ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಗೆ ಬೀದರ್ ಬೆಡಗಿ ನಿಶಾ

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಅಕ್ಟೋಬರ್ 12; ಗಡಿ ಜಿಲ್ಲೆ ಬೀದರ್ ಗೆ ಹಿಂದುಳಿದ ಜಿಲ್ಲೆ ಅನ್ನುವ ಪಟ್ಟವಿದೆ. ಆದರೆ ಅದೇ ಜಿಲ್ಲೆಯ ಚಿಕ್ಕ ಗ್ರಾಮದ ಯುವತಿಯೊಬ್ಬಳು 2019ರ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಜಿಲ್ಲೆಯ ಹೆಸರನ್ನು ಪ್ರತಿನಿಧಿಸಿದ್ದಾಳೆ.

ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಧುಮ್ಮನಸೂರ ಗ್ರಾಮದ ಯುವತಿ ನಿಶಾ ತಾಳಂಪಳ್ಳಿ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 2019ರ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಗೆ ಆಯ್ಕೆಯಾಗಿದ್ದಾರೆ. ಇದೇ 18ರಂದು ಮಿಸ್ ಇಂಟರ್ ನ್ಯಾಷನಲ್ ಸ್ಪರ್ಧೆ ನಡೆಯಲಿದ್ದು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮಹಿಳೆ ಅನ್ನುವ ಹೆಗ್ಗಳಿಕೆಗೆ ನಿಶಾ ಪಾತ್ರವಾಗಿದ್ದಾರೆ.

ಉಡುಪಿ ಮೂಲದ ಪ್ರಿಯಾ ಸೆರಾವೊ 'ಮಿಸ್‌ ಯೂನಿವರ್ಸ್ ಆಸ್ಟ್ರೇಲಿಯಾ'ಉಡುಪಿ ಮೂಲದ ಪ್ರಿಯಾ ಸೆರಾವೊ 'ಮಿಸ್‌ ಯೂನಿವರ್ಸ್ ಆಸ್ಟ್ರೇಲಿಯಾ'

ಪದವಿಯವರೆಗೂ ಶಿಕ್ಷಣವನ್ನು ಬೀದರ್ ನಲ್ಲೇ ಪೂರೈಸಿರುವ ನಿಶಾ, ಮುಂದೆ ಉನ್ನತ ವ್ಯಾಸಂಗಕ್ಕೆ ಹೈದರಾಬಾದ್ ಗೆ ತೆರಳಿ ಡಿಪ್ಲೋಮಾ ಇನ್ ಏವಿಏಷನ್ ಪದವಿ ಪಡೆದು, ಖಾಸಗಿ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರಿಗೆ ಈ ಅವಕಾಶದ ಬಾಗಿಲು ತೆರೆದಿದೆ.

Nisha From Bidar Selected For Miss India International Finals

ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಗೆ ಆಯ್ಕೆಯಾಗಿದ್ದು ಹೇಗೆ?: ನಿಶಾ ಮಿಸ್ ಇಂಡಿಯಾ ಮಿಸ್ ಇಂಟರ್ ನ್ಯಾಷನಲ್ ಗೆ ಆಯ್ಕೆ ಆಗಿದ್ದು, ಹೈದರಾಬಾದ್ ನಲ್ಲಿ ಫ್ಯಾಷನ್ ಫಿಸ್ತಾ ವತಿಯಿಂದ. ಆಡಿಷನ್ ನಲ್ಲಿ 90 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ಒಂದೂವರೆ ತಿಂಗಳ ಕಾಲ ನಡೆದ ಆಡಿಷನ್ ನಲ್ಲಿ ನಿಶಾ ತಮ್ಮ ವ್ಯಕ್ತಿತ್ವ, ಸೌಂದರ್ಯ, ಮಾತಿನ ಕೌಶಲ್ಯದಿಂದ ಆಯ್ಕೆಯಾದರು.

ರಾಜಸ್ತಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019 ರಾಜಸ್ತಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019

ಇದೇ ಮೊದಲ ಬಾರಿಗೆ ಬೀದರ್ ನ ಯುವತಿಯೊಬ್ಬಳು ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದು, ನಿಶಾ ಸ್ಪರ್ಧೆಯಲ್ಲಿ ಗೆದ್ದು ಬರಲಿ ಎಂದು ಜಿಲ್ಲೆಯ ಜನ ಶುಭ ಹಾರೈಸುತಿದ್ದಾರೆ.

English summary
Bidar is consider as the backward district. But a young woman from a small village in the same district selected for the final round of the 2019 Miss India International Competition and represented the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X