ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಲ ಅನುಭವ ಮಂಟಪ ವಿವಾದ: ಬಣ್ಣ ಹಚ್ಚಿ ದರ್ಗಾ ಎಂದು ಬಿಂಬಿಸುವ ಯತ್ನ?

|
Google Oneindia Kannada News

ಬೀದರ್, ಮೇ 31: ಜ್ಞಾನವಾಪಿ ಮಸೀದಿ ವಿವಾದದ ಬೆನ್ನಲ್ಲೇ ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿಗ ವಿವಾದ ಕಿಡಿ ಹೊತ್ತಿಸಿದೆ. ಸದ್ಯ ಕಳೆದ ಎರಡು ಮೂರು ದಿನದಲ್ಲಿ ಕಂಬಗಳ ಮಂಟಪಕ್ಕೆ ಬಣ್ಣ ಹಚ್ಚಿ ದರ್ಗಾ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಮೂಲ ಅನುಭವ ಮಂಟಪದ ವಿಚಾರ ಮುನ್ನೆಲೆಗೆ ಬಂದಿದ್ದು ಪರ ವಿರೋಧ ಚರ್ಚೆ ನಡೆಯುತ್ತಿದೆ.. ಈ ಮಧ್ಯೆ ಅಲ್ಲಿನ ಅನುಭವ ಮಂಟಪದಲ್ಲಿರುವ ತ್ರಿಮೂರ್ತಿಗಳು ಮತ್ತು ಮಂಟಪದ ಕಂಬಗಳನ್ನು ರಾತ್ರೋರಾತ್ರಿ ಬದಲಿಸುವ ಕಾರ್ಯ ನಡೆಯುತ್ತಿರುವ ಆರೋಪ ಇದೆ.

532 ಕೋಟಿ ರೂ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ532 ಕೋಟಿ ರೂ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

ಇಲ್ಲಿನ ಪೀರ್ ಪಾಶಾ ದರ್ಗಾ ಅಂತ ಕರೆಯುವ ಈ ದರ್ಗಾವೇ ಮೂಲ ಅನುಭವ ಮಂಟಪ ಅಂತಾರೆ ಕುಂದಗೂಳ ಚನ್ನಬಸವೇಶ್ವರ ಪೀಠದ ಚನ್ನಬಸವಾನಂದ ಸ್ವಾಮೀಜಿ. ಇವರ ಹೇಳಿಕೆ ಬೆನ್ನಲ್ಲೇ ಬಸವಕಲ್ಯಾಣ ಶಾಸಕ ಶರಣು ಸಲಗರ, ಅದು ಮೂಲ ಅನುಭವ ಮಂಟಪವೇ ಇದೆ ಅಂತ ಚನ್ನಬಸವಾನಂದ ಸ್ವಾಮೀಜಿ ಹೇಳಿಕೆಯನ್ನು ಬೆಂಬಲಿಸಿ ಮೂಲ ಅನುಭವ ಮಂಟಪದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಈ ಮಧ್ಯೆ ನಡೆಯುತ್ತಿರುವ ಬೆಳವಣಿಗೆ ನೋಡಿದ ಫಿರ್ ಪಾಶಾ ದರ್ಗಾದವರು ಅದರಲ್ಲಿ ರಾತೋರಾತ್ರಿ ಬಣ್ಣ ಹಚ್ಚಿ ಸಾಕ್ಷಿಗಳನ್ನ ಕಣ್ಮರೆ ಮಾಡುವ ಕಾರ್ಯ ಅಲ್ಲಿ ನಡೆದಿದೆ ಎಂದು ಬಸವೇಶ್ವರ ಪೀಠ ಕುಂದಗೋಳ ಬೆಂಗಳೂರು ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ.

Hindu Leaders Claim Peer Pasha Darga is the Original Anubhava Mantapa

ಜೂನ್ ತಿಂಗಳಲ್ಲಿ ವಿವಾದ ಮತ್ತುಷ್ಟು ಚುರುಕು

ಈ ವಿಷಯ ಕುರಿತು ಶಾಸಕ ಶರಣು ಸಲಗರ ಮಾತನಾಡಿದ ಅವರು, ಯಾವಾಗ ಮೂಲ‌ ಅನುಭವ ಮಂಟಪದ ಪರವಾಗಿ ಹಲವು ಸ್ವಾಮೀಜಿಗಳು ತೊಡೆತಟ್ಟಿ ನಿಂತಿದ್ದೇ ತಡ ಎಚ್ಚೆತ್ತ ಭಾಲ್ಕಿಯ ಬಸವಲಿಂಗ ಪಟ್ಡದೇವರು, "ಅದು ಮೂಲ‌ ಅನುಭವ ಮಂಟಪವೇ ಅಲ್ಲ ಹಿಂದು‌ ಮುಸ್ಲಿಂ ಬಾಂಧವರು ಸೌಹಾರ್ದ ಯುತವಾಗಿ ಬಾಳಬೇಕು ಅಂತ ಹೇಳಿಕೆ ನೀಡಿದರು. ಇವರ ಹೇಳಿಕೆ ಬೆನ್ನಲ್ಲೇ ಶ್ರಿರಾಮ ಸೇನೆ ಸಂಸ್ಥಾಪಕ ಸಿದ್ದಲಿಂಗ ಸ್ವಾಮಿಗಳು ಕೆಂಡಾಮಂಡಲವಾದರು. ಸದ್ಯಕ್ಕೆ ಎಲ್ಲಾ ಸ್ವಾಮಿಗಳು ಒಗ್ಗೂಡಿ ಪತ್ರಿಕಾಗೋಷ್ಠಿ ಮಾಡಲಿದ್ದು ನಮ್ಮ ನಡೆ ಮೂಲ ಅನುಭವ ಮಂಟಪದ ಕಡೆ ಅನ್ನೋ ಕಾರ್ಯಕ್ರಮ ಹಮ್ಮಿಕೊಳ್ಳಿದ್ದು ಜೂನ್ ತಿಂಗಳಲ್ಲಿ ವಿವಾದ ಮತ್ತಷ್ಟು ಗರಂ‌ ಆಗಲಿದೆ.

Hindu Leaders Claim Peer Pasha Darga is the Original Anubhava Mantapa

ಮುಕ್ತಿ‌ ಕೊಡಿಸುವ ಕಾರ್ಯ ಮಾಡಬೇಕಿದೆ

ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಮಾತನಾಡಿ, ಒಟ್ಟಾರೆ ಮೂಲ ಅನುಭವ ಮಂಟಪದ ಚರ್ಚೆ ಮುನ್ನೆಲೆಗೆ ಬಂದಿದೆ‌. ಏಕ ವ್ಯಕ್ತಿ ಅಧೀನದಲ್ಲಿರುವ ಈ ಅನುಭವ ಮಂಟಪವೇ ಮೂಲ‌ ಅನುಭವ ಮಂಟಪ ಅನ್ನೋದು ಲಿಂಗಾಯತ ವೀರಶೈವ ಮಠದ ಸ್ವಾಮಿಗಳ ಹೇಳಿಕೆ. ಜೊತೆಗೆ ಇದಕ್ಕಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ ಕೂಡಾ ಕೈ ಜೋಡಿಸಿದ್ದು, ಮೂಲ ಅನುಭವ ಮಂಟಪದ ತಾಣವಾದ ಪೀರ್ ಪಾಶಾ ದರ್ಗಾಕ್ಕೆ ಮುಕ್ತಿ ಸಿಗುವ ದಿನಗಳು ಹತ್ತಿರವಾಗುತ್ತಿವೆ. ಈಗ ರಾತೋರಾತ್ರಿ ಅಲ್ಲಿ ಎಲ್ಲವನ್ನೂ ಬದಲಿಸುವ ಕಾರ್ಯ ನಡೆಯುತ್ತಿರುವ ಅನುಮಾನ ಇದೆ. ಸರಕಾರ ಎಚ್ಚೆತ್ತು ಮೂಲ ಅನುಭವ ಮಂಟಪದ ತಾಣವನ್ನು ಮರಳಿಪಡೆಯುವ ಕೆಲಸ ಮಾಡಬೇಕಿದೆ ಎಂಬ ಅಭಿಪ್ರಾಯ ದಟ್ಟವಾಗಿ ಕೇಳಿಬರುತ್ತಿದೆ.

(ಒನ್ಇಂಡಿಯಾ ಸುದ್ದಿ)

Recommended Video

K S Eshwarappa ನವರು ರಾಷ್ಟ್ರ ಧ್ವಜದ ಬಗ್ಗೆ ಹೀಗೆ ಹೇಳಿದ್ದೇಕೆ | OneIndia Kannada

English summary
Hindu Leaders have said that Peer Pasha Darga is the original Anubha Mantapa established by Basavanna. Now from past few days muslims are repainting pillars to hide the evidences, allege these leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X