ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಕ್ಫ್ ಬೋರ್ಡ್ ರದ್ದು ಮಾಡಬೇಕು ಎಂಬ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ

|
Google Oneindia Kannada News

ಬೀದರ್, ಏಪ್ರಿಲ್ 09: ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಕ್ಫ್ ಬೋರ್ಡ್ ರದ್ದು ಮಾಡಬೇಕು ಎಂಬ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Azaan Loudspeaker Ban : ಆಜಾನ್‌ ವೇಳೆ ಮೈಕ್ ಬಳಕೆ: ಹೊಸ ಆದೇಶ ಹೊರಡಿಸಿಲ್ಲ ಎಂದ ಸಿಎಂAzaan Loudspeaker Ban : ಆಜಾನ್‌ ವೇಳೆ ಮೈಕ್ ಬಳಕೆ: ಹೊಸ ಆದೇಶ ಹೊರಡಿಸಿಲ್ಲ ಎಂದ ಸಿಎಂ

ಅವರು ಇಂದು ಬಸವಕಲ್ಯಾಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವ ಮುನ್ನ ವಕ್ಫ್ ಬೋರ್ಡ್ ಬ್ಯಾನ್ ಅಭಿಯಾನಕ್ಕೆ ಪ್ರಮೋದ್ ಮುತಾಲಿಕ್ ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

Government has nothing to do with the campaign that the Waqf Board should abolish: CM

ಅವರವರ ಸಂಪ್ರದಾಯವನ್ನು ಅವರು ಆಚರಣೆ ಮಾಡುತ್ತಾರೆ. ಸರ್ಕಾರ ಕಾನೂನಿನ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಉಳಿದಂತೆ ಅಭಿಯಾನಗಳಿಗೂ ಸರ್ಕಾರಕ್ಕೆ ಸಂಬಂಧವಿಲ್ಲ ಎಂದರು.

ಎ. ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸರ್ಜೇವಾಲ ಅವರ ಬಿಟ್ ಕಾಯಿನ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ನಾನು ಈಗಾಗಲೇ ವಿಧಾನಸಭೆಯಲ್ಲಿಯೇ ತಿಳಿಸಿದ್ದೇನೆ. ಏನಾದರೂ ಮಾಹಿತಿ ಇದ್ದರೆ ಕೊಡಲಿ ಸುಮ್ಮನೇ ಟ್ವೀಟ್ ಮಾಡಿದರೆ ಅರ್ಥವಿಲ್ಲ ಎಂದರು.

Government has nothing to do with the campaign that the Waqf Board should abolish: CM

ಸಮಗ್ರ ಅಭಿವೃದ್ಧಿಯ ಚಿಂತನೆ

ಬಸವಣ್ಣನ ನಾಡು ಕಲ್ಯಾಣಕ್ಕೆ ಆಗಮಿಸಿದ್ದು, ಬಹಳ ಸಂತೋಷವಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿಯ ಚಿಂತನೆ ಹೊತ್ತು ಬಂದಿದ್ದೇನೆ ಎಂದರು.

Recommended Video

ರಷ್ಯಾ ಯೋಧರ ಅತ್ಯಾಚಾರದಿಂದ ಪಾರಾಗಲು ಉಕ್ರೇನ್ ಮಹಿಳೆಯರು ಮಾಡಿದ ನಿರ್ಧಾರ ಮನಕಲಕುತ್ತೆ | Oneindia Kannada

English summary
The government has nothing to do with the campaign that the Waqf Board should abolish. In the eyes of the government, all are equal: CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X