ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೆ ಚಲಾವಣೆಗೆ ಬರಲಿದೆ 2,000 ಮುಖಬೆಲೆ ನೋಟು!

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಸದ್ಯದಲ್ಲೇ 2 ಸಾವಿರ ರುಪಾಯಿ ನೋಟು ನಿಮ್ಮ ಕಿಸೆ ಸೇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ನೋಟು ಬಿಡುಗಡೆಗೆ ಎಲ್ಲ ಸಿದ್ಧತೆ ಪೂರ್ಣಗೊಳಿಸಿದೆ. ಸದ್ಯಕ್ಕೆ 1 ಸಾವಿರ ರುಪಾಯಿ ನೋಟು ಚಲಾವಣೆಯಲ್ಲಿರುವ ಗರಿಷ್ಠ ಬೆಲೆಯದಾಗಿದೆ. ಆ ಸಂಖ್ಯೆ ದ್ವಿಗುಣವಾಗಿ 2 ಸಾವಿರ ರುಪಾಯಿ ಹೆಚ್ಚಿನ ಮೊತ್ತದ ಸ್ಥಾನ ಅಲಂಕರಿಸಲಿದೆ.

ಕಳೆದ ಕೆಲ ತಿಂಗಳಿಂದ 500, 1000 ಮೌಲ್ಯದ ನೋಟುಗಳನ್ನು ವಾಪಸ್ ಪಡೆದರೆ ಕಪ್ಪುಹಣದ ಪ್ರಮಾಣ ಕಡಿಮೆ ಅಗುತ್ತದೆ ಎಂಬ ಬೇಡಿಕೆ ವಿವಿಧ ವಲಯದಿಂದ ಕೇಳಿಬಂದಿತ್ತು. ಇದೀಗ 2000 ಮೌಲ್ಯದ ನೋಟುಗಳನ್ನೇ ಬಿಡುಗಡೆ ಮಾಡಬೇಕು ಎಂಬ ನಿರ್ಧಾರ ಮಹತ್ವ ಪದೆದುಕೊಂಡಿದ್ದು, ಕುತೂಹಲಕ್ಕೂ ಕಾರಣವಾಗಿದೆ.[ಆರ್ ಬಿಐನಿಂದ ರೆಪೋ ದರ ಇಳಿಕೆ, ಬಡ್ಡಿ ದರ ಇಳಿಕೆ ಯಾವಾಗ?]

RBI

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರೆಗೆ ಬಿಡುಗಡೆ ಮಾಡಿದ ಅಧಿಕ ಮೊತ್ತದ ನೋಟೆಂದರೆ ಅದು 10,000 ಮುಖ ಬೆಲೆಯದು. 1938 ಹಾಗೂ 1954ರಲ್ಲಿ. ಆ ನಂತರ 1946 ಮತ್ತು 1978ರಲ್ಲಿ ವಾಪಸ್ ಪಡೆಯಲಾಯಿತು. 2,000 ರುಪಾಯಿ ನೋಟಿನ ಬಿಡುಗಡೆ ಬಗ್ಗೆ ಸರಕಾರದಿಂದಾಗಲೀ ರಿಸರ್ವ್ ಬ್ಯಾಂಕ್ ನಿಂದಾಗಲೀ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.[ರಿಸರ್ವ್ ಬ್ಯಾಂಕ್‌ಗೆ ಹೊಸ ಸಾರಥಿ ಉರ್ಜಿತ್ ಪಟೇಲ್]

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಲಹೆ ಮೇರೆಗೆ ಸರಕಾರವು ವಿತರಿಸಬೇಕಾದ ನೋಟಿನ ಮುಖಬೆಲೆಯನ್ನು ನಿರ್ಧರಿಸುತ್ತದೆ. ಮಾರ್ಚ್ 2016ಕ್ಕೆ ಚಾಲ್ತಿಯಲ್ಲಿರುವ ಬ್ಯಾಂಕ್ ನೋಟುಗಳ ಮೊತ್ತ 16,41,500 ಲಕ್ಷ ಕೋಟಿ ರುಪಾಯಿ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14.9 ರಷ್ಟು ಹೆಚ್ಚಾಗಿದೆ. ಸದ್ಯಕ್ಕೆ ಚಲಾವಣೆಯಲ್ಲಿರುವ ಹಣದ ಪೈಕಿ 500 ಹಾಗೂ 1000 ಮೊತ್ತದ ನೋಟಿನ ಪ್ರಮಾಣ ಶೇ 86.4ರಷ್ಟಿದೆ.

English summary
2,000 rupee note will be release soon. But there is no official announcement by Reserve bank of India or Governmnet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X