ಭಾರತದಲ್ಲಿ ಕರೋಡ್ ಪತಿಗಳ ಸಂಖ್ಯೆ ಶೇ 60ರಷ್ಟು ಹೆಚ್ಚಳ, ಏನಿದು ಜಾದೂ?

ನವದೆಹಲಿ, ಅಕ್ಟೋಬರ್ 22: ಒಂದು ಆರ್ಥಿಕ ವರ್ಷದಲ್ಲಿ ಕೋಟಿ ರುಪಾಯಿಗೂ ಹೆಚ್ಚು ಸಂಪಾದನೆ ಮಾಡುವ, ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಕಳೆದ ನಾಲ್ಕು ವರ್ಷದಲ್ಲಿ 1.40 ಲಕ್ಷ ಮಂದಿಗೂ ಹೆಚ್ಚಾಗಿದೆ. ಇದು ಶೇಕಡಾ 60ರಷ್ಟು ಹೆಚ್ಚಳ ಆದಂತೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸೋಮವಾರ ಹೇಳಿದೆ.

ಕಳೆದ ನಾಲ್ಕು ವರ್ಷಗಳ ಆದಾಯ ತೆರಿಗೆ ಹಾಗೂ ನೇರ ತೆರಿಗೆಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ವಾರ್ಷಿಕ 1 ಕೋಟಿಗೂ ಹೆಚ್ಚು ಗಳಿಸುವ ತೆರಿಗೆದಾರರ ಸಂಖ್ಯೆಯಲ್ಲಿ ಶೇಕಡಾ 68ಕ್ಕೂ ಹೆಚ್ಚು ಪ್ರಗತಿ ಆಗಿದೆ.

"1 ಕೋಟಿ ರುಪಾಯಿಗೂ ಹೆಚ್ಚು ಆದಾಯ ಘೋಷಿಸಿಕೊಂಡ ಒಟ್ಟಾರೆ ತೆರಿಗೆ ಪಾವತಿಸುವವರ ಸಂಖ್ಯೆ (ಕಾರ್ಪೊರೇಟ್ಸ್, ಸಂಸ್ಥೆಗಳು, ಹಿಂದೂ ಅವಿಭಕ್ತ ಕುಟುಂಬಗಳು ಇತರ ವರ್ಗದಲ್ಲಿವೆ) ಹೆಚ್ಚಳವಾಗಿದೆ. 2014-15ರ ಅಸೆಸ್ ಮೆಂಟ್ ವರ್ಷದಲ್ಲಿ 1 ಕೋಟಿಗೂ ಹೆಚ್ಚು ಆದಾಯ ಘೋಷಿಸಿಕೊಂಡಿದ್ದವರು 88,649 ಮಂದಿ 2017-18ನೇ ಸಾಲಿಗೆ 1,40,139 ಮಂದಿ 1 ಕೋಟಿಗೂ ಹೆಚ್ಚು ಘೋಷಿಸಿದ್ದಾರೆ. ಈ ಲೆಕ್ಕಾಚಾರದಲ್ಲಿ ಶೇ 60ಕ್ಕೂ ಹೆಚ್ಚು ಪ್ರಗತಿ ಆಗಿದೆ" ಎಂದು ಸಿಬಿಡಿಟಿ ಹೇಳಿದೆ.

60 percent increase in number of crorepatis in India: CBDT

ಅದೇ ರೀತಿ, ವೈಯಕ್ತಿಕ ತೆರಿಗೆದಾರರು 1 ಕೋಟಿ ರುಪಾಯಿಗೂ ಹೆಚ್ಚು ಆದಾಯ ಘೋಷಿಸಿಕೊಂಡಿದ್ದವರು ಈ ಅವಧಿಯಲ್ಲಿ 48,416 ಮಂದಿಯಿಂದ 81,344 ಮಂದಿಗೆ ಏರಿಕೆ ಆಗಿದೆ. ಅದನ್ನು ಶೇಕಡಾವಾರು ಪ್ರಮಾಣಕ್ಕೆ ಪರಿವರ್ತಿಸಿ ಹೇಳುವುದಾದರೆ 68%. ಕಳೆದ ನಾಲ್ಕು ವರ್ಷದಲ್ಲಿ ಜಾರಿಗೆ ತಂದ ಕಾನೂನುಗಳು, ಕಾನೂನು ಜಾರಿಗೆ ಹಾಕಿದ ಶ್ರಮದಿಂದ ಕಳೆದ ನಾಲ್ಕು ವರ್ಷದಿಂದ ಇಂಥ ಬೆಳವಣಿಗೆ ಆಗಿದೆ ಎಂದು ಸಿಬಿಡಿಟಿ ಅಧ್ಯಕ್ಷ ಸುಶೀಲ್ ಚಂದ್ರ ಹೇಳಿದ್ದಾರೆ.

ಇನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿರುವವರ ಸಂಖ್ಯೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಶೇಕಡಾ ಎಂಬತ್ತರಷ್ಟು ವೃದ್ಧಿ ಆಗಿದೆ. 2013-14ನೇ ಸಾಲಿನಲ್ಲಿ 3.79 ಕೋಟಿ ಮಂದಿ ಇದ್ದ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ಸಂಖ್ಯೆ 2017-18ನೇ ಸಾಲಿನಲ್ಲಿ 6.85 ಕೋಟಿಗೆ ಏರಿಕೆ ಆಗಿದೆ ಎಂದು ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+