ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಡ್ ಮೋಟಾರ್ಸ್‌ನಿಂದ 3,200 ಉದ್ಯೋಗಿಗಳ ವಜಾ

ಫೋರ್ಡ್ ಮೋಟಾರ್ಸ್‌ ಯುರೋಪ್‌ನಾದ್ಯಂತ 3,200 ಉದ್ಯೋಗಿಗಳನ್ನು ವಜಾ ಮಾಡಲಿದೆ. ಜರ್ಮನಿಯಲ್ಲಿನ ಉದ್ಯೋಗಿಗಳು ಕೂಡ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

|
Google Oneindia Kannada News

ನವದೆಹಲಿ, ಜನವರಿ 24: ಯುಎಸ್ ಮೂಲದ ಕಾರು ತಯಾರಕ ಕಂಪೆನಿ ಫೋರ್ಡ್ ಮೋಟಾರ್ಸ್‌ ಯುರೋಪ್‌ನಾದ್ಯಂತ 3,200 ಉದ್ಯೋಗಿಗಳನ್ನು ವಜಾ ಮಾಡಲಿದೆ. ಜರ್ಮನಿಯಲ್ಲಿನ ಉದ್ಯೋಗಿಗಳು ಕೂಡ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಜರ್ಮನಿಯಲ್ಲಿನ ಐಜಿ ಮೆಟಾಲ್ ಒಕ್ಕೂಟದ ಪ್ರಕಾರ, ಸಂಸ್ಥೆಯು ಕೆಲವು ಉತ್ಪನ್ನ ಅಭಿವೃದ್ಧಿ ಕಾರ್ಯಗಳನ್ನು ಯುನೈಟೆಡ್ ಸ್ಟೇಟ್ಸ್‌ಗೆ ವರ್ಗಾಯಿಸಲು ಉದ್ದೇಶಿಸಿದೆ. ಕಳೆದ ವರ್ಷದ ಎರಡನೇ ಅವಧಿಯಲ್ಲಿ ಫೋರ್ಡ್ 3,000 ಕಾರ್ಮಿಕರನ್ನು ವಜಾಗೊಳಿಸಿತ್ತು. ಅವರಲ್ಲಿ ಹೆಚ್ಚಿನವರು ಯುಎಸ್‌ನಲ್ಲಿದ್ದವರು. ರಾಯಿಟರ್ಸ್‌ನ ವರದಿಗಳ ಪ್ರಕಾರ ವಜಾ ಪ್ರಕ್ರಿಯೆಯನ್ನು ಯುರೋಪಿನಾದ್ಯಂತ ನಡೆಸಲಾಗುತ್ತದೆ ಎನ್ನಲಾಗಿದೆ.

Spotify Layoffs : ಸ್ಪಾಟಿಫೈನಿಂದ ಉದ್ಯೋಗಿಗಳ ವಜಾ ಪ್ರಾರಂಭSpotify Layoffs : ಸ್ಪಾಟಿಫೈನಿಂದ ಉದ್ಯೋಗಿಗಳ ವಜಾ ಪ್ರಾರಂಭ

ನಾವು ಕೆಲವು ಸ್ಥಳಗಳಲ್ಲಿ ಪೂರ್ಣಕಾಲಿಕವಾಗಿ ಹಲವಾರು ನೌಕರರನ್ನು ಹೊಂದಿದ್ದೇವೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಜುಲೈನಲ್ಲಿ ವಜಾಗೊಳಿಸುವ ಸುದ್ದಿ ಬರೆದ ಫಾರ್ಲಿ ವಿಶ್ಲೇಷಕರಿಗೆ ಅವರು ತಿಳಿಸಿದ್ದರು. ನಾವು ಇನ್ನು ಮುಂದೆ ಅಗತ್ಯವಲ್ಲದ ಕೌಶಲ್ಯಗಳನ್ನು ಹೊಂದಿದ್ದೇವೆ. ಅಲ್ಲದೆ ನಾವು ಬದಲಾಯಿಸಬೇಕಾದ ಉದ್ಯೋಗಗಳನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

3,200 will layoffs from Ford Motors across the europe

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ವಸ್ತುಗಳ ಬೆಲೆ ಏರಿಕೆ ಹಾಗೂ ಯುಎಸ್‌ ಮತ್ತು ಯುರೋಪಿಯನ್ ಆರ್ಥಿಕತೆಗಳಲ್ಲಿ ನಿರೀಕ್ಷಿತ ನಿಧಾನಗತಿಯ ಕಾರಣದಿಂದಾಗಿ ಫೋರ್ಡ್ ಮೋಟಾರ್ಸ್‌ ವೆಚ್ಚವನ್ನು ಕಡಿಮೆ ಮಾಡುವ ಒತ್ತಡದಲ್ಲಿದ್ದಾರೆ. ತಜ್ಞರ ಪ್ರಕಾರ, ಈ ತಿಂಗಳ ಆರಂಭದಲ್ಲಿ ಟೆಸ್ಲಾ ಇಂಕ್ ಪ್ರಾರಂಭಿಸಿದ ಇವಿ ಬೆಲೆ ಸ್ಪರ್ಧಾತ್ಮಕತೆ ಪರಿಣಾಮವಾಗಿ ಈ ಒತ್ತಡ ಹೆಚ್ಚಾಗಿದೆ.

ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ಹೆಣಗಾಟಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ಹೆಣಗಾಟ

ಐಜಿ ಮೆಟಾಲ್‌, 2,500 ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಉದ್ಯೋಗಗಳು ಮತ್ತು 700 ಆಡಳಿತಾತ್ಮಕ ಸ್ಥಾನಗಳನ್ನು ನಿಗಮದಿಂದ ತೆಗೆದುಹಾಕಬಹುದು. ಜರ್ಮನ್ ದೇಶದಲ್ಲಿ ಇದು ಅತ್ಯಂತ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಸೋಮವಾರ ನಡೆದ ವರ್ಕ್ಸ್ ಕೌನ್ಸಿಲ್ ಸಭೆಯಲ್ಲಿ ಮರ್ಕೆನಿಚ್ ಅಭಿವೃದ್ಧಿ ಕೇಂದ್ರದಲ್ಲಿ 3,800 ಸೇರಿದಂತೆ ಒಟ್ಟಾರೆ ಸುಮಾರು 14,000 ಜನರನ್ನು ನೇಮಿಸಿಕೊಂಡಿರುವ ಕಂಪೆನಿ ಉದ್ಯೋಗಿಗಳಿಗೆ ಈ ಯೋಜನೆಗಳ ಬಗ್ಗೆ ತಿಳಿಸಲಾಗಿದೆ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

3,200 will layoffs from Ford Motors across the europe

ಈ ಬಗ್ಗೆ ಜರ್ಮನಿಯಲ್ಲಿ ಫೋರ್ಡ್‌ನ ವಕ್ತಾರರು ಹೇಳಿಕೆ ನೀಡಿಲ್ಲ. ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ, ಅಂತಿಮ ಯೋಜನೆಗಳು ಜಾರಿಯಾಗುವವರೆಗೆ ಕಂಪನಿಯು ಹೆಚ್ಚಿನ ಪ್ರತಿಕ್ರಿಯೆಯನ್ನು ತಡೆಹಿಡಿಯುತ್ತದೆ. ಎಲೆಕ್ಟ್ರಿಕ್ ವಾಹನಗಳ (ಇವಿ) ಉತ್ಪಾದನೆಗೆ ಪರಿವರ್ತನೆಗೆ ರಚನಾತ್ಮಕ ಹೊಂದಾಣಿಕೆಗಳ ಅಗತ್ಯವಿದೆ ಎಂದು ಹೇಳಿದೆ.

ಮುಖ್ಯವಾಹಿನಿಯ ಮಾರುಕಟ್ಟೆಗೆ ಎಲ್ಲಾ ವಿದ್ಯುತ್ ಮಾದರಿಯನ್ನು ಉತ್ಪಾದಿಸುವ ಸಲುವಾಗಿ ತನ್ನ ಕಲೋನ್ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಫೋರ್ಡ್ ಈ ವರ್ಷದ ಆರಂಭದಲ್ಲಿ 2 ಬಿಲಿಯನ್ ಡಾಲರ್‌ ಹೂಡಿಕೆಯನ್ನು ಘೋಷಿಸಿದೆ. ಫೋರ್ಡ್ ಫಿಯೆಸ್ಟಾ, ಅದರ ಎಂಜಿನ್‌ಗಳು ಮತ್ತು ಪ್ರಸರಣಗಳನ್ನು ಪ್ರಸ್ತುತ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ.

ಇವಿ ಪುಶ್‌ನ ಭಾಗವಾಗಿ ಯುರೋಪ್‌ನಲ್ಲಿ ಸುಮಾರು 45,000 ಜನರನ್ನು ನೇಮಿಸಿಕೊಳ್ಳುವ ಪೋರ್ಡ್‌ ಈ ಪ್ರದೇಶದಲ್ಲಿ ಏಳು ಹೊಸ ವಿದ್ಯುತ್ ಮಾದರಿಗಳು, ಜರ್ಮನಿಯಲ್ಲಿ ಬ್ಯಾಟರಿ ಜೋಡಣೆ ಸೈಟ್ ಮತ್ತು ಟರ್ಕಿಯಲ್ಲಿ ನಿಕಲ್ ಕೋಶಗಳ ಉತ್ಪಾದನೆಗೆ ಜಂಟಿ ಉದ್ಯಮವನ್ನು ಯೋಜಿಸುತ್ತಿದ್ದಾರೆ.

English summary
US-based carmaker Ford Motors will layoff 3,200 jobs across Europe. Employees in Germany have also lost their jobs, reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X