• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಟೈಮ್ 100 ನೆಕ್ಸ್ಟ್' ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ

|
Google Oneindia Kannada News

ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಪುತ್ರನ ಹೆಸರು ಟೈಮ್ ನಿಯತಕಾಲಿಕದ 'ಟೈಮ್ 100 ನೆಕ್ಸ್ಟ್' ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಗೆ ಸೇರ್ಪಡೆಗೊಂಡ ಏಕೈಕ ಭಾರತೀಯ ಆಕಾಶ್ ಅಂಬಾನಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಭಾರತೀಯ ಮೂಲದ ಅಮೇರಿಕನ್ ಪ್ರಜೆ ಅಮರಪಾಲಿ ಗಾನಾ ಕೂಡ ಟೈಮ್ಸ್‌ನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಆಕಾಶ್ ಅಂಬಾನಿ 100 ನೆಕ್ಸ್ಟ್‌ಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡ ನಂತರ, ಟೈಮ್ಸ್ ತನ್ನ ನಿಯತಕಾಲಿಕದಲ್ಲಿ ಅವರ ಬಗ್ಗೆ ದೊಡ್ಡ ವಿಷಯವನ್ನು ಬರೆದಿದೆ. ಅವರ ಬಗ್ಗೆ ಪ್ರತಿಕ್ರಿಯಿಸಿದ ಟೈಮ್ ಮ್ಯಾಗಜೀನ್, ಭಾರತದ ದೊಡ್ಡ ಕೈಗಾರಿಕಾ ಸಂಸ್ಥೆಗೆ ಸೇರಿದ ಆಕಾಶ್ ಅಂಬಾನಿ ಮುಂಬರುವ ದಿನಗಳಲ್ಲಿ ರಿಲಯನ್ಸ್ ಜಿಯೋವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ ಎಂದು ಬರೆದುಕೊಂಡಿದೆ.

ಟೈಮ್ ಮ್ಯಾಗಜೀನ್ ನೀಡುವ ಈ ಟೈಮ್ಸ್ 100 ನೆಕ್ಸ್ಟ್ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಉದ್ಯಮಿಗಳ ವ್ಯಕ್ತಿಗಳ ಪಟ್ಟಿಯಲ್ಲಿ ಅಂಬಾನಿ ಅವರ ಮಗನ ಹೆಸರು ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ವ್ಯಾಪಾರ ಮತ್ತು ಇತರ ಕ್ಷೇತ್ರಗಳ ಉದಯೋನ್ಮುಖ ತಾರೆಗಳಿಗೆ ಸ್ಥಾನ ನೀಡಲಾಗಿದೆ.

Akash Ambani named to Times list of 100 emerging leaders as the only Indian

ಆಕಾಶ್ ಅಂಬಾನಿ ಹೇಗೆ ಆಯ್ಕೆಯಾದರು?
ಮುಖೇಶ್ ಅಂಬಾನಿಯ ಹಿರಿಯ ಪುತ್ರ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಕಮಾಂಡ್ ನೀಡಲಾಗಿದೆ. 'ಟೈಮ್ 100 ನೆಕ್ಸ್ಟ್'ನಲ್ಲಿ ಆಕಾಶ್ ಅಂಬಾನಿ ಸೇರ್ಪಡೆಗೊಂಡಿರುವ ವರ್ಗವು ನಾಯಕರ ವರ್ಗವಾಗಿದೆ. ಇತ್ತೀಚೆಗೆ ಆಕಾಶ್ ಅಂಬಾನಿ ಗೂಗಲ್ ಮತ್ತು ಫೇಸ್‌ಬುಕ್‌ನೊಂದಿಗೆ ರಿಲಯನ್ಸ್ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಗೂಗಲ್ ಮತ್ತು ಫೇಸ್‌ಬುಕ್ ಜೊತೆಗಿನ ಒಪ್ಪಂದದಲ್ಲಿ ಆಕಾಶ್ ಅಂಬಾನಿ 5ಜಿ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಘೋಷಿಸುವ ಯೋಜನೆ ಹೊಂದಿದ್ದಾರೆ ತಾವೇ ಹೇಳಿಕೊಂಡಿದ್ದಾರೆ.

ರಿಲಯನ್ಸ್ ಜಿಯೋ ಮತ್ತು ಆಕಾಶ್ ಅಂಬಾನಿ
ಆಕಾಶ್ ಅಂಬಾನಿ ಕೇವಲ 22ನೇ ವಯಸ್ಸಿನಲ್ಲಿ ಜಿಯೋ ಮಂಡಳಿಯಲ್ಲಿ ಸ್ಥಾನ ಪಡೆದರು. ಇದರ ನಂತರ ಅವರು ಜೂನ್ 2022ರಲ್ಲಿ ಅವರನ್ನು ರಿಲಯನ್ಸ್ ಜಿಯೋ ಅಧ್ಯಕ್ಷರನ್ನಾಗಿ ಮಾಡಲಾಯಿತು. ಸದ್ಯ ಆಕಾಶ್ ಅಂಬಾನಿಗೆ ಕೇವಲ 30 ವರ್ಷ. ರಿಲಯನ್ಸ್ ಜಿಯೋ ದೇಶಾದ್ಯಂತ ಸುಮಾರು 42 ಕೋಟಿ 60 ಲಕ್ಷ ಗ್ರಾಹಕರನ್ನು ಹೊಂದಿದೆ. ರಿಲಯನ್ಸ್ ಜಿಯೋ 700 MHz ಸ್ಪೆಕ್ಟ್ರಮ್ ಬ್ಯಾಂಡ್‌ನ್ನು ಖರೀದಿಸಿದ ಏಕೈಕ ಭಾರತೀಯ ಟೆಲಿಕಾಂ ಕಂಪನಿಯಾಗಿದೆ. ದಿಪಾವಳಿಗೆ 5G ಸೇವೆಯನ್ನು ನೀಡಲಿದ್ದೇವೆ ಎಂದು ಈ ಟೆಲಿಕಾಂ ಸಂಸ್ಥೆಯು ಗ್ರಾಹಕರಿಗೆ ಏನು ಕೊಡುಗೆ ನೀಡಲಿದೆ ಎಂಬುವುದು ಜಿಯೋ ಗ್ರಾಹಕರ ನಿರೀಕ್ಷೆಯಾಗಿದೆ.

English summary
Times 100 Next List: Mukesh Ambani son Akash Ambani named to Time's list of 100 emerging leaders as the only Indian Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X