ಮೋದಿ ಎಫೆಕ್ಟ್: ಎಸ್ಬಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಬಡವರು, ಕೆಳ ಮಧ್ಯಮ ವರ್ಗದ ಜನತೆಗೆ ನೆರವಾಗುವಂತೆ ಬ್ಯಾಂಕುಗಳಿಗೆ ಸೂಚಿಸಿದ್ದರು. ಅದರಂತೆ, ಹೊಸ ವರ್ಷದ ದಿನದಂದು ತನ್ನ ಗ್ರಾಹಕರಿಗೆ ಎಸ್ಬಿಐ ಸೇರಿದಂತೆ ಕೆಲ ಬ್ಯಾಂಕುಗಳು ಶುಭ ಸುದ್ದಿ ನೀಡಿವೆ.

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಮತ್ತು ಐಡಿಬಿಐ ನೀಡುತ್ತಿರುವ ಸಾಲಗಳ ಮೇಲಿನ ಬಡ್ಡಿಯನ್ನು ಗಣನೀಯ ಇಳಿಸಲಾಗಿದೆ.. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಇದು ಅತ್ಯಂತ ಹೆಚ್ಚಿನ ಪ್ರಮಾಣದ ಬಡ್ಡಿ ದರ ಇಳಿಕೆಯಾಗಿದೆ.[ಭಾಯಿಯೋ ಔರ್ ಬೆಹೆಣೋ... ಮೋದಿ ಭಾಷಣದ ಮುಖ್ಯಾಂಶಗಳು]

After Modi's Speech: SBI, Union Bank and IDBI slash lending rates

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಅವಧಿ ಸಾಲಗಳ ಬಡ್ಡಿ ದರವನ್ನು ಶೇಕಡಾ 0.9ರಷ್ಟು ಇಳಿಸಿದೆ. ಒಂದು ವರ್ಷ ಅವಧಿಯ marginal cost of lending rates (MCLR) ಸಾಲದ ಬಡ್ಡಿಯನ್ನು ಬ್ಯಾಂಕ್ ಶೇಕಡಾ 8.90ದಿಂದ ಶೇಕಡಾ 8ಕ್ಕೆ ಇಳಿಸಿದೆ. ಎಂಸಿಎಲ್​ಆರ್ ಓವರ್​ನೈಟ್ ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕ್ ಶೇಕಡಾ 8.65ರಿಂದ ಶೇಕಡಾ 7.75ಕ್ಕೆ ಇಳಿಸಿದೆ. 3 ವರ್ಷ ಅವಧಿಯ ಸಾಲದ ಬಡ್ಡಿ ದರವನ್ನು ಶೇಕಡಾ 9.05ರಿಂದ ಶೇಕಡಾ 8.15ಕ್ಕೆ ಇಳಿಸಿದೆ.

ಠೇವಣಿ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ನೋಟು ರದ್ದತಿಯ ನೋವನ್ನು ಶಮನಗೊಳಿಸುವ ಸಲುವಾಗಿ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಹೊಸ ಬಡ್ಡಿ ದರಗಳು ಜನವರಿ 1 ರಿಂದಲೇ ಜಾರಿಯಾಗಲಿವೆ. ಎಸ್​ಬಿಐಯ ಮಹಿಳಾ ಗೃಹ ಸಾಲಗಾರರಿಗೆ ಶೇಕಡಾ 8.20 ರ ದರದಲ್ಲಿ ಸಾಲ ಲಭಿಸಲಿದೆ. ಇತರರಿಗೂ ಶೇಕಡಾ 8.25ರ ದರದಲ್ಲಿ ಸಾಲ ಲಭಿಸಲಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಒಂದು ವರ್ಷ ಅವಧಿಯ ಎಂ ಸಿಎಲ್ ಆರ್ ಸಾಲದ ಬಡ್ಡಿ ದರವನ್ನು 65 ಬೇಸಿಸ್ ಪಾಯಿಂಟ್​ನಷ್ಟು ಇಳಿಕೆ ಮಾಡಿದೆ. ಅಂದರೆ ಶೇಕಡಾ 8.65ಕ್ಕೆ ಇಳಿಸಿದೆ.

ಮೂರು ವರ್ಷಗಳ ಅವಧಿಯ ಸಾಲ ಪಡೆಯುವವರಿಗೆ ಐಡಿಬಿಐ ಶೇಕಡಾ 9.30ರಷ್ಟು (ಶೇಕಡಾ 0.40ರಷ್ಟು) ದರದಲ್ಲಿ ಸಾಲ ಲಭಿಸಲಿದೆ. 6 ತಿಂಗಳ ಅವಧಿಯ ಸಾಲದ ಬಡ್ಡಿ ದರ ಶೇಕಡಾ 0.35 ಅಂದರೆ ಶೇಕಡಾ 8.90ಕ್ಕೆ ಇಳಿಸಿದೆ. ಒಂದು ವರ್ಷದ ಅವಧಿ ಸಾಲಕ್ಕೆ ಐಡಿಬಿಐ ಬ್ಯಾಂಕ್ ಈಗಿನ ಶೇಕಡಾ 9.30ರ ಬದಲಿಗೆ ಶೇಕಡಾ 9.15 ಬಡ್ಡಿ ವಿಧಿಸಲಿದೆ.

ನೋಟು ಬ್ಯಾನ್ ಬಳಿಕ ಬ್ಯಾಂಕುಗಳಿಗೆ 14.9 ಲಕ್ಷ ಕೋಟಿ ರೂಪಾಯಿ ಠೇವಣಿ ಹರಿದು ಬಂದಿದೆ. ಸಾರ್ವಜನಿಕ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕುಗಳು ನೆರವಾಗಬೇಕಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸೂಚಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi on Saturday asked banks to continue focus on the poor, the lower middle class, and the middle class and public interest in mind. Now, SBI, Union Bank and IDBI slashed lending rates.
Please Wait while comments are loading...