ಸಿಲ್ವರ್ ಲೇಕ್ ಜೊತೆಗೆ ಕೆಕೆಆರ್ ಕೂಡ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆ?
ನವದೆಹಲಿ, ಸೆಪ್ಟೆಂಬರ್ 09: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಕಂಪನಿಗಳು ಮುಗಿ ಬಿದ್ದಂತೆ ಕಾಣುತ್ತಿದೆ. ಅಮೆರಿಕಾದ ಕಂಪನಿ ಸಿಲ್ವರ್ ಲೇಕ್ ಬಳಿಕ ಮತ್ತೊಂದು ಜಾಗತಿಕ ಹೂಡಿಕೆದಾರ ಸಂಸ್ಥೆ ಕೆಕೆಆರ್ ಕೂಡ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆಗೆ ಆಸಕ್ತಿ ತೋರಿದೆ.
Recommended Video
ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಕೆಕೆಆರ್ ಅಂಡ್ ಕೊ. 1 ಬಿಲಿಯನ್ ಡಾಲರ್ ಹೂಡಿಕೆ ಮಾಡಬಹುದು ಎನ್ನಲಾಗಿದೆ. ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 7,368 ಕೋಟಿ ರೂಪಾಯಿಗಳು.
ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಪಾಲಿಗಾಗಿ ಕೆಕೆಆರ್ ಚರ್ಚೆಯಲ್ಲಿದೆ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆಯು 1.5 ಬಿಲಿಯನ್‌ನಷ್ಟು ಹೂಡಿಕೆ ಮಾಡಬಹುದು ಮತ್ತು ಈ ತಿಂಗಳಲ್ಲಿಯೇ ಪ್ರಕಟಣೆ ಬರಬಹುದು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಅಮೆರಿಕಾ ಖಾಸಗಿ ಇಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‌ನರ್ಸ್ ಶೇ. 1.75 ರಷ್ಟು ಪಾಲನ್ನು ರಿಲಯನ್ಸ್ ರಿಟೇಲ್ ವೆಂಚರ್ಸ್ (ಆರ್ಆರ್‌ವಿಎಲ್) ಅನ್ನು, 7,500 ಕೋಟಿಗೆ ಪಡೆದುಕೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಇಂದು ಪ್ರಕಟಿಸಿದೆ.












Click it and Unblock the Notifications