ಜಿಯೋಗೆ ಸೆಡ್ಡು, ಬೆಂಗಳೂರಿನ ವೈಫೈ ಡಬ್ಬಾದಿಂದ ಭರ್ಜರಿ ಆಫರ್!
ಬೆಂಗಳೂರು, ನವೆಂಬರ್ 20: ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರ ಪ್ರತಿ ದಿನ ತಾರಕಕ್ಕೇರುತ್ತಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೋಡಾಫೋನ್, ಐಡಿಯಾ ಕಂಪನಿಗಳ ಜತೆ ಬೆಂಗಳೂರಿನ ನವೋದ್ಯಮ(startup) ಸಂಸ್ಥೆಯೊಂದು ಪೈಪೋಟಿಗೆ ಇಳಿದಿದೆ.
ವೈಫೈ ಡಬ್ಬಾ ಹೆಸರಿನ ಸಂಸ್ಥೆಯು ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಇಂಟರ್ನೆಟ್ ಡೇಟಾ ನೀಡಲು ಮುಂದಾಗಿದೆ. ಈ ಕಂಪನಿ ಕೇವಲ 20 ರೂಪಾಯಿಗೆ 1 ಜಿಬಿ ಡೇಟಾವನ್ನು ನೀಡುವುದಾಗಿ ಘೋಷಿಸಿದೆ.

ಕೇವಲ 13 ತಿಂಗಳುಗಳ ಹಿಂದೆ ಆರಂಭವಾದ ವೈಫೈ ಡಬ್ಬಾ ಸಂಸ್ಥೆಮೂರು ಡೇಟಾ ಆಫರ್ ಶುರು ಮಾಡಿದೆ. 2 ರೂಪಾಯಿ, 10 ರೂಪಾಯಿ ಹಾಗೂ 20 ರೂಪಾಯಿ ಪ್ಲಾನ್ ಇದರಲ್ಲಿದೆ.
2 ರೂಪಾಯಿ ಪ್ಲಾನ್ ಮೂಲಕ 100 ಎಂಬಿ, 10 ರೂಪಾಯಿ ಯೋಜನೆಯಲ್ಲಿ 500 ಎಂಬಿ, 20 ರೂಪಾಯಿ ಪ್ಲಾನ್ ನಲ್ಲಿ 1 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ.
ನಗರದ ಯಾವುದೇ ಟೀ ಸ್ಟಾಲ್ ಹಾಗೂ ಸಣ್ಣ ಸಣ್ಣ ಅಂಗಡಿಗಳಲ್ಲಿ ಪ್ರೀಪೇಡ್ ಕೂಪನ್ ಖರೀದಿ ಮಾಡಿ ಡೇಟಾ ಪ್ಯಾಕ್ ಪಡೆಯಬಹುದು. ನಂತರ ಒಟಿಪಿ ಮೂಲಕ ಕೂಪನ್ ರೀಚಾರ್ಜ್ ಮಾಡಬೇಕು. ತಕ್ಷಣವೇ ಗ್ರಾಹಕರಿಗೆ ಡೇಟಾ ಸಿಗಲಿದೆ.
ಕೇಬಲ್ ಆಪರೇಟರ್ ಗಳೊಂದಿಗೆ ಪಾಲುದಾರಿಕೆ ಹೊಂದಿರುವ ಈ ಸಂಸ್ಥೆ ಉತ್ತಮ ಗುಣಮಟ್ಟದ ವೇಗದ ಡೇಟಾ ಸೇವೆ ನೀಡುವುದಾಗಿ ಹೇಳಿಕೊಂಡಿದೆ.












Click it and Unblock the Notifications