ಉಳಿತಾಯ ಯೋಜನೆ ಜತೆ ಆಧಾರ್ ಜೋಡಣೆಗೆ ಹೊಸ ಡೆಡ್ ಲೈನ್
ನವದೆಹಲಿ, ಜನವರಿ 09: ಸಣ್ಣ ಉಳಿತಾಯ ಯೋಜನೆ ಖಾತೆಗಳ ಜತೆ ಆಧಾರ್ ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಮಾರ್ಚ್ 31ರ ತನಕ ಆಧಾರ್ ಜೋಡಣೆಗೆ ಅವಕಾಶವಿದೆ.
'ಪೋಸ್ಟ್ ಆಫೀಸ್ ಠೇವಣಿ, ಕಿಸಾನ್ ವಿಕಾಸ್ ಪತ್ರ ಮುಂತಾದ ಸಣ್ಣ ಉಳಿತಾಯ ಯೋಜನೆಗಳಿಗೆ 2017 ರ ಡಿಸೆಂಬರ್ 31 ಆಧಾರ್ ಜೋಡಣೆಗೆ ಅಂತಿಮ ದಿನವಾಗಿತ್ತು. ಅದನ್ನು ಮಾರ್ಚ್ 31 ರ ವರೆಗೆ ವಿಸ್ತರಿಸಲಾಗಿದೆ' ಎಂದು ವಿತ್ತ ಸಚಿವಾಲಯ ಪ್ರಕಟಿಸಿದೆ.
ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ(NSC), ಕಿಸಾನ್ ವಿಕಾಸ್ ಪತ್ರ(KVP) ಮುಂತಾದ ಯೋಜನೆಗಳ ಜತೆಗೆ 12 ಅಂಕಿಗಳ ಆಧಾರ್ ಕಡ್ಡಾಯಗೊಳಿಸಲಾಗಿದೆ.

2017ರ ಅಕ್ಟೋಬರ್ ತಿಂಗಳಿನಲ್ಲಿ ಈ ಕುರಿತಂತೆ ಕೇಂದ್ರ ಸರ್ಕಾರವು ಆದೇಶ ಹೊರಡಿಸಿ, ಡಿಸೆಂಬರ್ ಅಂತ್ಯದೊಳಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಿತ್ತು,ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈಗ ಆಧಾರ್ ಕಾರ್ಡ್ ಜೋಡಣೆ ಬಹುಮುಖ್ಯವಾಗಿದೆ.
ಮೊಬೈಲ್, ಬ್ಯಾಂಕ್, ಎಲ್ ಪಿಜಿ, ಪಡಿತರ ವಿತರಣೆ ವ್ಯವಸ್ಥೆ, ಎಂನರೇಗಾ ಸೇರಿದಂತೆ 35ಕ್ಕೂ ಅಧಿಕ ಸಚಿವಾಲಯಗಳ 135ಕ್ಕೂ ಅಧಿಕ ಯೋಜನೆಗಳ ಲಾಭ, ಫಲ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಮಾರ್ಚ್ 31 ರ ವರೆಗೂ ನಿಮ್ಮ ಖಾತೆ ಜತೆಗೆ ಆಧಾರ್ ಜೋಡಣೆಗೆ ಅವಕಾಶ ನೀಡಲಾಗಿದೆ.












Click it and Unblock the Notifications