ಜನಾರ್ದನ ರೆಡ್ಡಿ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಕುಮಾರಸ್ವಾಮಿ

Recommended Video

      ಜನಾರ್ಧನ ರೆಡ್ಡಿ ಕೊಟ್ಟ ಹೇಳಿಕೆಗೆ ಪ್ರತ್ಯುತ್ತರ ಕೊಟ್ಟ ಎಚ್ ಡಿ ಕುಮಾರಸ್ವಾಮಿ | Oneindia Kannada

      ಬೀದರ್, ನವೆಂಬರ್ 15: ದ್ವೇಷದ ರಾಜಕಾರಣ ಮಾಡಬೇಕಿದ್ದಿದ್ದರೆ ಇಷ್ಟು ವರ್ಷ ಕಾಯುವ ಅವಶ್ಯಕತೆ ಇರಲಿಲ್ಲ ಈ ಮುಂಚೆಯೇ ಮಾಡಿರುತ್ತಿದ್ದೆ ಎಂದು ಸಿಎಂ ಕುಮಾರಸ್ವಾಮಿ ಅವರು ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಎದುರುತ್ತರ ನೀಡಿದ್ದಾರೆ.

      ಬೀದರ್‌ನಲ್ಲಿ ಕೃಷಿ ಸಪ್ತಾಹ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವ ಮನಸ್ಸು ನನಗಿಲ್ಲ ಹಾಗೇನಾದರೂ ಇದ್ದಿದ್ದರೆ 12 ವರ್ಷಗಳ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಆ ಕೆಲಸ ಮಾಡಿರುತ್ತಿದ್ದೆ ಎಂದು ಅವರು ಹೇಳಿದ್ದಾರೆ.

      ಕಳ್ಳ ತಾನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡು ಹಣ ವಾಪಸ್ ನೀಡುತ್ತೇನೆ ಎಂದು ಹೇಳುತ್ತಿದ್ದಾನೆ, ಅವನಿಗೆ ರಕ್ಷಣೆ ಕೊಡ್ತೀನಿ ಎಂದು ಹೇಳುವುದು ಎಷ್ಟು ಸರಿ ಎಂದು ಅವರು ಮಾಧ್ಯಮಗಳನ್ನು ಪ್ರಶ್ನಿಸಿದರು. ರೆಡ್ಡಿ ಮತ್ತು ಆತನ ಆಪ್ತ ಅಲಿಖಾನ್‌ಗೆ ರಕ್ಷಣೆ ನೀಡುವ ವಿಚಾರವಾಗಿ ಅವರು ಈ ಮಾತನ್ನು ಹೇಳಿದರು.

      ರೆಡ್ಡಿ ಸತ್ಯಾಸತ್ಯತೆ ಗೊತ್ತಾಗುತ್ತದೆ

      ರೆಡ್ಡಿ ಸತ್ಯಾಸತ್ಯತೆ ಗೊತ್ತಾಗುತ್ತದೆ

      ಆಂಬಿಡೆಂಟ್ ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡಬೇಕೆಂದು ರೆಡ್ಡಿ ಅವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ, ಇದರಲ್ಲೇ ಅವರ ಸತ್ಯಾಸತ್ಯತೆ ಗೊತ್ತಾಗುತ್ತದೆ. ತನಿಖೆ ಆದರೆ ಸತ್ಯ ಬಯಲಾಗುತ್ತದೆ ಎಂಬ ಅಳುಕು ಅವರಿಗಿದೆ ಎಂದು ಅವರು ಹೇಳಿದರು.

      ಎಚ್‌ಡಿಕೆ ಮೇಲೆ ಲಂಚ ಆರೋಪ ಮಾಡಿದ್ದ ರೆಡ್ಡಿ

      ಎಚ್‌ಡಿಕೆ ಮೇಲೆ ಲಂಚ ಆರೋಪ ಮಾಡಿದ್ದ ರೆಡ್ಡಿ

      ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ ಜನಾರ್ದನ ರೆಡ್ಡಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, 'ಕುಮಾರಸ್ವಾಮಿ ಅವರು ಹಿಂದೆ ಸಿಎಂ ಆಗಿದ್ದಾಗ ಅವರ ಮೇಲೆ 150 ಕೋಟಿ ಲಂಚದ ಆರೋಪ ಹೊರಿಸಿದ್ದೆ, ಅದೇ ದ್ವೇಷವನ್ನು ಇಟ್ಟುಕೊಂಡು ನನ್ನ ವಿರುದ್ಧ ರಾಜಕೀಯ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ' ಎಂದು ಅವರು ಹೇಳಿದ್ದರು.

      ರಾಕ್ಷಸ ಆನಂದ ಸಿಗಬಹುದು ಎಚ್‌ಡಿಕೆಗೆ

      ರಾಕ್ಷಸ ಆನಂದ ಸಿಗಬಹುದು ಎಚ್‌ಡಿಕೆಗೆ

      ನನ್ನ ಬಂಧಿಸಿ ಹಿಂಸಿಸಿ, ತೇಜೋವಧೆ ಮಾಡಿದರೆ ಕುಮಾರಸ್ವಾಮಿ ಅವರಿಗೆ ರಾಕ್ಷಸರಿಗೆ ಸಿಗುವಂತಹಾ ಆನಂದ ಸಿಗಬಹುದು ಆದರೆ ಅದು ಕ್ಷಣಿಕ ಮಾತ್ರ. ನನ್ನ ಜೊತೆ ದೇವರಿದ್ದಾನೆ ಎಂದು ಜನಾರ್ದನ ರೆಡ್ಡಿ ನಿನ್ನೆ ಹೇಳಿದ್ದರು. ಬಹು ದೀರ್ಘವಾಗಿ ಮಾತನಾಡಿದ್ದ ಅವರು ತಮ್ಮ ಬಂಧನಕ್ಕೆ ಕುಮಾರಸ್ವಾಮಿಯೇ ಕಾರಣ ಎಂದಿದ್ದರು.

      ಸಿಸಿಬಿ ಮೇಲೆ ಒತ್ತಡ ಹಾಕಿದ್ದಾರೆ

      ಸಿಸಿಬಿ ಮೇಲೆ ಒತ್ತಡ ಹಾಕಿದ್ದಾರೆ

      ಸಿಸಿಬಿ ಅಧಿಕಾರಿಗಳ ಮೇಲೆ ಕುಮಾರಸ್ವಾಮಿ ಅವರು ಒತ್ತಡ ಹೇರಿದ್ದಾರೆ. ಅಲೋಕ್ ಕುಮಾರ್ ಮತ್ತು ಗಿರೀಶ್ ಅವರು ನಿಷ್ಠಾವಂತರು ಅವರನ್ನು ಕಾಶ್ಮೀರಕ್ಕೆ ಕಳುಹಿಸಬೇಕು ಎಂದು ಅವರು ವ್ಯಂಗ್ಯ ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+