ಬೀದರ್ : 10 ವರ್ಷದ ಬಳಿಕ ಸೂರ್ಯ ಕಿರಣ್ ವೈಮಾನಿಕ ಪ್ರದರ್ಶನ

ಬೀದರ್, ಆಗಸ್ಟ್ 09 : ಬೀದರ್‌ನಲ್ಲಿ ಈ ವರ್ಷ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಬಹಳ ವಿಶೇಷವಾಗಿದೆ. ಈ ಬಾರಿ ಪ್ರತಿಷ್ಠಿತ 'ಸೂರ್ಯ ಕಿರಣ್' ತಂಡ ನಗರದಲ್ಲಿ ವೈಮಾನಿಕ ಪ್ರದರ್ಶನವನ್ನು ನೀಡಲಿದೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮೆರಗು ಹೆಚ್ಚಿಸಲು ವೈಮಾನಿಕ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ವಾಯುಪಡೆ ಜೊತೆಗೆ ಈಗಾಗಲೇ ಮಾತುಕತೆ ನಡೆದಿದ್ದು, ಅಧಿಕಾರಿಗಳ ತಂಡ ಸ್ಥಳವನ್ನು ವೀಕ್ಷಣೆ ಮಾಡಿದೆ.

ಬೀದರ್ ಕೋಟೆ ಆವರಣದಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದೆ. 10 ವರ್ಷಗಳ ಬಳಿಕ ಸೂರ್ಯ ಕಿರಣ್ ತಂಡ ತವರು ನೆಲದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿದ್ದು, ಸಾವಿರಾರು ಜನರು ಪ್ರದರ್ಶನಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

Surya Kiran team will perform in Bidar after 10 years

ಸೂರ್ಯಕಿರಣ್ ತಂಡ : ಸೂರ್ಯ ಕಿರಣ್ ತಂಡ ಬೀದರ್ ಏರ್‌ಪೋರ್ಸ್ ಸ್ಟೇಷನ್‌ನಲ್ಲಿಯೇ ಇದೆ. 1996ರಲ್ಲಿ ಕಿರಣ್ ಎಂಕೆ -11 ವಿಮಾನದ ಮೂಲಕ ತಂಡ ವೈಮಾನಿಕ ಪ್ರದರ್ಶನವನ್ನು ಆರಂಭಿಸಿತು. ಈಗ 9 ವಿಮಾನಗಳ ಮೂಲಕ ದೊಡ್ಡ ತಂಡವಾಗಿ ಬೆಳೆದಿದೆ.

10 ವರ್ಷಗಳ ಬಳಿಕ ಬೀದರ್‌ನಲ್ಲಿ ತಂಡ ವೈಮಾನಿಕ ಪ್ರದರ್ಶನ ನೀಡಲಿದ್ದು, Hawk-Mk 132 ವಿಮಾನದ ಮೂಲಕ ಪ್ರದರ್ಶನ ನೀಡಲಿದೆ. ಎರಡು ಅಥವ ಮೂರು ಮಾದರಿ ಪ್ರದರ್ಶನವನ್ನು ನೀಡಲು ತಂಡ ಈಗಾಗಲೇ ಸಿದ್ಧತೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+