• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ, ಇನ್ಫೋಸಿಸ್ ಬಳಿಕ ಅಕ್ಸೆಂಚರ್‌ನಿಂದ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದು

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 7: ನೇಮಕಾತಿ ಪ್ರಕಿಯೆಗಳು ಸ್ವಲ್ಪ ಸಮಯದವರೆಗೆ ಟೆಕ್ ಉದ್ಯಮದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿ ಮಾರ್ಪಟ್ಟಿವೆ. ಹೊಸಬರನ್ನು ಆಯ್ಕೆ ಮಾಡಿದರೂ ಅವರ ಕೆಲಸಕ್ಕೆ ನಿಯೋಜಿಸಿಕೊಳ್ಳುವ ಪ್ರಕ್ರಿಯೆಯನ್ನು ತಡೆಹಿಡಿಯಲಾದ ಈ ರೀತಿಯ ಪ್ರಕರಣಗಳು ಒಂದರ ನಂತರ ಒಂದರಂತೆ ಸಂಭವಿಸುತ್ತಿವೆ.

ಇದರಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡುತ್ತಿದೆ. ಇನ್ಫೋಸಿಸ್‌, ವಿಪ್ರೋ ಮತ್ತು ಎಚ್‌ಸಿಎಲ್‌ ಕಂಪೆನಿಗಳಲ್ಲಿ ಫ್ರೆಶರ್‌ಗಳ ನೇಂಕಾತಿಯನ್ನು ತಡೆ ಹಿಡಿದ ನಂತರ ಈಗ ಆಕ್ಸೆಂಚರ್ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡ ಹೊಸ ಕಂಪನಿಯಾಗಿದೆ. ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ನಂತರ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ವಿಳಂಬದ ಪ್ರಕರಣಗಳು ಈಗ ಆಕ್ಸೆಂಚರ್‌ನಲ್ಲಿಯೂ ಮುಂಚೂಣಿಗೆ ಬಂದಿವೆ. ಕೆಲವು ಫ್ರೆಶರ್‌ಗಳು ತಮ್ಮ ಸ್ಥಿತಿಯ ಬಗ್ಗೆ ಮಾತನಾಡುತ್ತಾ ತಮ್ಮ ನೋವನ್ನು ವ್ಯಕ್ತಪಡಿಸಿದ್ದು, ಇವರ ಸಮಸ್ಯೆ ಬಗ್ಗೆ ಕಂಪನಿಯಾಗಲಿ, ಕಾಲೇಜಿನ ಪ್ಲೇಸ್ ಮೆಂಟ್ ಕಚೇರಿಯಾಗಲಿ ಗಮನಹರಿಸುತ್ತಿಲ್ಲ. ವರದಿಯ ಪ್ರಕಾರ, ಬಹುರಾಷ್ಟ್ರೀಯ ಐಟಿ ಕಂಪನಿ ಆಕ್ಸೆಂಚರ್ ಹೊಸ ಉದ್ಯೋಗಿಗಳನ್ನು ಸೇರ್ಪಡೆಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪಗಳನ್ನು ಎದುರಿಸುತ್ತಿದೆ.

ಫ್ರೆಶರ್‌ಗಳ ಆಫರ್ ಲೆಟರ್ ರದ್ದುಗೊಳಿಸಿದ ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ!ಫ್ರೆಶರ್‌ಗಳ ಆಫರ್ ಲೆಟರ್ ರದ್ದುಗೊಳಿಸಿದ ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ!

 ಆಫರ್ ಲೆಟರ್ ಕೊಟ್ಟು ಹಿಂದೇಟು

ಆಫರ್ ಲೆಟರ್ ಕೊಟ್ಟು ಹಿಂದೇಟು

2021ರ ನವೆಂಬರ್‌ನಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಆಕ್ಸೆಂಚರ್‌ನಲ್ಲಿ ಅಸೋಸಿಯೇಟ್ ಸಾಫ್ಟ್‌ವೇರ್ ಇಂಜಿನಿಯರ್ (ಎಎಸ್‌ಇ) ಆಗಿ ಆಯ್ಕೆಯಾಗಿರುವುದಾಗಿ ಎಂಜಿನಿಯರಿಂಗ್ ಕಾಲೇಜ್‌ನಿಂದ ಇತ್ತೀಚೆಗೆ ಉತ್ತೀರ್ಣರಾದ ವಿದ್ಯಾರ್ಥಿಯೊಬ್ಬರು ತಿಳಿಸಿದರು. ಈ ವರ್ಷ, ಏಪ್ರಿಲ್ 2022 ರ ಕೊನೆಯ ವಾರದಲ್ಲಿ ಆಫರ್ ಲೆಟರ್ ಕೂಡ ಅವರು ಸ್ವೀಕರಿಸಿದ್ದರು. ಆದರೆ ಕೆಲಸದ ನಿಯೋಜನೆ ಮಾತ್ರ ಮುಂದಕ್ಕೆ ಸಾಗಿಸಲಾಗುತ್ತಿದೆ. ಇತ್ತೀಚೆಗೆ ಇದಕ್ಕಾಗಿ ಸೆಪ್ಟೆಂಬರ್ 30ರ ದಿನಾಂಕವನ್ನು ನೀಡಲಾಗಿತ್ತು. ಆದರೆ ಅದನ್ನು ಮತ್ತೆ ಮುಂದಿನ ವರ್ಷ ಅಂದರೆ 2023 ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.

 ಕೆಲಸದ ನಿಯೋಜನೆ ದಿನಾಂಕ ಇನ್ನೂ ತೋರಿಸಿಲ್ಲ

ಕೆಲಸದ ನಿಯೋಜನೆ ದಿನಾಂಕ ಇನ್ನೂ ತೋರಿಸಿಲ್ಲ

ಇದು ಆಕ್ಸೆಂಚರ್‌ಗೆ ಸಂಬಂಧಿಸಿದ ಒಂದೇ ಪ್ರಕರಣವಲ್ಲ. ಇನ್ನೊಬ್ಬ ಅಭ್ಯರ್ಥಿ, ಈ ವರ್ಷದ ಏಪ್ರಿಲ್ 25 ರಂದು ನನಗೆ ಆಫರ್ ಲೆಟರ್ ನೀಡಲಾಯಿತು. ಅಲ್ಲದೆ ನನ್ನ ಎಲ್ಲಾ ದಾಖಲೆಗಳನ್ನು ಸಹ ಅನುಮೋದಿಸಲಾಗಿದೆ. ಆದರೆ ನನ್ನ ಕೆಲಸದ ನಿಯೋಜನೆ ದಿನಾಂಕವನ್ನು ನಾನು ಇನ್ನೂ ಸ್ವೀಕರಿಸಿಲ್ಲ. ಅವರು ಕೆಲಸಕ್ಕೆ ಸೇರಿಕೊಳ್ಳುವ ಎರಡು ದಿನಗಳ ಮೊದಲು ಅವರ ನೇಮಕ ದಿನಾಂಕವನ್ನು ರದ್ದುಗೊಳಿಸಲಾಗಿದೆ ಮತ್ತು ವಿಸ್ತರಿಸಲಾಗಿದೆ. ಕಂಪೆನಿಯು ಆನ್‌ಬೋರ್ಡಿಂಗ್ ದಿನಾಂಕವನ್ನು ಪಡೆದ ನಂತರ ನಾನು ನನ್ನ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಕೊಂಡಿದ್ದೆ. ಅಲ್ಲದೆ ಹೊಸ ನಗರಕ್ಕೆ ಹೋಗಲು ಟಿಕೆಟ್‌ಗಳನ್ನು ಕಾಯ್ದಿರಿಸಿದೆ. ಆದರೆ ಸೇರುವ ಎರಡು ದಿನಗಳ ಮೊದಲು, ಕಂಪನಿಯು ಮತ್ತೆ ದಿನಾಂಕವನ್ನು ರದ್ದುಗೊಳಿಸಿತು ಎಂದು ಹೇಳಿದರು.

 ಕಾಲೇಜು ಪ್ಲೇಸ್‌ಮೆಂಟ್ ಸೆಲ್ ಕೂಡ ಕೈಚೆಲ್ಲಿದೆ

ಕಾಲೇಜು ಪ್ಲೇಸ್‌ಮೆಂಟ್ ಸೆಲ್ ಕೂಡ ಕೈಚೆಲ್ಲಿದೆ

ಅಭ್ಯರ್ಥಿಯೊಬ್ಬರು ಆಕ್ಸೆಂಚರ್‌ನಲ್ಲಿ ಉದ್ಯೋಗ ಪಡೆಯಲು ಟಿಸಿಎಸ್, ವಿಪ್ರೋ ಮತ್ತು ಎಚ್‌ಸಿಎಲ್‌ ಟೆಕ್‌ನಂತಹ ಕಂಪನಿಗಳ ಆಫರ್‌ಗಳನ್ನು ತಿರಸ್ಕರಿಸಿದ್ದೇನೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿ ಖಿನ್ನನಾಗಿದ್ದೇನೆ. ಟೆಕ್ ಕಂಪನಿಗಳ ಈ ಹಿಂಜರಿಕೆಗೆ ಬಲಿಯಾದ ಅಭ್ಯರ್ಥಿಗಳು ಈ ಕಷ್ಟದ ಸಮಯದಲ್ಲಿ ನಮಗೆ ಕಾಲೇಜು ಪ್ಲೇಸ್‌ಮೆಂಟ್ ಸೆಲ್ ಸಹಾಯ ಮಾಡಬೇಕಾಗಿತ್ತು ಆದರೆ ಅವರು ಯಾವುದೇ ಉತ್ತರವನ್ನು ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಗ್ರೇಟರ್ ನೋಯ್ಡಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯದಿಂದ ಇತ್ತೀಚೆಗೆ ಉತ್ತೀರ್ಣರಾದ ಪದವೀಧರರು ನಾನು ಕ್ಯಾಂಪಸ್ ಪ್ಲೇಸ್‌ಮೆಂಟ್ ಸೆಲ್ ಮೂಲಕ ಆಯ್ಕೆಯಾಗಿದ್ದೇನೆ, ಆದರೆ ಈಗ ಅವರು ನನ್ನ ದೂರುಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದರು.

 ಹೊಸ ಉದ್ಯೋಗಿಗಳಿಗೆ ಭವಿಷ್ಯದ ಚಿಂತೆ

ಹೊಸ ಉದ್ಯೋಗಿಗಳಿಗೆ ಭವಿಷ್ಯದ ಚಿಂತೆ

ಅಕ್ಸೆಂಚರ್‌ಗೆ ಮೊದಲು ವಿಪ್ರೋ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ ಮತ್ತು ಕ್ಯಾಪ್‌ಜೆಮಿನಿ ಕೂಡ ಇತ್ತೀಚೆಗೆ ನೇಮಕಾತಿ ವಿಳಂಬ ಮಾಡಿವೆ. ಕೆಲಸದ ನಿಯೋಜನೆಯಲ್ಲಿ ವಿಳಂಬ ಮಾತ್ರವಲ್ಲದೆ ಕಂಪನಿಯು ಆಫರ್ ಲೆಟರ್ ನೀಡಿದ ನಂತರ ಸೇರಲು ನಿರಾಕರಿಸುವ ಮೂಲಕ ಫ್ರೆಶರ್‌ಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ. ಟೆಕ್ ಕಂಪನಿಗಳ ಈ ಧೋರಣೆಯಿಂದ ಹೊಸ ಉದ್ಯೋಗಿಗಳು ಸಮಸ್ಯೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಅವರಲ್ಲಿ ಭವಿಷ್ಯದ ಕಾಳಜಿಯೂ ಹೆಚ್ಚಿದೆ.

ವಿಪ್ರೋ, ಇನ್ಫೋಸಿಸ್‌ನಲ್ಲಿ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದು!ವಿಪ್ರೋ, ಇನ್ಫೋಸಿಸ್‌ನಲ್ಲಿ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದು!

English summary
Recruiting processes have become a hotly debated topic in the tech industry for quite some time now. Such cases are happening one after another where freshers have been selected but the process of posting to their jobs has been held up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X