• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಟ್ ಏರ್ ವೇಸ್ ಗೆ ದಿನಕ್ಕೆ 14 ಕೋಟಿ ನಷ್ಟ, ಮೂರನೇ ಬಾರಿಗೆ 1000 ಕೋಟಿಗೂ ಹೆಚ್ಚು ನಷ್ಟ

|

ನವದೆಹಲಿ, ನವೆಂಬರ್ 12: ಬಿಕ್ಕಟ್ಟು ಉಲ್ಬಣ ಆಗಿರುವ ಜೆಟ್ ಏರ್ ವೇಸ್ ವಿಮಾನ ಯಾನ ಸಂಸ್ಥೆಯು ಜುಲೈ-ಸೆಪ್ಟೆಂಬರ್ 2018ರ ತ್ರೈ ಮಾಸಿಕದಲ್ಲಿ ರು.1297.5 ಕೋಟಿ ನಷ್ಟ ದಾಖಲಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು ರು.49.6 ಕೋಟಿ ಲಾಭ ಗಳಿಸಿತ್ತು.

ಇದು ಮೂರನೇ ಬಾರಿಗೆ 1,000 ಕೋಟಿಗೂ ಹೆಚ್ಚಿನ ನಷ್ಟವನ್ನು ತ್ರೈಮಾಸಿಕ ಫಲಿತಾಂಶದಲ್ಲಿ ತೋರಲಾಗುತ್ತಿದೆ. ಏಪ್ರಿಲ್-ಜೂನ್ 2018ರ ತ್ರೈ ಮಾಸಿಕದಲ್ಲಿ ಜೆಟ್ ಏರ್ ವೇಸ್ 1323 ಕೋಟಿ ರುಪಾಯಿ ನಷ್ಟ ಅನುಭವಿಸಿತ್ತು. ಅದೇ ಕಳೆದ ವರ್ಷದ ಮೊದಲ ತ್ರೈ ಮಾಸಿಕದಲ್ಲಿ 53.5 ಕೋಟಿ ರುಪಾಯಿ ಲಾಭ ಪಡೆದಿತ್ತು.

ಮಾತಿನಂತೆ ವೇತನ ನೀಡಲಾಗದೆ ಕಾಲಾವಕಾಶ ಕೇಳಿದ ಜೆಟ್ ಏರ್ ವೇಸ್

ಈ ವರ್ಷದ ಮೊದಲ ಆರು ತಿಂಗಳಲ್ಲಿ ಜೆಟ್ ಏರ್ ವೇಸ್ 2,620.5 ಕೋಟಿ ರುಪಾಯಿ ಅಥವಾ ದಿನಕ್ಕೆ 14.4 ಕೋಟಿಯಂತೆ ನಷ್ಟ ಅನುಭವಿಸಿದೆ. ಸೆನ್ಸೆಕ್ಸ್ (ಬಾಂಬೆ ಸ್ಟಾಕ್ ಎಕ್ಸ್ ಚೇಂಜ್)ನಲ್ಲಿ ಜೆಟ್ ಏರ್ ವೇಸ್ ಷೇರು ಸೋಮವಾರ 6% ಇಳಿಕೆಯಾಗಿ, ದಿನಾಂತ್ಯಕ್ಕೆ 242.05ಕ್ಕೆ ವಹಿವಾಟು ಮುಕ್ತಾಯ ಮಾಡಿದೆ.

ವಿಮಾನ ಕ್ಷೇತ್ರದಲ್ಲಿನ ಕಷ್ಟದ ಸನ್ನಿವೇಶ, ಕಚ್ಚಾ ತೈಲದಲ್ಲಿನ ಭಾರೀ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಹಾಗೂ ಹೆಚ್ಚುತ್ತಿರುವ ವಿಮಾನ ಯಾನ ಸಂಸ್ಥೆಗಳಿಂದ ದರ ನಿಗದಿಪಡಿಸುವಲ್ಲಿನ ಸವಾಲುಗಳ ಕಾರಣಕ್ಕೆ ಈ ರೀತಿ ನಷ್ಟ ಎದುರಿಸುವಂತಾಗಿದೆ ಎಂದು ಜೆಟ್ ವಿಮಾನ ಯಾನ ಸಂಸ್ಥೆ ಹೇಳಿದೆ.

ಸಾವಿರಾರು ಕೋಟಿ ನಷ್ಟದಲ್ಲಿ ವಿಮಾನಯಾನ ಸಂಸ್ಥೆಗಳು

ಇಂಡಿಗೋ ವಿಮಾನ ಯಾನ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತ್ರೈ ಮಾಸಿಕದಲ್ಲಿ 652.1 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಕಳೆದ ವರ್ಷ ಇದೇ ಎರಡನೇ ತ್ರೈ ಮಾಸಿಕದಲ್ಲಿ 551.6 ಕೋಟಿ ಲಾಭ ಪಡೆದಿತ್ತು. ಮತ್ತೊಂದು ಲಿಸ್ಟೆಡ್ ಏರ್ ಲೈನ್ ಸ್ಪೈಸ್ ಜೆಟ್ ಎರಡನೇ ತ್ರೈ ಮಾಸಿಕ ಫಲಿತಾಂಶವನ್ನು ಬುಧವಾರ ಪ್ರಕಟಿಸಲಿದೆ.

English summary
Jet Airways has reported a loss of Rs 1,297.5 crore in the July-September, 2018, period versus a profit of Rs 49.6 crore in same quarter previous fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X