ಏನಿದು ಜಿಯೋ ಧನ್ ಧನಾ ಧನ್? ಇಲ್ಲಿದೆ ಫುಲ್ ಡಿಟೇಲ್

ರಿಲಯನ್ಸ್ ಜಿಯೋ ಧನ್ ಧನಾ ಧನ್ ಆಫರ್- ಹಳೆ ಬಾಟಲಿಯಲ್ಲಿ ಹೊಸ ವೈನ್ ಎಂದು ಏರ್ ಟೆಲ್ ಟೀಕಿಸಿದೆ. ಜಿಯೋ ನೀಡಿರುವ ಈ ಆಫರ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಮುಂಬೈ, ಏಪ್ರಿಲ್ 13: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನೀಡಿರುವ ಹೊಸ ಪ್ರೊಮೋಷನ್ ಆಫರ್ ನಲ್ಲಿ ಏನಿಲ್ಲ, ಇದು ಹಳೆ ಬಾಟಲಿಯಲ್ಲಿ ಹೊಸ ವೈನ್ ಎಂದು ಏರ್ ಟೆಲ್ ಟೀಕಿಸಿದೆ. ಜಿಯೋ ನೀಡಿರುವ ಈ ಆಫರ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್ ) ಸಲಹೆಯ ಮೇರೆಗೆ ತನ್ನ ಜಿಯೋ ಸಮ್ಮರ್ ಸರ್ಪ್ರೈಸ್ ಅನ್ನು ಸಂಪೂರ್ಣವಾಗಿ ಹಿಂಪಡೆದು ಈ ಹೊಸ ಆಫರ್ ಧನ್ ಧನಾ ಧನ್ ತನ್ನ ಗ್ರಾಹಕರಿಗೆ ನೀಡಿದೆ. [ಜಿಯೋ ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್]

* ಜಿಯೋ ಪ್ರೈಮ್ ಸದಸ್ಯರಿಗಾಗಿ ವಿಶಿಷ್ಟವಾಗಿ, ವಿಶೇಷ ಅನುಕೂಲಗಳೊಂದಿಗೆ ಎಲ್ಲಾ ಅನಿಯಮಿತ ಪ್ಲಾನ್ ಗಳನ್ನು ಜಿಯೋ ಘೋಷಿಸಿದೆ.
* ಜಿಯೋ ಚಂದಾದಾರರು ಯಾವುದೇ ನಿರ್ಬಂಧವಿಲ್ಲದೆ ಡಿಜಿಟಲ್ ಲೈಫ್ ಅನ್ನು ಹೊಂದಲಿ ಎಂದು ಜಿಯೋ ಧನ್ ಧನಾ ಧನ್ ಆಫರ್ ನೀಡುತ್ತಿದೆ.

All you need to Know about Reliance Jio Dhan Dhana Dhan Offer

* ಆರಂಭಿಕ ಪ್ಲಾನ್ 309 ರು ನಿಂದ ಎಲ್ಲಾ ಅನಿಯಮಿತ ಪ್ಲಾನ್ ಅನಿಯಮಿತ ಎಸ್‌ಎಂಎಸ್, ಕರೆ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್‌ನಲ್ಲಿ 1 ಜಿಬಿ ಡಾಟಾ)ವನ್ನು ಮೊದಲ ರಿಚಾರ್ಜ್‌ನ 3 ತಿಂಗಳ ಕಾಲ ನೀಡಲಿದೆ.

* 509 ರು.ನ ಎಲ್ಲಾ ಅನಿಯಮಿತ ಪ್ಲಾನ್ ಘೋಷಿಸಿದ್ದು, ಇದು ಪ್ರತಿದಿನ ಅಧಿಕ ಡಾಟಾ ಬಳಕೆದಾರರಿಗೆ ಅನಿಯಮಿತ ಎಸ್‌ಎಂಎಸ್, ಕರ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್‌ನಲ್ಲಿ 2ಜಿಬಿ)ವನ್ನು ಮೊದಲ ರಿಚಾರ್ಜ್‌ನ 3 ತಿಂಗಳ ಕಾಲ ನೀಡಲಿದೆ.

* ಜಿಯೋ ಪ್ರೈಮ್ ಸದಸ್ಯರಿಗೆ ಲಭ್ಯವಿರುವ ವಿಶೇಷ ಸೌಲಭ್ಯಗಳನ್ನು ಪರಿಗಣಿಸಿ, ಜಿಯೋ ಪ್ರೈಮ್ ಅನ್ನು ಯಾವುದೋ ಕಾರಣಕ್ಕೆ ಚಂದಾ ಮಾಡಿಕೊಳ್ಳಲು ಸಾಧ್ಯವಾಗದ ಗ್ರಾಹಕರು 408 ರೂ. ಅಥವಾ 608 ರೂ. (ಜಿಯೋ ಪ್ರೈಮ್ + ರಿಚಾರ್ಜ್ ಬೆಲೆ) ಪಾವತಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

* ಈಗ ಚಾಲ್ತಿಯಲ್ಲಿರುವ ಜಿಯೋ ಗ್ರಾಹಕರು, ಈ ತನಕ ಮೊದಲ ರಿಚಾರ್ಜ್ ಮಾಡಿಸದವರು, ಸೇವೆಯ ಪದಚ್ಯುತಿ ಮತ್ತು ಅಥವಾ ಸಂಪರ್ಕ ಕಡಿತವನ್ನು ತಪ್ಪಿಸಲು 15 ಏಪ್ರಿಲ್ 2017ಕ್ಕಿಂತ ಮೊದಲು ಮಾಡಬೇಕಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+