ಬೀದರ್ ಇಬ್ಬರು ಮಹಿಳೆಯರು ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು

ಬೀದರ್, ಡಿಸೆಂಬರ್ 02 : ಬೀದರ್‌ನಲ್ಲಿ ಭಾನುವಾರ ಮುಂಜಾನೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಕೊಲೆ ಆರೋಪಿ ದೇವಪ್ಪ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ಬೀದರ್‌ನ ಶಾಹಗಂಜ್ ಪ್ರದೇಶದ ಹನುಮಾನ್ ಮಂದಿರ ಬಳಿ ಮುಂಜಾನೆ ಲಲಿತಮ್ಮ (45) ಮತ್ತು ದುರ್ಗಮ್ಮ (60) ಹತ್ಯೆ ನಡೆದಿತ್ತು. ಬೆಳಗ್ಗೆ ವಾಯು ವಿಹಾರಕ್ಕೆ ಹೋಗಿದ್ದಾಗ ಇಬ್ಬರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು.

ದೇವಪ್ಪ ವಿಚಾರಣೆ ನಡೆಸಿದಾಗ ಆತ ಹುನುಮಾನ್ ಮಂದಿರಕ್ಕೆ ಕಳ್ಳತನಕ್ಕೆ ಬಂದಿದ್ದ ಎಂಬುದು ಗೊತ್ತಾಗಿದೆ. ಆತ ಕಳ್ಳತನಕ್ಕೆ ಸಿದ್ಧವಾಗಿದ್ದಾಗ ಲಲಿತಮ್ಮ ಮತ್ತು ದುರ್ಗಮ್ಮ ಅಲ್ಲಿಗೆ ಬಂದು ನೀನು ಯಾರು? ಎಂದು ವಿಚಾರಿಸಿದ್ದರು.

Twist to two women murder case in Bidar

ಇದರಿಂದಾಗಿ ಕಳ್ಳತನಕ್ಕೆ ಬಂದಿದ್ದ ವಿಷಯ ಉರಿನವರಿಗೆ ತಿಳಿಯಲಿದೆ ಎಂದು ಭಯಪಟ್ಟ ಆತ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಇಬ್ಬರನ್ನು ಹತ್ಯೆ ಮಾಡಿದ್ದ. ಪರಾರಿಯಾಗಲು ಪ್ರಯತ್ನ ನಡೆಸುವಾಗ ಜನರ ಕೈಗೆ ಸಿಕ್ಕ ಬಿದ್ದಿದ್ದ.

'ಆರೋಪಿ ದೇವಾಲಯದ ಕಳ್ಳತನಕ್ಕೆ ಬಂದಿದ್ದ ಎಂಬ ಮಾಹಿತಿ ಪ್ರಾಥಮಿಕವಾಗಿ ಲಭ್ಯವಿದೆ. ಆರೋಪಿ ವಿಚಾರಣೆ ನಡೆಯುತ್ತಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ' ಎಂದು ಎಸ್‌ಪಿ ರವೀಂದ್ರ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+