೆಮಿ ಇನ್ ಇಂಡಿಯಾ ಎಂಬ ಆನ್‌ಲೈನ್ ಕಲಿಕಾ ವೇದಿಕೆಯನ್ನು ಮುಚ್ಚಿತ್ತು. ಬಳಿಕ "ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಪ್ರಸ್ತುತ ಗ್ರಾಹಕರು ಮತ್ತು ಪಾಲುದಾರರನ್ನು ನೋಡಿಕೊಳ್ಳಲು ನಾವು ಈ ಕಾರ್ಯಕ್ರಮವನ್ನು ಹಂತ ಹಂತವಾಗಿ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದರು.

Amazon closes wholesale distribution business in Bengaluru

ದೇಶದಲ್ಲಿ ಸ್ಥಳೀಯ ಕಿರಾಣಿ ಅಂಗಡಿಗಳು, ಫಾರ್ಮಸಿಗಳು ಮತ್ತು ಡಿಪಾರ್ಟ್‌ಮೆಂಟ್ ಸ್ಟೋರ್‌ಗಳನ್ನು ಸಶಕ್ತಗೊಳಿಸಲು ಅಮೆಜಾನ್ ತನ್ನ ವಿತರಣಾ ಸೇವೆಯನ್ನು ಪ್ರಾರಂಭಿಸಿತ್ತು. ಕಳೆದ ವಾರ ಅಮೆಜಾನ್ ದೇಶದಲ್ಲಿ ತನ್ನ ಎಜುಟೆಕ್‌ ಅಕಾಡೆಮಿಯನ್ನು ಮುಚ್ಚುವುದಾಗಿ ಘೋಷಿಸಿದ ಒಂದು ದಿನದ ನಂತರ ತನ್ನ ಆಹಾರ ವಿತರಣಾ ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು.

ಅಮೆಜಾನ್ ಭಾರತದಲ್ಲಿ ತನ್ನ ಆಹಾರ ವಿತರಣಾ ಸೇವೆಯನ್ನು ಮೇ 2020ರಲ್ಲಿ ಪ್ರಾರಂಭಿಸಿತ್ತು. ನಮ್ಮ ವಾರ್ಷಿಕ ಆಪರೇಟಿಂಗ್ ಯೋಜನೆ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ ನಾವು ಅಮೆಜಾನ್‌ ಫುಡ್ ಡೆಲಿವರಿ ವಿಭಾಗವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮಾಡಿದ್ದೇವೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಆದರೆ ಕಂಪನಿಯು ಭಾರತದಲ್ಲಿ ಜನರನ್ನು ವಜಾಗೊಳಿಸುವುದನ್ನು ನಿರಾಕರಿಸಿದೆ.

Amazon closes wholesale distribution business in Bengaluru

ಈ ಹಿಂದೆ ಅಮೆಜಾನ್‌ 10,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿತ್ತು. ಕಾರ್ಪೊರೇಟ್ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿಯು ಯೋಜಿಸುತ್ತಿರುವುದರಿಂದ ಅನಿಶ್ಚಿತ ಸ್ಥೂಲ ಆರ್ಥಿಕ ವಾತಾವರಣವು ಇ ಕಾಮರ್ಸ್ ಕಂಪೆನಿ ಅಮೆಜಾನ್ ತನ್ನ ಜಾಗತಿಕ ಉದ್ಯೋಗಿಗಳನ್ನು ಕಡಿಮೆ ಮಾಡುತ್ತಿದೆ ಎಂದು ರಾಯಿಟರ್ಸ್ ಕಳೆದ ವಾರ ವರದಿ ಮಾಡಿತ್ತು.

English summary
E-commerce giant Amazon on Monday announced the closure of its wholesale distribution business in India as part of a global drive to cut costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X