ಸನ್ ಟಿವಿ Nxt ಆಪ್ 4000 ಸಿನಿಮಾಗಳ ಆಗರ

Posted By:
Subscribe to Oneindia Kannada

ಬೆಂಗಳೂರು, ಜೂನ್ 14: ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಆಪ್ ಆಧಾರಿತ ಮನರಂಜನಾ ಸೌಲಭ್ಯಕ್ಕೆ ಸನ್‌ ನೆಟ್‌ವರ್ಕ್ ಹೊಸದಾಗಿ ಸೇರ್ಪಡೆಯಾಗಿದೆ. ಸನ್ ನೆಟ್ವರ್ಕ್ ತನ್ನ ಸನ್‌ ನೆಕ್ಸ್ಟ್ (Sun next) ಅಪ್ಲಿಕೇಷನ್ ಇತ್ತೀಚೆಗೆ ಬಿಡುಗಡೆ ಮಾಡಿದೆ.

4000 ಕ್ಕಿಂತ ಹೆಚ್ಚು ಸಿನಿಮಾ ಮತ್ತು ಮನರಂಜನಾ ಕಾರ್ಯಕ್ರಮುಗಳು ಮತ್ತು ಟಿವಿ ಸೀರಿಯಲ್‌ಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು 'ಸನ್‌ ನೆಕ್ಸ್ಟ್' ಡಿಜಿಟಲ್ ಆಪ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

All you Need to Know about Sun TV Network App Sun Next

ಆಫರ್ ಕೊಟ್ಟಿರುವುದು ನೋಡಿದರೆ 'ಸನ್‌ ನೆಕ್ಸ್ಟ್' ಆಪ್ ಒಂದು ಉತ್ತಮ ಆಪ್‌ ಎನ್ನಬಹುದು. ಆದರೆ, ಹಾಟ್ ಸ್ಟಾರ್ ಗೆ ಹೋಲಿಸಿದರೆ ಸನ್ ನೆಕ್ಸ್ಟ್ ಉಚಿತವಾಗಿ ವೀಕ್ಷಣೆಗೆ ಲಭ್ಯವಿಲ್ಲ. ಉತ್ತಮ ಇಂಟರ್ನೆಟ್ ಸೌಲಭ್ಯವಿದ್ದರೆ ಸಾಕು. ಸದ್ಯಕ್ಕೆ ಒಂದು ತಿಂಗಳ ಪ್ರಾಯೋಗಿಕ ವೀಕ್ಷಣೆ ಲಭ್ಯವಿದೆ. ನಂತರ ಕನಿಷ್ಠ 50 ರು ನಂತೆ ರೀಚಾರ್ಜ್ ಮಾಡಿಸಿಕೊಂಡು ನಿಮ್ಮ ನೆಚ್ಚಿನ ಚಾನೆಲ್ ನೋಡಬಹುದು.

ಸನ್ ಟಿವಿ ಸಮೂಹದ ಟಿವಿ ಚಾನೆಲ್ ಗಳಲ್ಲದೆ, ತಂತಿ ಟಿವಿ, ನ್ಯೂಸ್ 7 ವಾಹಿನಿಗಳ ಕಾರ್ಯಕ್ರಮಗಳು ಆಪ್ ನಲ್ಲಿ ಲಭ್ಯ. ಆಂಡ್ರಾಯ್ಡ್ ಹಾಗೂ ಐಒಎಸ್ ಫೋನ್ ಗಳಲ್ಲಿ ಸನ್ ನೆಸ್ಟ್ ಬಳಸಬಹುದು.

* ಇದೊಂದು ದುಡ್ಡು ಕೊಟ್ಟು ಬಳಸಬಹುದಾದ ಅಪ್ಲಿಕೇಷನ್. ಒಮ್ಮೆ ಡೌನ್ ಲೋಡ್ ಆದ ಬಳಿಕ, ಪೇಮೆಂಟ್ ಮಾಡಲು ಸೂಚನೆ ಸಿಗಲಿದೆ.
* ಪೇಮೆಂಟ್ ಆಟೋ ರಿನಿವಲ್ ಮಾದರಿಯಾಗಿರುವುದರಿಂದ ಎರಡನೇ ತಿಂಗಳ ಆರಂಭಕ್ಕೆ ಮುನ್ನವೇ ಆರಂಭಿಕ ಮೊತ್ತ 50ರು ನಿಮ್ಮ ವ್ಯಾಲೆಟ್ ನಿಂದ ಕಡಿತಗೊಳ್ಳಲಿದೆ.

SunNxt App

* ಆಪ್ ಬಳಸಲು ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಬಳಸಬೇಕಾಗುತ್ತದೆ. ಒಂದು ಖಾತೆಯಿಂದ 3 ಲಾಗ್ ಇನ್ ಬಳಸಬಹುದಾಗಿದೆ.
* ಸುಮಾರು 4000ಪ್ಲಸ್ ದಕ್ಷಿಣ ಭಾರತದ ಸಿನಿಮಾ, ವಿಡಿಯೋ, ಟಿವಿ ಸೀರಿಯಲ್, ರಿಯಾಲಿಟಿ ಶೋ ಗಳು ಲಭ್ಯ.

* ಸನ್ ನೆಕ್ಸ್ಟ್ ಚಂದಾದಾರಿಕೆ ಮೊತ್ತ ಮೊದಲ ತಿಂಗಳು 50ರು, 3 ತಿಂಗಳಿಗೆ 130ರು, 485ರು ವಾರ್ಷಿಕ ಚಂದಾ ನಿಗದಿಯಾಗಿದೆ. ನೆಟ್ ಫ್ಲಿಕ್ಸ್ ಆರಂಭಿಕಮೊತ್ತ 500ರು, ಅಮೆಜಾನ್ ಪ್ರೈಮ್ 500ರು, ಹಾಟ್ ಸ್ಟಾರ್ ಪ್ರೀಮಿಯಂ 199ರು ಪ್ರತಿ ತಿಂಗಳ ದರವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All you Need to Know about Sun TV Network App Sun Next. Sun nxt is a Hotstar like app for watching all sun network channel shows online.star network app Hotstar is free, but sun tv app is paid.
Please Wait while comments are loading...