ಆಧಾರ್ ಜತೆ ಸಿಮ್ ಜೋಡಣೆ, ಟೆಲಿಕಾಂ ಸಂಸ್ಥೆಗಳು ಸಿದ್ಧ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 22: ಒಟಿಪಿ ಬಳಸಿ ಮೊಬೈಲ್ ಫೋನ್ ಸಿಮ್ ನಂಬರ್ ಹಾಗೂ ಆಧಾರ್ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಜೋಡಣೆ ಮಾಡುವ ವಿಧಾನಕ್ಕೆ ಯುಐಡಿಎಐ ಒಪ್ಪಿಗೆ ಸೂಚಿಸಿದ್ದು, ಎಲ್ಲಾ ಪ್ರಮುಖ ಟೆಲಿಕಾಂ ಸಂಸ್ಥೆಗಳು ಈ ಬಗ್ಗೆ ಗ್ರಾಹಕರಿಗೆ ಸೂಚನೆ ನೀಡಲು ಆರಂಭಿಸಿವೆ.

ಆನ್‌ಲೈನ್‌ ಮೂಲಕ ಮೊಬೈಲ್‌ SIM- ಆಧಾರ್‌ ಜೋಡಿಸಿ

ಮೊಬೈಲ್ ನಂಬರ್ ಜತೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಕ್ಕೆ ಮೊಬೈಲ್ ಸೇವಾ ಸಂಸ್ಥೆಯ ಕಚೇರಿಗೆ ಗ್ರಾಹಕರು ಹೋಗುವುದು ಅನಿವಾರ್ಯವಾಗಿತ್ತು. ಆದರೆ, ಈಗ ನಾಲ್ಕು ಸರಳ ವಿಧಾನಗಳ ಬಗ್ಗೆ ಚರ್ಚಿಸಲಾಗಿತ್ತು. ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.

Airtel, Vodafone, Jio, Idea to roll out Aadhaar-sim linking via OTP

ಈಗ ಆನ್ ಲೈನ್ ಮೂಲಕ ಅಥವಾ ಒಟಿಪಿ ಬಳಸಿ ಸುಲಭವಾಗಿ ಜೋಡಣೆ ಮಾಡಬಹುದು. ಇದಕ್ಕೆ ಕೊನೆ ದಿನಾಂಕ ಫೆಬ್ರವರಿ 6 2018 ಕೊನೆ ದಿನಾಂಕವಾಗಿದ್ದು, ಈ ರೀತಿ ಜೋಡಣೆ ವಿಧಾನ ಡಿಸೆಂಬರ್ 01ರಿಂದ ಜಾರಿಗೆ ತರುವಂತೆ ಟೆಲಿಕಾಂ ಸಂಸ್ಥೆ ಗಳಿಗೆ ಸೂಚಿಸಲಾಗಿದೆ.

ಆಧಾರ್ ಹಾಗೂ ಸಿಮ್ ಜೋಡಣೆಯಾಗದಿದ್ದರೆ, ನಂಬರ್ ಏನಾಗಲಿದೆ?

ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಆಧಾರಿತ ಆಯ್ಕೆಯನ್ನು ಬಳಸಿಕೊಂಡು ಆಧಾರ್‌ ಸಂಖ್ಯೆಯನ್ನು ನೀಡಬಹುದು ಅಥವಾ ಮೊಬೈಲ್‌ ಸೇವೆ ಒದಗಿಸುವ ಕಂಪೆನಿಗಳ ಆ್ಯಪ್‌ ಮೂಲಕ ಲಾಗ್‌ ಇನ್‌ ಆಗಿ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡಬಹುದು.ಇದಲ್ಲದೇ, ಐವಿಆರ್‌ಎಸ್‌ (ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌) ಮೂಲಕವೂ ಮೊಬೈಲ್‌ ಸಂಖ್ಯೆಗೆ ಆಧಾರ್‌ ಅನ್ನು ಜೋಡಣೆ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Major telecom operators Airtel, Jio, Vodafone and Idea are all set to roll out the Aadhaar-sim linking via OTP as the Unique Identification Authority of India (UIDAI) has approved the blueprint presented by them to operationalise new modes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ