Get Updates
Get notified of breaking news, exclusive insights, and must-see stories!

Advantage Vidarbha 2026: ವಿದರ್ಭ ಅಭಿವೃದ್ಧಿಗೆ ₹70,000 ಕೋಟಿ ಹೂಡಿಕೆಯ ದೂರದೃಷ್ಟಿ ಬಿಚ್ಚಿಟ್ಟ ಜೀತ್‌ ಅದಾನಿ

ವಿದರ್ಭವನ್ನು ಭಾರತದ ಆರ್ಥಿಕ ಬೆಳವಣಿಗೆಯ ಭವಿಷ್ಯದ ಪ್ರಮುಖ ಎಂಜಿನ್‌ ಎಂದು ಅದಾನಿ ಗ್ರೂಪ್‌ ನಿರ್ದೇಶಕ ಜೀತ್‌ ಅದಾನಿ ಬಣ್ಣಿಸಿದರು. ಅಡ್ವಾಂಟೇಜ್‌ ವಿದರ್ಭ 2026 ಕಾರ್ಯಕ್ರಮದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದರ್ಭದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಆಧುನಿಕ ಮೂಲಸೌಕರ್ಯ ಮತ್ತು ದೃಢ ನಾಯಕತ್ವದ ಸಂಯೋಜನೆ ಈ ಪ್ರದೇಶವನ್ನು ಉದ್ಯಮ, ನವೀನತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕೇಂದ್ರವಾಗಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

ವಿದರ್ಭದ ಪರಂಪರೆ ಮತ್ತು ನವೀಕರಿಸಿದ ಭರವಸೆ

"ಅಡ್ವಾಂಟೇಜ್‌ ವಿದರ್ಭ 2026 ಎಂಬ ಈ ವೇದಿಕೆ ವಿದರ್ಭದಷ್ಟೇ ಅಲ್ಲ, ಮಹಾರಾಷ್ಟ್ರ ಮತ್ತು ಭಾರತದ ಭವಿಷ್ಯ ರೂಪಿಸುವವರನ್ನು ಒಟ್ಟುಗೂಡಿಸುತ್ತದೆ. ಇಲ್ಲಿ ಭಾಗವಹಿಸುವುದು ನನಗೆ ಹೆಮ್ಮೆಯ ವಿಷಯ" ಎಂದರು. ಭವಿಷ್ಯದ ಬಗ್ಗೆ ಮಾತನಾಡುವ ಮೊದಲು ವಿದರ್ಭದ ಅರ್ಥ ಮತ್ತು ಇತಿಹಾಸವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ ಅವರು, 'ವಿದರ್ಭ' ಎಂಬ ಹೆಸರು ಸಂಸ್ಕೃತ ಮೂಲದಿಂದ ಬಂದಿದ್ದು, ಶುದ್ಧತೆ, ವಿಶಿಷ್ಟತೆ ಮತ್ತು ಪವಿತ್ರ ಶಕ್ತಿಯನ್ನು ಸೂಚಿಸುತ್ತದೆ ಎಂದು ವಿವರಿಸಿದರು.

Jeet Adani

ವಿದರ್ಭವನ್ನು ಶಿಲ್ಪಕಲಾ ವೈಭವ, ಸಾಂಸ್ಕೃತಿಕ ಆಳ, ಜ್ಞಾನ ಮತ್ತು ಧೈರ್ಯದ ಭೂಮಿಯಾಗಿ ವರ್ಣಿಸಿದ ಜೀತ್‌ ಅದಾನಿ, ನಾಗ್ಪುರ ನಗರದ ಇತಿಹಾಸದ ಪಾತ್ರವನ್ನು ಉಲ್ಲೇಖಿಸಿದರು. ಕೇಂದ್ರ ಪ್ರಾಂತ್ಯಗಳ ರಾಜಧಾನಿಯಾಗಿದ್ದ ನಾಗ್ಪುರ ಇಂದು ಮಹಾರಾಷ್ಟ್ರದ ಚಳಿಗಾಲದ ರಾಜಧಾನಿಯಾಗಿ, ಕೈಗಾರಿಕೆ, ನವೀನತೆ ಮತ್ತು ಸಂಪರ್ಕದ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು. "ವಿದರ್ಭ ತನ್ನ ಶ್ರೀಮಂತ ಪರಂಪರೆಯನ್ನು ನವೀನ ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿಯಾಗಿ ಪರಿವರ್ತಿಸಲು ಸಿದ್ಧವಾಗಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕತ್ವ ಮುನ್ನಡೆಸುವ ವಿದರ್ಭ

ವಿದರ್ಭದಲ್ಲಿ ಕಾಣುತ್ತಿರುವ ಅಭಿವೃದ್ಧಿಯ ವೇಗದ ಹಿಂದಿರುವ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕತ್ವವನ್ನು ಶ್ಲಾಘಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂಲಸೌಕರ್ಯ, ಲಾಜಿಸ್ಟಿಕ್ಸ್‌ ಮತ್ತು ಸ್ವಚ್ಛ ಇಂಧನದ ಮೇಲಿನ ಒತ್ತಡ ಹೂಡಿಕೆ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ ಎಂದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಸಂಪರ್ಕ ಮತ್ತು ಹೆದ್ದಾರಿ ಅಭಿವೃದ್ಧಿಯನ್ನು "ದೇಶ ನಿರ್ಮಾಣ" ಎಂದು ಬಣ್ಣಿಸಿದ ಜೀತ್‌ ಅದಾನಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಮತೋಲನದ ಪ್ರಾದೇಶಿಕ ಅಭಿವೃದ್ಧಿಗೆ ದೃಢ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಇಂಧನ, ಕೈಗಾರಿಕೆ ಮತ್ತು ಉದ್ಯೋಗಗಳ ಉದ್ದೇಶ

ಅದಾನಿ ಗ್ರೂಪ್‌ನ ವಿದರ್ಭದ ಬದ್ಧತೆಯನ್ನು ವಿವರಿಸಿದ ಅವರು, "ನಮ್ಮ ಹಾಜರಾತಿಯು ವ್ಯವಹಾರಮಟ್ಟದದ್ದಲ್ಲ, ಇದು ತಲೆಮಾರುಗಳ ಬದ್ಧತೆ. ಇಂಧನ ಭದ್ರತೆ, ಗುಣಮಟ್ಟದ ಉದ್ಯೋಗ ಸೃಷ್ಟಿ ಮತ್ತು ಸಮುದಾಯಗಳ ಉತ್ತೇಜನವೇ ನಮ್ಮ ಗುರಿ" ಎಂದರು. ಹೂಡಿಕೆಗಳು ಮೂರು ಪ್ರಮುಖ ಆದ್ಯತೆಗಳ ಮೇಲೆ ಕೇಂದ್ರೀಕೃತವಾಗಿವೆ ಎಂದು ತಿಳಿಸಿದ ಅವರು, ಸ್ವಚ್ಛ ಹಾಗೂ ವಿಶ್ವಾಸಾರ್ಹ ಇಂಧನ, ಏಕೀಕೃತ ಕೈಗಾರಿಕಾ-ಲಾಜಿಸ್ಟಿಕ್ಸ್‌ ಪರಿಸರ ವ್ಯವಸ್ಥೆ ಮತ್ತು ಬೆಳವಣಿಗೆ ಎಂದು ವಿವರಿಸಿದರು.

ಟಿರೋಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ 3,300 ಮೆಗಾವಾಟ್‌ ಸಾಮರ್ಥ್ಯದ ಮಹಾರಾಷ್ಟ್ರದ ಅತಿದೊಡ್ಡ ಸೂಪರ್‌ಕ್ರಿಟಿಕಲ್‌ ವಿದ್ಯುತ್‌ ಘಟಕವನ್ನು ಉಲ್ಲೇಖಿಸಿದ ಅವರು, ಇದು ಜಾಗತಿಕ ಮಟ್ಟದ ದಕ್ಷತೆ ಮತ್ತು ಪರಿಸರ ಮಾನದಂಡಗಳನ್ನು ಪೂರೈಸುತ್ತಿದೆ ಎಂದರು. 2025ರಲ್ಲಿ ಬುಟಿಬೋರಿ 600 ಮೆಗಾವಾಟ್‌ ವಿದ್ಯುತ್‌ ಘಟಕ ಪುನರಾರಂಭಗೊಂಡಿದ್ದು, ರಾಜ್ಯಕ್ಕೆ 6,600 ಮೆಗಾವಾಟ್‌ ವಿದ್ಯುತ್‌ ಪೂರೈಕೆಗೆ 25 ವರ್ಷದ ಒಪ್ಪಂದವಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಪ್ರಮುಖ ಘೋಷಣೆಯಾಗಿ, ಕಲ್ಮೇಶ್ವರದ ಲಿಂಗಾ ಪ್ರದೇಶದಲ್ಲಿ ₹70,000 ಕೋಟಿ ಮೌಲ್ಯದ ಸಮಗ್ರ ಕೋಲ್‌ ಗ್ಯಾಸಿಫಿಕೇಶನ್‌ ಮತ್ತು ಡೌನ್‌ಸ್ಟ್ರೀಮ್‌ ಡೆರಿವೇಟಿವ್ಸ್‌ ಸಂಕೀರ್ಣ ಸ್ಥಾಪನೆಯ ಯೋಜನೆಯನ್ನು ಜೀತ್‌ ಅದಾನಿ ಘೋಷಿಸಿದರು. ಈ ಯೋಜನೆಯಿಂದ 30,000 ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಉನ್ನತ ರಾಸಾಯನಿಕ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗಲಿದೆ. ಜೊತೆಗೆ ನಾಗ್ಪುರವನ್ನು ಜಾಗತಿಕ ಸ್ವಚ್ಛ ಇಂಧನ ತಂತ್ರಜ್ಞಾನ ನಕ್ಷೆಯಲ್ಲಿ ಪ್ರಮುಖ ಸ್ಥಾನಕ್ಕೆ ತರುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.

ಲಾಜಿಸ್ಟಿಕ್ಸ್‌ ಕ್ಷೇತ್ರದಲ್ಲಿ ಬೋರ್ಕೆಡಿ ಬಳಿ 75 ಎಕರೆ ಇಂಟರ್‌ನ್ಯಾಷನಲ್‌ ಕಂಟೈನರ್‌ ಡಿಪೋ ಹಾಗೂ 24 ಗಡಿ ತಪಾಸಣಾ ಚೌಕಿಗಳ ಸ್ವಾಧೀನದ ಮೂಲಕ ಸಾಗಣೆ ವೆಚ್ಚ ಕಡಿಮೆ ಮಾಡಿ ರಫ್ತು ಉತ್ತೇಜಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು. ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಇಂಡಾಮರ್‌ ಟೆಕ್ನಿಕ್ಸ್‌ ಸ್ವಾಧೀನದಿಂದ ಮಿಹಾನ್‌ನಲ್ಲಿ 30 ಎಕರೆ ವಿಮಾನ ನಿರ್ವಹಣಾ (MRO) ಸಂಕೀರ್ಣ ವಿಸ್ತಾರಗೊಂಡಿದ್ದು, ನಾಗ್ಪುರವನ್ನು ಅಂತಾರಾಷ್ಟ್ರೀಯ ವಿಮಾನ ನಿರ್ವಹಣಾ ಕೇಂದ್ರವಾಗಿ ರೂಪಿಸುವ ಗುರಿ ಇದೆ ಎಂದರು.

ಸಾಮಾಜಿಕ ಅಭಿವೃದ್ಧಿಯಲ್ಲಿ ಅದಾನಿ ಫೌಂಡೇಶನ್‌ ಪಾತ್ರವನ್ನು ವಿವರಿಸಿದ ಜೀತ್‌ ಅದಾನಿ, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಸ್ವಸಹಾಯ ಗುಂಪುಗಳು, ಪೋಷಣಾ ಯೋಜನೆಗಳು, ಸೌರ ದೀಪ, ಕುಡಿಯುವ ನೀರು, ಕ್ರೀಡೆ ಮತ್ತು ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು. "ಸುಸ್ಥಿರತೆ ನಮ್ಮ ಕಾರ್ಯಸೂಚಿಯ ಹೃದಯ" ಎಂದು ಹೇಳಿದ ಅವರು, ಶೂನ್ಯ ನೀರು ತ್ಯಾಜ್ಯ ವ್ಯವಸ್ಥೆ, ಫ್ಲೈ ಆ್ಯಶ್‌ ಮರುಬಳಕೆ ಮತ್ತು 2030ರೊಳಗೆ 100 ಮಿಲಿಯನ್‌ ಮರ ನೆಡುವ ಗುರಿಯನ್ನು ನೆನಪಿಸಿದರು. 2027ರ ವೇಳೆಗೆ ಶೇ 60ರಷ್ಟು ನವೀಕರಿಸಬಹುದಾದ ಇಂಧನ ಬಳಕೆಯ ಗುರಿಯೂ ಸಾಧನೆಯ ಹಾದಿಯಲ್ಲಿದೆ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಜೀತ್‌ ಅದಾನಿ, "ವಿದರ್ಭ ಕೇವಲ ಮಹಾರಾಷ್ಟ್ರದ ಒಂದು ಭಾಗವಲ್ಲ, ಮುಂದಿನ ದಶಕಗಳಲ್ಲಿ ಭಾರತದ ಬೆಳವಣಿಗೆಯನ್ನು ನಿರ್ಧರಿಸುವ ಪ್ರಮುಖ ಪ್ರದೇಶವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಒಟ್ಟಾಗಿ ಅವಕಾಶ, ಸ್ಥೈರ್ಯ ಮತ್ತು ಸಮೃದ್ಧಿಯ ಹೊಸ ಯುಗವನ್ನು ನಿರ್ಮಿಸೋಣ. ಇದೇ ನಮ್ಮ ವಾಗ್ದಾನ, ಇದೇ ನಮ್ಮ ಉದ್ದೇಶ" ಎಂದು ಅವರು ಭಾಷಣವನ್ನು ಮುಕ್ತಾಯಗೊಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+