ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದರ್‌ ಮೂಲಕ 2 ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ

|
Google Oneindia Kannada News

ಬೀದರ್, ಡಿಸೆಂಬರ್ 14; ಬೀದರ್ ನಿಂದ ಇನ್ನೆರಡು ವಿಶೇಷ ರೈಲುಗಳ ಸಂಚಾರ ಡಿಸೆಂಬರ್ 13ರಿಂದ ಆರಂಭವಾಗಿದೆ. ಪ್ರಯಾಣಿಕರು ರೈಲು ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ, ಬೀದರ್ ಸಂಸದ ಭಗವಂತ ಖೂಬಾ ಈ ಕುರಿತು ಮಾಹಿತಿ ನೀಡಿದ್ದಾರೆ. ಮುಂದಿನ ಆದೇಶದ ತನಕ ಈ ರೈಲುಗಳು ಸಂಚಾರ ನಡೆಸಲಿವೆ. ಡಿಸೆಂಬರ್ 13ರಿಂದ ಸೋಲಾಪುರ ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ ಹಾಗೂ ಸೋಲಾಪುರ-ತಿರುಪತಿ-ಸೋಲಾಪುರ ವಿಶೇಷ ರೈಲುಗಳು ಬೀದರ್ ಮಾರ್ಗವಾಗಿ ಸಂಚಾರ ನಡೆಸಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Breaking; ಶಿವಮೊಗ್ಗದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಡಿಸಿ Breaking; ಶಿವಮೊಗ್ಗದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಡಿಸಿ

ರೈಲು ಸಂಖ್ಯೆ 01435/01436 ಸೋಲಾಪುರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ ರೈಲು ಡಿಸೆಂಬರ್ 13 ರಿಂದ 2023ರ ಫೆಬ್ರವರಿ 14ರ ತನಕ ಪ್ರತಿ ಮಂಗಳವಾರ ಸಂಚಾರ ನಡೆಸಲಿದೆ. ಸೋಲಾಪುರದಿಂದ ಬೆಳಗ್ಗೆ 9.20ಕ್ಕೆ ಹೊರಟು ಕಲಬುರಗಿ ಮಾರ್ಗವಾಗಿ ಮಧ್ಯಾಹ್ನ 12.39ಕ್ಕೆ ಹುಮನಾಬಾದ್, ಮಧ್ಯಾಹ್ನ 2ಕ್ಕೆ ಬೀದರ್ ತಲುಪಲಿದೆ. ಮಧ್ಯಾಹ್ನ 2.49ಕ್ಕೆ ಬೀದರ್‌ಗೆ ಆಗಮಿಸಲಿದೆ.

ಕರ್ನಾಟಕದ ರೈಲು ಯೋಜನೆಗಳು; ಹೊಸ ಮಾರ್ಗ, ದ್ವಿಪಥ ವಿವರಗಳುಕರ್ನಾಟಕದ ರೈಲು ಯೋಜನೆಗಳು; ಹೊಸ ಮಾರ್ಗ, ದ್ವಿಪಥ ವಿವರಗಳು

ಬಳಿಕ ರೈಲು ಉದಗಿರಿ, ಲಾತೂರ ರಸ್ತೆ, ಪುಣೆ, ಥಾಣೆ ಮಾರ್ಗವಾಗಿ ಬುಧವಾರ ಬೆಳಗ್ಗೆ 3.45ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್ (ಕುರ್ಲಾ ಮುಂಬೈ) ತಲುಪಲಿದೆ.

ಕಲಬುರಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆಕಲಬುರಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಎಲ್‌. ಟಿ. ಟಿ.-ಸೋಲಾಪುರ-ಎಲ್‌. ಟಿ. ಟಿ ರೈಲು

ಎಲ್‌. ಟಿ. ಟಿ.-ಸೋಲಾಪುರ-ಎಲ್‌. ಟಿ. ಟಿ ರೈಲು

ಡಿಸೆಂಬರ್ 14 ರಿಂದ 2023ರ ಫೆಬ್ರವರಿ 15ರ ತನಕ ಒಟ್ಟು 12 ಬುಧವಾರಗಳ ಕಾಲ ಎಲ್‌. ಟಿ. ಟಿ.-ಸೋಲಾಪುರ-ಎಲ್‌. ಟಿ. ಟಿ. ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಈ ಮಾರ್ಗದಲ್ಲಿ ರೈಲು ಸಂಖ್ಯೆ 01436 ಸಂಚಾರ ನಡೆಸಲಿದೆ.

ಈ ರೈಲು ಮಧ್ಯಾಹ್ನ 12.50ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಹೊರಟು ಗುರುವಾರ ಮುಂಜಾನೆ 2.54ಕ್ಕೆ ಭಾಲ್ಕಿ ತಲುಪಲಿದೆ. ಅಲ್ಲಿಂದ ಹೊರಡುವ ರೈಲು 4 ಗಂಟೆಗೆ ಬೀದರ್ ತಲುಪಲಿದೆ. 4.29ಕ್ಕೆ ಹುಮನಾಬಾದ್‌ಗೆ ಆಗಮಿಸಲಿದೆ. ಬಳಿಕ 9.25ಕ್ಕೆ ಸೋಲಾಪುರಕ್ಕೆ ತಲುಪಲಿದೆ.

ಸೋಲಾಪುರ-ತಿರುಪತಿ-ಸೋಲಾಪುರ ರೈಲು

ಸೋಲಾಪುರ-ತಿರುಪತಿ-ಸೋಲಾಪುರ ರೈಲು

ರೈಲ್ವೆ ಇಲಾಖೆ 01437/ 01438 ಸಂಖ್ಯೆಯ ರೈಲನ್ನು ಸೋಲಾಪುರ-ತಿರುಪತಿ-ಸೋಲಾಪುರ ನಡುವೆ ಓಡಿಸಲಿದೆ. ಡಿಸೆಂಬರ್ 15ರಿಂದ 2023ರ ಫೆಬ್ರವರಿ 16ರ ತನಕ ಒಟ್ಟು 12 ಗುರುವಾರ ಈ ರೈಲು ಓಡಲಿದೆ.

ಸೋಲಾಪುರದಿಂದ ರಾತ್ರಿ 9.40ಕ್ಕೆ ಹೊರಡುವ ರೈಲು ಕುರುಡವಾಡಿ, ಉಸ್ಮಾನಾಬಾದ್, ಉದಗಿರ ಮಾರ್ಗವಾಗಿ ಸಂಚಾರ ನಡೆಸಿ ಶುಕ್ರವಾರ ಮುಂಜಾನೆ 4.04ಕ್ಕೆ ಭಾಲ್ಕಿ ತಲುಪಲಿದೆ. 4.35ಕ್ಕೆ ಬೀದರ್, 5.54ಕ್ಕೆ ಹುನಮನಾಬಾದ್ ತಲುಪಲಿದೆ. ಕಲಬುರಗಿ, ಯಾದಗಿರಿ ಮಾರ್ಗವಾಗಿ ಸಾಗಿ ರಾತ್ರಿ 7.45ಕ್ಕೆ ತಿರುಪತಿ ತಲುಪಲಿದೆ.

ತಿರುಪತಿ-ಸೋಲಾಪುರ-ತಿರುಪತಿ ರೈಲು

ತಿರುಪತಿ-ಸೋಲಾಪುರ-ತಿರುಪತಿ ರೈಲು

01438 ಸಂಖ್ಯೆಯ ರೈಲು ತಿರುಪತಿ-ಸೋಲಾಪುರ-ತಿರುಪತಿ ನಡುವೆ ಸಂಚಾರ ನಡೆಸಲಿದೆ. ರೈಲು ಡಿಸೆಂಬರ್ 16 ರಿಂದ 2023ರ ಫೆಬ್ರುವರಿ 17ರ ವರೆಗೆ ಒಟ್ಟು 12 ಶುಕ್ರವಾರ ಈ ರೈಲು ಸಂಚಾರ ನಡೆಸಲಿದೆ.

ರಾತ್ರಿ 9.10ಕ್ಕೆ ತಿರುಪತಿಯಿಂದ ಹೊರಡುವ ರೈಲು ಶನಿವಾರ ಬೆಳಗ್ಗೆ 8.14ಕ್ಕೆ ಹುಮನಾಬಾದ್ ತಲುಪಲಿದೆ. ಬೆಳಗ್ಗೆ 10.10ಕ್ಕೆ ಬೀದರ್, ಬೆಳಗ್ಗೆ 11.04ಕ್ಕೆ ಭಾಲ್ಕಿಗೆ ತಲುಪಲಿದೆ. ಬಳಿಕ ರಾತ್ರಿ 7.10ಕ್ಕೆ ಸೋಲಾಪುರ ತಲುಪಲಿದೆ.

ವಿಶೇಷ ರೈಲುಗಳ ಸಂಚಾರ

ವಿಶೇಷ ರೈಲುಗಳ ಸಂಚಾರ

ರೈಲ್ವೆ ಇಲಾಖೆ ಘೋಷಣೆ ಮಾಡಿರುವ ಈ ರೈಲುಗಳು ವಿಶೇಷ ರೈಲುಗಳಾಗಿವೆ. ಮುಂದಿನ ಆದೇಶದ ತನಕ ಮಾತ್ರ ಓಡಲಿವೆ. ರೈಲು ಸೇವೆ ವಿಸ್ತರಣೆ ಮಾಡುವ ಕುರಿತು ಇಲಾಖೆ ಬಳಿಕ ತೀರ್ಮಾನ ಕೈಗೊಳ್ಳಲಿದೆ.

ಕಲಬುರಗಿ ಜನರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 5, 12, 19, 26ರಂದು ನಾಂದೇಡ್-ಯಶವಂತಪುರ ವಯಾ ಬೀದರ್, ಕಲಬುರಗಿ & ಡಿಸೆಂಬರ್ 6, 13, 20, 27ರಂದು ಯಶವಂತಪುರ ವಯಾ ಕಲಬುರಗಿ, ಬೀದರ್‌-ನಾಂದೇಡ್ ಮಾರ್ಗವಾಗಿ ವಿಶೇಷ ರೈಲು ಸಂಚಾರ ನಡೆಸಲಿದೆ.

English summary
Indian railways to run Two special trains via Bidar. Know special train schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X