• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ, ಲೆಕ್ಕಾಚಾರ ಹೀಗೆ ಮಾಡಿ

|
Google Oneindia Kannada News

ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ಜುಲೈ ತಿಂಗಳಿನಲ್ಲಿ ತುಟ್ಟಿಭತ್ಯೆ ಅಥವಾ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ. ಜುಲೈ ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಸಾಧ್ಯತೆಯಿದ್ದು, ಹೊಸ ಫಾರ್ಮ್ಯೂಲಾದೊಂದಿಗೆ ಡಿಎ ಲೆಕ್ಕಾಚಾರ ಮಾಡಬೇಕಾಗುತ್ತದೆ. ಒಂದು ವೇಳೆ ಮತ್ತೊಮ್ಮೆ ಡಿಎ ಹೆಚ್ಚಳವಾದರೆ, ಸರ್ಕಾರ ನೌಕರರ ಸಂಬಳ, ಡಿಎ ಲೆಕ್ಕಾಚಾರ ಹೇಗಿರಲಿದೆ ಎಂಬುದರ ವಿವರಣೆ ಇಲ್ಲಿದೆ...

ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ 18 ತಿಂಗಳ ತುಟ್ಟಿಭತ್ಯೆ ಬಾಕಿಯ ಬಗ್ಗೆ ಮೋದಿ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ. ತುಟ್ಟಿಭತ್ಯೆ ಪ್ರಸ್ತುತ ಶೇಕಡಾ 31 ರಷ್ಟಿದೆ. ಈ ವರ್ಷ ಜುಲೈ ಮೊದಲು, ಇದು 17 ಪ್ರತಿಶತದಷ್ಟಿತ್ತು, ತುಟ್ಟಿಭತ್ಯೆ ಪರಿಹಾರ(ಡಿಆರ್) ಕೂಡಾ ಶೇ 3ರಷ್ಟಿದೆ. ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ. ವರ್ಷಕ್ಕೆ ಎರಡು ಬಾರಿ ಡಿಎ ಘೋಷಣೆ ಮಾಡಲಾಗುತ್ತದೆ. ಈ ವರ್ಷದಲ್ಲಿ ಜನವರಿಯಲ್ಲಿ ಕೇಂದ್ರ ಸರ್ಕಾರವು ಡಿಎ ಹೆಚ್ಚಳವನ್ನು ಘೋಷಣೆ ಮಾಡಿದೆ. ವರದಿಗಳ ಪ್ರಕಾರವ ಮೇ ತಿಂಗಳಿನಲ್ಲಿ ಶೇಕಡ 7.4ರಷ್ಟಿರುವ ಹಣದುಬ್ಬರವನ್ನು ಕೇಂದ್ರ ಸರ್ಕಾರವು ಪರಿಗಣನೆಗೆ ತೆಗೆದುಕೊಳ್ಳಬಹುದು. ವರದಿಗಳ ಪ್ರಕಾರ, ಈ ಬಾರಿ ಡಿಎಯಲ್ಲಿ ಇನ್ನೂ ಶೇಕಡ ಐದರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

ಹೊಸ ಕಾರ್ಮಿಕ ನೀತಿ ಬಂದ್ರೆ ವಾರಕ್ಕೆ 4 ದಿನ ಕೆಲಸ, ಉಳಿತಾಯ ಜಾಸ್ತಿ!ಹೊಸ ಕಾರ್ಮಿಕ ನೀತಿ ಬಂದ್ರೆ ವಾರಕ್ಕೆ 4 ದಿನ ಕೆಲಸ, ಉಳಿತಾಯ ಜಾಸ್ತಿ!

 ಕೋವಿಡ್ -19 ಸಾಂಕ್ರಾಮಿಕದಿಂದ ಸ್ಥಗಿತವಾಗಿದ್ದ ಡಿಎ ಏರಿಕೆ

ಕೋವಿಡ್ -19 ಸಾಂಕ್ರಾಮಿಕದಿಂದ ಸ್ಥಗಿತವಾಗಿದ್ದ ಡಿಎ ಏರಿಕೆ

ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು. ಜನವರಿ 1 (4%), ಜುಲೈ 1 2020(3%) ಹಾಗೂ ಜನವರಿ 1, 2021 (4%) ಗೆ ಮೂರು ಬಾರಿ ಏರಿಕೆಯಾಗಿ ಶೇ 25ಕ್ಕೇರಿತ್ತು. ಜುಲೈ 1, 2021ಕ್ಕೆ ಪರಿಷ್ಕರಣೆಗೊಳ್ಳಲಿದ್ದು, ಶೇ 31ಕ್ಕೇರಿದೆ. ನಂತರ ಶೇ 3ರಂತೆ ಡಿಎ ಏರಿಕೆ ಕ್ರಮ ಅನುಸರಿಸಲಾಗಿದೆ. ಸದ್ಯ ಡಿಎ ಶೇ 34ರಷ್ಟಿದೆ. ಈ ಬಾರಿ ಅಧಿಕ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆಯಿದೆ.

 ಎಷ್ಟು ಪ್ರಮಾಣದಲ್ಲಿ ಏರಿಕೆ

ಎಷ್ಟು ಪ್ರಮಾಣದಲ್ಲಿ ಏರಿಕೆ

ಬಜೆಟ್ 2022ಕ್ಕೂ ಮುನ್ನ ಫಿಟ್ಮೆಂಟ್ ಪ್ರಕಾರ ಡಿಎ ಸುಮಾರು ಶೇ 3ರಷ್ಟು ಏರಿಕೆಯಾಗಬಹುದು, ಜೊತೆಗೆ ಸರ್ಕಾರಿ ನೌಕರರಿಗೆ ಬಡ್ತಿ, ತುಟ್ಟಿ ಭತ್ಯೆ ಪರಿಹಾರ, ಬಾಕಿ ಮೊತ್ತ ಎಲ್ಲವೂ ಸಿಗುವ ಸಾಧ್ಯತೆಯೂ ಇದೆ. ಒಂದು ವೇಳೆ ಮತ್ತೊಮ್ಮೆ ಶೇ 3ರಷ್ಟು ಏರಿಕೆಯಾದರೆ ಡಿಎ ಶೇ 34ಕ್ಕೇರಲಿದೆ. AICPI ಸೂಚ್ಯಂಕದ ಆಧಾರದ ಮೇಲೆ ಹೇಳುವುದಾದರೆ ಶೇ 3ರಷ್ಟು ಡಿಎ ಹೆಚ್ಚಳ ನಿರೀಕ್ಷಿಸಬಹುದು. ಏಪ್ರಿಲ್‌ನಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) 127.7 ಪಾಯಿಂಟ್‌ಗಳಿಗೆ ಏರಿದೆ. ಇನ್ನು ಮೇ, ಜೂನ್ ಅಂಕಿ ಅಂಶವನ್ನು ಕೂಡಾ ಪರಿಶೀಲನೆ ಮಾಡಿದರೆ, ಡಿಎ ಮತ್ತೆ ಶೇಕಡ 5 ರಿಂದ 6ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಶೇ 5ರಷ್ಟು ಏರಿಕೆ ಕಂಡರೆ ತಿಂಗಳಿಗೆ ಮೂಲ ವೇತನಕ್ಕೆ ಅನುಸಾರವಾಗಿ 3,400 ರು ಅಥವಾ ವಾರ್ಷಿಕ 40,000 ರು ತನಕ ಸಂಬಳದಲ್ಲಿ ಏರಿಕೆ ಕಾಣಬಹುದು.

Infographics: ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಳInfographics: ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಳ

 ವರ್ಷಕ್ಕೆ ಎರಡು ಬಾರಿ ಏರಿಕೆ

ವರ್ಷಕ್ಕೆ ಎರಡು ಬಾರಿ ಏರಿಕೆ

ನಿಯಮಗಳ ಪ್ರಕಾರ, ಡಿಎ ಘೋಷಣೆಯನ್ನು ಮೊದಲು ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಮಾಡಲಾಗುತ್ತಿತ್ತು. ಕೋವಿಡ್ ಕಾರಣದಿಂದಾಗಿ ಸುಮಾರು 1.5 ವರ್ಷಗಳ ಕಾಲ ಡಿಎ ಹೆಚ್ಚಳವನ್ನು ಮಾಡಿಲ್ಲ. ನಂತರ ಜುಲೈ 2021 ರಲ್ಲಿ ಡಿಎ ಹೆಚ್ಚಳ ಮತ್ತೆ ಆರಂಭ ಮಾಡಲಾಗಿದೆ. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಜುಲೈ 2021 ರಲ್ಲಿ ಹೆಚ್ಚಿಸಲಾಯಿತು. ಶೇಕಡ 17 ರಿಂದ 28 ರಷ್ಟು ಡಿಎ ಅಧಿಕವಾಗಿದೆ. ಜುಲೈ 1, 2021 ರಿಂದ ಜಾರಿಗೆ ಬರುವಂತೆ ಅಕ್ಟೋಬರ್ 2021 ರಲ್ಲಿ ಶೇಕಡ 3ರಷ್ಟು ಹೆಚ್ಚಳವನ್ನು ಜಾರಿಗೆ ತರಲಾಯಿತು. ಜುಲೈ 1 ರಿಂದ ಶೇಕಡ 31ರಷ್ಟು ಹೆಚ್ಚಳವಾಗಿದೆ. ಜನವರಿ 1, 2022 ರಲ್ಲಿ ಶೇ 3ರಷ್ಟು ಡಿಎ ಹೆಚ್ಚಳವಾಗಿದ್ದು ಸದ್ಯ ಡಿಎ ಶೇಕಡ 34ರಷ್ಟು ಡಿಎರಷ್ಟಿದೆ.

 ತುಟ್ಟಿ ಭತ್ಯೆ ಎಂದರೇನು?

ತುಟ್ಟಿ ಭತ್ಯೆ ಎಂದರೇನು?

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

ತುಟ್ಟಿಭತ್ಯೆ ಹೆಚ್ಚಳ ಮಾಡುವುದು ಹೇಗೆ?
ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76‍‍X100.
ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33‍‍X100.

 ಬೇಸಿಕ್ ಸಂಬಳ

ಬೇಸಿಕ್ ಸಂಬಳ

ಬೇಸಿಕ್ ಸಂಬಳ 18,000 ರು
* ಹೊಸ ಡಿಎ (34%) 6120 ರು/ಪ್ರತಿ ತಿಂಗಳು
* ಹಾಲಿ ಡಿಎ (31%) 5580 ರು/ಪ್ರತಿ ತಿಂಗಳು
* ತುಟ್ಟಿಭತ್ಯೆ ಏರಿಕೆ ಎಷ್ಟು: 6120- 5580= 540 ರು/ ಪ್ರತಿ ತಿಂಗಳು
* ವಾರ್ಷಿಕ ಲೆಕ್ಕಾಚಾರದಂತೆ 540 ರು X 12= 6,480 ರು.

ಗರಿಷ್ಠ ಬೇಸಿಕ್ ಸಂಬಳ 56,900 ರು
* ಹೊಸ ಡಿಎ (34%) 19,346 ರು/ಪ್ರತಿ ತಿಂಗಳು
* ಹಾಲಿ ಡಿಎ (31%) 17,639 ರು/ಪ್ರತಿ ತಿಂಗಳು

* ತುಟ್ಟಿಭತ್ಯೆ ಏರಿಕೆ ಎಷ್ಟು: 19346-17639= 1,707 ರು/ ಪ್ರತಿ ತಿಂಗಳು
* ವಾರ್ಷಿಕ ಲೆಕ್ಕಾಚಾರದಂತೆ 1,707 ರು X 12= 20,484 ರು.

English summary
7th Pay Commission: While a 5-6 percent DA hike was expected for central government employees in July. Know How to calculate DA with new formula.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X