ಬೀದರ್ ಜಿಲ್ಲೆಗೆ ಕೇಂದ್ರದ ಕೊಡುಗೆ; 4 ಪಥದ ರಸ್ತೆ ಮಂಜೂರು

ಬೀದರ್‌, ಫೆಬ್ರವರಿ 04: ಕೇಂದ್ರ ಸರ್ಕಾರ ಕರ್ನಾಟಕದ ಬೀದರ್ ಜಿಲ್ಲೆಗೆ ಕೊಡುಗೆಯೊಂದನ್ನು ನೀಡಿದೆ. 405.30 ಕೋಟಿ ರೂ. ಅನುದಾನದಲ್ಲಿ 15.87 ಕಿ. ಮೀ. ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲು ಒಪ್ಪಿಗೆ ನೀಡಲಾಗಿದೆ.

ಬೀದರ್ ಕ್ಷೇತ್ರದ ಸಂಸದ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಮತ್ತು ರಾಸಾಯನಿಕಗಳು ಮತ್ತು ಮತ್ತು ರಸಗೊಬ್ಬರಗಳ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

 Union Govt Approved For 4 Lane Road To Chincholi Of Bidar

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ನಮ್ಮ ಬೀದರ್ ಲೋಕಸಭಾ ಕ್ಷೇತ್ರದ ಚಿಂಚೋಳಿಗೆ ತೆಲಂಗಾಣ ಗಡಿಯಿಂದ ಚತುಷ್ಪಥ ಹೆದ್ದಾರಿ ಮಂಜೂರಾಗಿದೆ. ರೂ. 405.30 ಕೋಟಿ ಅನುದಾನದಲ್ಲಿ 15.87 ಕಿ. ಮೀ. ಹೆದ್ದಾರಿ ಮಂಜೂರಾಗಿದ್ದು, ಇದು ಚಿಂಚೋಳಿ ಭಾಗದ ಜನರಿಗೆ ಅನುಕೂಲಕರವಾಗಿ, ವ್ಯಾಪಾರ, ಉದ್ದಿಮೆ ಹೆಚ್ಚಳಕ್ಕೆ ಸಹಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

ಯೋಜನೆಯ ವಿವರಗಳು; ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಕುರಿತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ ಪತ್ರದ ಮೂಲಕ ಭಗವಂತ ಖೂಬಾ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ರಸ್ತೆ ತೆಲಂಗಾಣ ಗಡಿಯಿಂದ ಮಿರಿಯಾಣ, ಪೋಲಕಪಳ್ಳಿ, ಚಿಂಚೋಳಿ ತನಕ ಇರಲಿದೆ. ಈ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌ 167 ಕಿ. ಮೀ. ನಿಂದ ಆರಂಭವಾಗಿ ಒಟ್ಟು 15.80 ಕಿ. ಮೀ. ವರೆಗೆ ಚತುಷ್ಪಥವಾಗಿ ನಿರ್ಮಾಣವಾಗಲಿದೆ. ರಸ್ತೆ ನಿರ್ಮಾಣದಿಂದ ಚಿಂಚೋಳಿ ತಾಲೂಕಿಗೆ ಸಹಾಯಕವಾಗಲಿದೆ. ರಸ್ತೆಯ ಅಕ್ಕಪಕ್ಕದ ಗ್ರಾಮಗಳು ಅಭಿವೃದ್ಧಿಗೊಳ್ಳಲಿದೆ. ಚಿಂಚೋಳಿ ಪಟ್ಟಣದ ಸೌಂದರ್ಯವೂ ಸಹ ಹೆಚ್ಚಾಗಲಿದೆ.

ಸಂಸದರು ಈಗಾಗಲೇ ಕಳೆದ 10 ವರ್ಷಗಳಲ್ಲಿ ಪಿಎಂಜಿಎಸ್‌ವೈ ಅಡಿ ನಿರ್ಮಾಣಗೊಂಡಿರುವ ರಸ್ತೆಯ ಕುರಿತು ಮಾಹಿತಿ ನೀಡಿದ್ದಾರೆ. ಸುಮಾರು 60 ಕೋಟಿ ಅನುದಾನದಲ್ಲಿ 60 ಕಿ. ಮೀ. ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಕೊಡ್ಲಿಯಿಂದ ತಾಂಡೂರ ವಯಾ ಚಿಂಚೋಳಿ ತನಕ 8 ಕೋಟಿ ರೂ. ವೆಚ್ಚದಲ್ಲಿ ಚಿಂಚೋಳಿ ಮುಖ್ಯ ರಸ್ತೆಯಿಂದ ತಾಂಡೂರ ರಸ್ತೆಯಿಂದ ಕೊಂಚಾವರಂವರೆಗೆ, 20 ಕೋಟಿ ವೆಚ್ಚದಲ್ಲಿ ಕೊಡ್ಲಿ ಕ್ರಾಸ್‌ನಿಂದ ಚಂದನಕೇರಾವರೆಗೆ ರಸ್ತೆಯ ಅಭಿವೃದ್ಧಿಯನ್ನು ಸೆಂಟ್ರಲ್ ರೋಡ್ ಫಂಡ್‌ನಡಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಚಿಂಚೋಳಿ ತಾಲೂಕಿನ ಚಂದಾಪುರ, ಕಲ್ಲೂರ, ಪೋಲಕಪಳ್ಳಿ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. 10 ಕಿ. ಮೀ. ರಸ್ತೆ ಹಾಳಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಗುಂಡಿಗಳನ್ನು ಮುಚ್ಚಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬೇಡಿಕೆ ಇಡಲಾಗಿತ್ತು.

ಈ ಹಿಂದೆ ಕರ್ನಾಟಕ ಸರ್ಕಾರ ಬಾಪೂರ-ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿಗೆ ಮನವಿ ಸಲ್ಲಿಕೆ ಮಾಡಿತ್ತು ಈ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿತ್ತು. ಚಿಂಚೋಳಿಯಲ್ಲಿ 32 ಕಿ. ಮೀ.ಯ ಈ ನಾಲ್ಕು ಪಥದ ರಸ್ತೆ ಹಾದು ಹೋಗುತ್ತದೆ.

ಬಾಪೂರ-ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿ ಒಟ್ಟು 32 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ಚಿಂಚೋಳಿ ತಾಲೂಕಿನಲ್ಲಿ ಹಾದು ಹೋಗಲಿದೆ. ಈ ಪೈಕಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಖಾಸಗಿ ಸಹಭಾಗಿತ್ವದಲ್ಲಿ 4 ವರ್ಷಗಳ ಹಿಂದೆ 16 ಕಿ. ಮೀ. ರಸ್ತೆ ಅಭಿವೃದ್ಧಿಗೊಳಿಸಿದೆ.

ಮುಂದಿನ ಭಾಗವಾಗಿ ಅಂದರೆ ಚಿಂಚೋಳಿಯಿಂದ ತೆಲಂಗಾಣದ ಗಡಿ ಮಿರಿಯಾಣ ತನಕ 15.8 ಕಿ. ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತದೆ. 6.7 ಕಿ. ಮೀ. ಮತ್ತು 3.1 ಕಿ. ಮೀ. ಸೇರಿ ಎರಡು ಬೈಪಾಸ್ ಸಹ ಈ ಯೋಜನೆಯ ಭಾಗವಾಗಿ ನಿರ್ಮಾಣವಾಗಲಿದೆ ಎಂಬುದು ಯೋಜನಾ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+