ಎಜಿಆರ್ ಬಾಕಿ ಪಾವತಿ: ಟೆಲಿಕಾಂ ಕಂಪೆನಿಗಳಿಗೆ 10 ವರ್ಷಗಳ ಸಮಯ ನೀಡಿದ ಸುಪ್ರೀಂಕೋರ್ಟ್
ನವದೆಹಲಿ, ಸೆಪ್ಟೆಂಬರ್ 1: ದೂರಸಂಪರ್ಕ ಕಂಪೆನಿಗಳು ಬಾಕಿ ಉಳಿದಿರುವ 1.6 ಲಕ್ಷ ಕೋಟಿ ಹೊಂದಾಣಿಕೆಯ ಒಟ್ಟು ವರಮಾನ (ಎಜಿಆರ್) ಹಣವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲು ಸುಪ್ರೀಂಕೋರ್ಟ್ 10 ವರ್ಷಗಳ ಕಾಲಾವಕಾಶ ನೀಡಿದೆ.
ಇಷ್ಟು ದೊಡ್ಡ ಮೊತ್ತದ ಹಣವನ್ನು ಒಮ್ಮೆಲೆ ಪಾವತಿ ಮಾಡಲು ಹೊರೆಯಾಗುತ್ತದೆ ಎಂಬ ದೂರಸಂಪರ್ಕ ಕಂಪೆನಿಗಳ ವಾದವನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಕಂತುಗಳಲ್ಲಿ ಬಾಕಿ ಎಜಿಆರ್ ಪಾವತಿಸಲು ಅವಕಾಶ ನೀಡಿದೆ. ಟೆಲಿಕಾಮ್ ಕಂಪೆನಿಗಳು ಬಾಕಿ ಇರುವ ಮೊತ್ತದಲ್ಲಿ ಶೇ 10ರಷ್ಟು ಮೊದಲು ಪಾವತಿಸಬೇಕಿದೆ. ಬಳಿಕ ಉಳಿದ ಹಣವನ್ನು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕಂತುಗಳಲ್ಲಿ ನೀಡಬೇಕು.
ಒಂದು ವೇಳೆ ಟೆಲಿಕಾಮ್ ಕಂಪೆನಿಗಳು ಎಜಿಆರ್ ಬಾಕಿ ಪಾವತಿಸುವಲ್ಲಿ ವಿಫಲವಾದರೆ ಅದು ಹೆಚ್ಚಿನ ಬಡ್ಡಿ, ದಂಡ ಜತೆಗೆ ನ್ಯಾಯಾಂಗ ನಿಂದನೆಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸಹ ನ್ಯಾಯಪೀಠ ಎಚ್ಚರಿಕೆ ನೀಡಿದೆ. ಮುಂದೆ ಓದಿ.

ಏಪ್ರಿಲ್‌ನಿಂದ ಸಮಯ ಶುರು
ಎಜಿಆರ್ ಸಂಬಂಧಿಸಿದ ವಿವಾದದ ಅಂತಿಮ ತೀರ್ಪನ್ನು ಮಂಗಳವಾರ ಪ್ರಕಟಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ, 2021ರ ಏಪ್ರಿಲ್ 1ರಿಂದ ಎಜಿಆರ್ ಬಾಕಿಯ ಪಾವತಿ ಆರಂಭ ಮಾಡಬೇಕಿದ್ದು, ಹತ್ತು ವರ್ಷಗಳ ಬಳಿಕ 2031ರ ಮಾರ್ಚ್ 31ರವರಗೂ ಕಂತುಗಳ ರೂಪದಲ್ಲಿ ಎಲ್ಲ ಹಣವನ್ನು ಪಾವತಿಗೊಳಿಸಬೇಕು ಎಂದು ಸೂಚಿಸಿದೆ.

ಮರುಮೌಲ್ಯಮಾಪನ ಇಲ್ಲ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾವುದೇ ತೀರ್ಪಿನ ಮರುಮೌಲ್ಯಮಾಪನ ಮಾಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ವಾರ್ಷಿಕ ಕಂತುಗಳನ್ನು ಪ್ರತಿ ವರ್ಷ ಫೆಬ್ರವರಿ 7ರ ಒಳಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಸಮಯ ಕೇಳಿದ್ದ ಕಂಪೆನಿಗಳು
ಬಾಕಿ ಮೊತ್ತವನ್ನು ಪಾವತಿಸಲು ವಿವಿಧ ಸಮಯಾವಕಾಶಗಳನ್ನು ಟೆಲಿಕಾಮ್ ಕಂಪೆನಿಗಳು ಕೋರಿದ್ದವು. ಟಾಟಾ ಟೆಲಿಕಾಮ್ 7-10 ವರ್ಷದ ಅವಧಿ ಕೇಳಿದ್ದರೆ, ವೊಡಾಫೋನ್-ಐಡಿಯಾ 15 ವರ್ಷ ಸಮಯ ಬೇಕಾಗಬಹುದು ಎಂದು ತಿಳಿಸಿತ್ತು. ಭಾರ್ತಿ ಏರ್ಟೆಲ್ ಕೂಡ 15 ವರ್ಷದ ಸಮಯ ಕೋರಿತ್ತು. ಆದರೆ ದೂರ ಸಂಪರ್ಕ ಸಂವಹನ ಇಲಾಖೆಯು 20 ವರ್ಷಗಳ ಒಳಗೆ ಬಾಕಿ ಹಣ ಪಾವತಿಸಬೇಕೆಂಬ ಕೇಂದ್ರ ಸಂಪುಟದ ಪ್ರಸ್ತಾವವನ್ನು ಪ್ರತಿಪಾದಿಸಿತ್ತು.

ತರಂಗಾಂತರ ಮಾರಾಟ ಎನ್ಸಿಎಲ್‌ಟಿ ನಿರ್ಧಾರ
ಟೆಲಿಕಾಮ್ ಕಂಪೆನಿಗಳಿಗೆ ತರಂಗಾಂತರ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ವಿಚಾರಣೆ ನಡೆಸಿರುವ ಕೋರ್ಟ್, ತರಂಗಾಂತರಗಳನ್ನು ಮಾರಾಟ ಮಾಡಬಹುದೇ ಅಥವಾ ಇಲ್ಲವೇ ಎಂದು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿರ್ಧರಿಸಲಿದೆ ಎಂದು ತಿಳಿಸಿದೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications