ಅದಾನಿ ಎಂಟರ್‌ಪ್ರೈಸಸ್‌ನ 1,000 ಕೋಟಿ ರೂ. ಬಾಂಡ್ ವಿತರಣೆ: ಕೇವಲ 3 ಗಂಟೆಗಳಲ್ಲಿ ಸಂಪೂರ್ಣ ಸಬ್‌ಸ್ಕ್ರಿಪ್ಷನ್ ಮುಕ್ತಾಯ!
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಬರೋಬ್ಬರಿ 1,000 ಕೋಟಿ ರೂಪಾಯಿ ಮೊತ್ತದ ಬಾಂಡ್ ವಿತರಣೆ ಪ್ರಕ್ರಿಯೆಯು ಪ್ರಾರಂಭವಾದ ಮೂರೇ ಗಂಟೆಗಳಲ್ಲಿ ಸಂಪೂರ್ಣ ಚಂದಾದಾರನ್ನು ಪಡೆದಿದೆ. ಬುಧವಾರ ಬಾಂಡ್ ವಿತರಣೆ ಪ್ರಕ್ರಿಯೆ ಪ್ರಾರಂಭವಾದ ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಚಂದಾದಾರಿಕೆ (ಸಬ್‌ಸ್ಕ್ರಿಪ್ಷನ್) ಪಡೆದುಕೊಂಡಿರುವುದಾಗಿ ಷೇರು ವಿನಿಮಯ ಕೇಂದ್ರದ ವರದಿ ಹೇಳಿದೆ.
ಬುಧವಾರ ಪ್ರಾರಂಭವಾಗಿ ಜುಲೈ 22 ರಂದು ಮುಕ್ತಾಯಗೊಳ್ಳಬೇಕಿದ್ದ ಪರಿವರ್ತಿಸಲಾಗದ ಸಾಲಪತ್ರಗಳು (Non-Convertible Debenture) ವಿತರಣೆಯು ಸಂಪೂರ್ಣವಾಗಿ ಚಂದಾದಾರಿಕೆ ಮುಕ್ತಾಯವಾಗಿರುವುದರಿಂದ ಅವಧಿಪೂರ್ವ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎನ್‌ಸಿಡಿಗಳು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಲು ಕಂಪನಿಗಳು ನೀಡುವ ಸಾಲ ಸಾಧನಗಳಾಗಿವೆ. ಇದು ಸ್ಥಿರಬಡ್ಡಿ ಪಾವತಿಗಳ ಭರವಸೆ ನೀಡುತ್ತವೆ. ಅದಾನಿ ಗುಂಪಿನ ಪ್ರಮುಖ ಸಂಸ್ಥೆಯು ವಾರ್ಷಿಕವಾಗಿ ಶೇ9.3% ರಷ್ಟು ಬಡ್ಡಿಯನ್ನು ಭರವಸೆ ನೀಡಿತ್ತು. ಈ ಬಾಂಡ್‌ಗಳ ವಿತರಣೆಯು 3.30ರ ವೇಳೆಗೆ 1,400 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಿದೆ ಎಂದು ಷೇರು ವಿನಿಮಯ ಕೇಂದ್ರದ ದತ್ತಾಂಶ ವರದಿಯು ಉಲ್ಲೇಖಿಸಿದೆ.

ಈ ಬಾಂಡ್‌ಗಳ ವಿತರಣೆ ಪ್ರಕ್ರಿಯೆಯು ಮೊದಲು ಬಂದವರಿಗೆ ಮೊದಲು ಆದ್ಯತೆ ಎನ್ನುವ ಮಾನದಂಡವನ್ನು ಹೊಂದಿತ್ತು. ಅಲ್ಲದೇ ಚಿಲ್ಲರೆ ಹೂಡಿಕೆದಾರರು, ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವವರು ಮತ್ತು ಕಾರ್ಪೊರೇಟ್‌ಗಳು ಸೇರಿದಂತೆ ವಿವಿಧ ವಿಭಾಗದಿಂದ ಭಾಗವಹಿಸಿದ್ದಾರೆ. ಇದು ಅದಾನಿ ಎಂಟರ್‌ಪ್ರೈಸಸ್‌ನ ಸುರಕ್ಷಿತ, ರೇಟಿಂಗ್, ಪಟ್ಟಿ ಮಾಡಲಾದ ರಿಡೀಮ್ ಮಾಡಬಹುದಾದ ಹಾಗೂ ಪರಿವರ್ತಿಸಲಾಗದ ಸಾಲಪತ್ರಗಳ ಎರಡನೇ ಸಾರ್ವಜನಿಕ ವಿತರಣೆಯಾಗಿದೆ.
"ಈ ಬಾರಿಯ ಬಾಂಡ್ ವಿತರಣೆ ಪ್ರಕ್ರಿಯೆಯು ಹಲವು ಕಾರಣಕ್ಕೆ ವಿಶೇಷವಾಗಿದೆ. ಸಂಪೂರ್ಣವಾಗಿ ಸಾಂಸ್ಥಿಕೇತರ (ಅಸಂಘಟಿತ ವಲಯ) ವಿಭಾಗದಿಂದ ಬಂದಿರುವ ಬಲವಾದ ಮತ್ತು ಪ್ರೋತ್ಸಾಹದಾಯಕವಾಗಿದೆ. ADNA ಒಂದು ಬ್ರ್ಯಾಂಡ್ ಆಗಿ ಚಿಲ್ಲರೆ ವಹಿವಾಟು ಮಾಡುವವರೊಂದಿಗೆ ಬಲವಾದ ಪ್ರತಿನಿಧಿಯಾಗಿದೆ" ಎಂದು ಪ್ರಮುಖ ವ್ಯವಸ್ಥಾಪಕರೊಬ್ಬರು ಹೇಳಿದ್ದಾರೆ. "ಚಿಲ್ಲರೆ NHIಗಳು ಮತ್ತು ಕಾರ್ಪೊರೇಟ್ ಹೂಡಿಕೆದಾರರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ, ಕಂಪನಿಯ ಕ್ರೆಡಿಟ್ ಪ್ರೊಫೈಲ್ ಮತ್ತು ಭವಿಷ್ಯದ ದೃಷ್ಟಿಕೋನದಲ್ಲಿ ವಿಶ್ವಾಸವನ್ನು ಪುನರುಚ್ಚರಿಸಿದ್ದಾರೆ" ಎಂದು ಅವರು ಸಂತೋಷ ಹಂಚಿಕೊಂಡಿದ್ದಾರೆ.
ಪ್ರಸ್ತುತ ಸೆಗ್‌ಮೆಂಟ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ AELನ ಮೊದಲ ಸಾರ್ವಜನಿಕ NCD ಬಿಡುಗಡೆಯಾದ 800 ಕೋಟಿ ರೂಪಾಯಿ ನಂತರ ಬಿಡುಗಡೆಯಾಗಿದೆ. ಇದು ಮೊದಲ ದಿನದಲ್ಲಿ ಶೇ90 ರಷ್ಟು ಸಬ್‌ಸ್ಕ್ರಿಪ್ಷನ್ ಪಡೆದುಕೊಂಡಿತ್ತು. ಪ್ರಸ್ತುತ NCDಯ ಮೂಲ ಸಂಚಿಕೆಯ ಗಾತ್ರವು 500 ಕೋಟಿ ರೂಪಾಯಿ ಆಗಿದ್ದು, ಹೆಚ್ಚುವರಿ 500 ಕೋಟಿ ರೂ.ಗಳವರೆಗೆ (ಗ್ರೀನ್‌ಶೂ ಆಯ್ಕೆ) ಓವರ್-ಚಂದಾದಾರಿಕೆಯನ್ನು ಉಳಿಸಿಕೊಳ್ಳುವ ಆಯ್ಕೆಯೊಂದಿಗೆ, 1,000 ಕೋಟಿ ರೂ.ಗಳವರೆಗೆ ಇರಲಿದೆ ಎಂದು ಹೇಳಲಾಗಿದೆ.
NCDಗಳು ತಲಾ 1,000 ರೂ.ಗಳ ಮುಖಬೆಲೆಯನ್ನು ಹೊಂದಿವೆ. ಅರ್ಜಿದಾರರು ಕನಿಷ್ಠ 10 NCD ಗಳಿಗೆ ಮತ್ತು ನಂತರ 1 NCDಗೆ ದ್ವಿಗುಣವಾಗಿ (ಒಂದಕ್ಕಿಂತ ಹೆಚ್ಚಿನ ಸಂಖ್ಯೆ)ಗಳಲ್ಲಿ ಅರ್ಜಿ ಸಲ್ಲಿಸಬಹುದು, ಕನಿಷ್ಠ ಅಪ್ಲಿಕೇಷನ್ ಗಾತ್ರವು 10,000 ರೂಪಾಯಿಗಳಾಗಿರುತ್ತದೆ.
"ಈ ವಿತರಣೆಯಿಂದ ಬರುವ ಕನಿಷ್ಠ ಶೇಕಡ 75 ರಷ್ಟು ಹಣವನ್ನು ಕಂಪನಿಯು ಹೊಂದಿರುವ ಅಸ್ತಿತ್ವದಲ್ಲಿರುವ ಸಾಲದ ಪೂರ್ಣ ಅಥವಾ ಭಾಗಶಃ ಪೂರ್ವಪಾವತಿ ಅಥವಾ ಮರುಪಾವತಿಗೆ ಬಳಸಿಕೊಳ್ಳಲಾಗುವುದು ಮತ್ತು ಉಳಿದ ಹಣವನ್ನು (ಗರಿಷ್ಠ ಶೇಕಡ 25 ರವರೆಗೆ) ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಾಗುವುದು" ಎಂದು ಕಂಪನಿಯು ಜುಲೈ 6 ರಂದು ಹೇಳಿಕೆಯಲ್ಲಿ ತಿಳಿಸಿದೆ.
ನುವಾಮಾ ವೆಲ್ತ್ ಮ್ಯಾನೇಜ್ಮೆಂಟ್ ಲಿಮಿಟೆಡ್, ಟ್ರಸ್ಟ್ ಇನ್ವೆಸ್ಟ್ಮೆಂಟ್ ಅಡ್ವಟೈಸರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟಿಪ್ಸನ್ಸ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಈ ವಿತರಣೆಯ ಪ್ರಮುಖ ವ್ಯವಸ್ಥಾಪಕರು. NCD ಗಳು 24 ತಿಂಗಳು, 36 ತಿಂಗಳು ಮತ್ತು 60 ತಿಂಗಳುಗಳ ಅವಧಿಗಳಲ್ಲಿ ಲಭ್ಯವಿದ್ದು, ಎಂಟು ಸರಣಿಗಳಲ್ಲಿ ತ್ರೈಮಾಸಿಕ, ವಾರ್ಷಿಕ ಮತ್ತು ಸಂಚಿತ ಬಡ್ಡಿ ಪಾವತಿ ಆಯ್ಕೆಗಳೊಂದಿಗೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
-
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications