ಏರ್ ಟಿಕೆಟ್ ದರ ಸಮರ, ಏರ್ ಏಷ್ಯಾ ಎಂಟ್ರಿ ಆಫರ್

ಮುಂಬೈ, ನ.10: ದೇಶಿ ವಿಮಾನಕ್ಷೇತ್ರದಲ್ಲಿ ಮತ್ತೊಮ್ಮೆ ದರ ಇಳಿಕೆ ಸಮರ, ಪೈಪೋಟಿ, ಆಫರ್ ಗಳ ಸುರಿಮಳೆ ಆರಂಭಗೊಂಡಿದೆ. ಏರ್ ಏಷ್ಯಾಇಂಡಿಯಾ ತನ್ನ ಆರಂಭಿಕ ಕೊಡುಗೆಯಾಗಿ ಏಕಮುಖ ಪ್ರಯಾಣ ದರದಲ್ಲಿ ಭಾರಿ ರಿಯಾಯಿತಿ ಘೋಷಿಸಿದೆ.

ಕಡಿಮೆ ಬಜೆಟ್ ಏರ್ ಲೈನ್ಸ್ ಎನಿಸಿಕೊಂಡಿರುವ ಏರ್ ಏಷ್ಯಾ ಇಂಡಿಯಾ ತನ್ನ ಪ್ರಯಾಣಿಕರಿಗೆ 699 ರು ನಲ್ಲೇ ಪ್ರಯಾಣಿಸುವ ಆಫರ್ ನೀಡುತ್ತಿದೆ.ಮಲೇಷಿಯಾ ಮೂಲದ ಏರ್ ಏಷ್ಯಾ ಸಂಸ್ಥೆ ಬಿಗ್ ಸೇಲ್ ಮೂಲಕ ಕೌಲಾಲಂಪುರದಿಂದ ಭಾರತಕ್ಕೆ 2,599 ರು ದರದಲ್ಲೇ ಪ್ರಯಾಣಿಸುವ ಅವಕಾಶ ಒದಗಿಸಿತ್ತು. ಪ್ರಯಾಣಿಕರು ಏರ್ ಏಷ್ಯಾ ನೆಟ್ವರ್ಕ್ ನ ಏರ್ ಏಷ್ಯಾ ಬರ್ಹಾಡ್, ಥಾಯ್ ಏರ್ ಏಷ್ಯಾ ವಿಮಾನಗಳನ್ನೂ ಈ ಪ್ರಯಾಣಕ್ಕೆ ಬಳಸಿಕೊಳ್ಳಬಹುದಾಗಿತ್ತು.

AirAsia India joins fare war, puts one-way ticket at Rs 699

ಈಗ ದೇಶಿ ವಿಮಾನಯಾನದಲ್ಲಿ ದರ ಇಳಿಕೆ ಸಮರಕ್ಕೆ ನಾಂದಿ ಹಾಡಿರುವ ಏರ್ ಏಷ್ಯಾ, ಬೆಂಗಳೂರಿನಿಂದ ಚೆನ್ನೈ, ಕೊಚ್ಚಿ, ಗೋವಾ, ಜೈಪುರ, ಚಂಡೀಗಢ ಸೇರಿದಂತೆ ಇತರೆ ಮಾರ್ಗ ಗಳಿಗೆ ಏಕಮುಖ ಪ್ರಯಾಣಕ್ಕೆ ಕೇವಲ ರು.699 ಪಾವತಿಸಿದರೆ ಸಾಕು.

ಈ ವಿಶೇಷ ರಿಯಾಯಿತಿ ಸೌಲಭ್ಯ ಪಡೆಯಲು ಪ್ರಯಾಣಿಕರು ನವೆಂಬರ್ 16ರೊಳಗಾಗಿ ಏರ್ ಏಷ್ಯಾ ವೆಬ್ ಸೈಟ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕು ಹಾಗೂ 2015ರ ಜೂನ್ 10 ರಿಂದ 2016ರ ಜನವರಿ 17ರೊಳಗಾಗಿ ಪ್ರಯಾಣಿಸಬಹುದು ಎಂದು ಏರ್ ಏಷ್ಯಾ ಕಂಪನಿ ಸಿಇಒ ಮಿಟ್ಟು ಚಾಂಡಿಲ್ಯ ಹೇಳಿದ್ದಾರೆ.

ಕಳೆದ ಜೂನ್ 12 ರಂದು ಭಾರತದಲ್ಲಿ ಅತಿ ಕಡಿಮೆ ದರದ ವಿಮಾನಯಾನ ಸೇವೆಯನ್ನು ಏರ್ ಏಷ್ಯಾ ಇಂಡಿಯಾ ಆರಂಭಿಸಿತ್ತು. ಆರಂಭಿಕ ಹಂತದಲ್ಲಿ ಗೋವಾ ಮತ್ತು ಬೆಂಗಳೂರು ನಡುವೆ ಎರಡು ವಿಮಾನಗಳು ಸಂಚರಿಸಿತ್ತು. ತೆರಿಗೆ ಸೇರಿ ಪ್ರತಿ ಟಿಕೆಟ್ ಗೆ 990 ರು ದರಕ್ಕೆ ಪ್ರಯಾಣ ಸಾಧ್ಯವಾಗಿತ್ತು.[ವಿವರ ಇಲ್ಲಿ ಓದಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+