ATM Robbery: ಬ್ಯಾಂಕ್‌ಗೆ ಹಣ ತುಂಬುವಾಗ ಫೈರಿಂಗ್: ಸಿನಿಮಾ ಸ್ಟೈಲ್‌ನಲ್ಲಿ ದರೋಡೆ, ಬೆಚ್ಚಿಬಿದ್ದ ಜನ!
ಕರ್ನಾಟಕದಲ್ಲಿ ಗುರುವಾರ ರಾಜ್ಯವೇ ಬೆಚ್ಚಿ ಬೀಳುವ ಎಟಿಎಂ ದರೋಡೆ ಪ್ರಕರಣ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್‌ನಲ್ಲಿ ಗುರುವಾರ ಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಈ ಎಟಿಎಂ ಕಳ್ಳತನ ನಡೆದಿದ್ದು. ಎಸ್‌ಬಿಐ ಬ್ಯಾಂಕ್ ಮತ್ತು ಎಟಿಎಂಗೆ ಹಣ ತುಂಬಿಸುವ ಸಂದರ್ಭದಲ್ಲಿ ಈ ದರೋಡೆ ನಡೆದಿದೆ. ಬ್ಯಾಂಕ್‌ಗೆ ಹಣ ತುಂಬಿಸುವುದಕ್ಕೆ ಸಿಬ್ಬಂದಿ ಬಂದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿ, ಹಣ ದೋಚಿ ದುರೋಡೆಕೋರರು ಪರಾರಿಯಾಗಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲದೆ ಈ ಶೂಟೌಟ್ ಪ್ರಕರಣದಲ್ಲಿ ಒಬ್ಬ ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಬ್ಯಾಂಕ್ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗಿದೆ.
ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೀದರ್ ಜಿಲ್ಲೆಯ ಎಸ್‌ಬಿಐ ಮುಖ್ಯ ಕಚೇರಿ ಮುಂಭಾಗದಲ್ಲೇ ಗುಂಡಿನ ದಾಳಿ ನಡೆದಿದೆ. ಇನ್ನು ಇದೇ ಜಾಗದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಯೂ ಇದೆ.
ಎಂದಿನಂತ ಬ್ಯಾಂಕ್ ಹಾಗೂ ಎಟಿಎಂಗೆ ಹಣ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಪಿಎಸ್‌ಸಿ ವಾಹನ ಸಿಬ್ಬಂದಿ ಹಣವ ತೆಗೆದುಕೊಂಡು ಹೋಗುವಾಗ ಬಂದ ದರೋಡೆಕೋರರು ವಾಹನದ ಸಿಬ್ಬಂದಿ ಮೇಲೆ ಕಾರದ ಪುಡಿಯನ್ನು ಎರಚಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಈ ರೀತಿ ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ಅಂದಾಜು 93 ಲಕ್ಷ ಹಣವನ್ನು ದೋಚಿ, ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬ್ಯಾಂಕ್ ದರೋಡೆ ಘಟನೆಯ ಹಿನ್ನೆಲೆ ಏನು: ಎಂದಿನಂತೆ ಏಜೆನ್ಸಿ ಗುರುವಾರ ಬ್ಯಾಂಕ್‌ಗೆ ಹಣ ತುಂಬುವುದಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಸಿಬ್ಬಂದಿಯಿಂದ ಹಣ ಕಸಿದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ. ಸಿಬ್ಬಂದಿ ಹಣ ಕೊಡುವುದಕ್ಕೆ ನಿರಾಕರಿಸಿದ್ದಾರೆ. ಆಗ ಏಜೆನ್ಸಿ ಹಾಗೂ ದರೋರೆಕೋರರ ನಡುವೆ ಗುದ್ದಾಟ ಏರ್ಪಟ್ಟಿದೆ. ಬ್ಯಾಂಕ್‌ನ ಏಜೆನ್ಸಿ ದುಡ್ಡುಗಳನ್ನು ತುಂಬಿಸಿದ್ದ ದುಡ್ಡಿನ ಬಾಕ್ಸ್ ಕೊಡುವುದಕ್ಕೆ ನಿರಾಕರಿಸಿದ ಕೂಡಲೇ ದರೋಡೆಕೋರರು ಏಜೆನ್ಸಿಗಳ ಮೇಲೆ ಮನಸೋಇಚ್ಛೆ ಕಾರದ ಪುಡಿಯನ್ನು ಎರಚಿದ್ದಾರೆ.
ಅದರ ಬೆನ್ನಲ್ಲೇ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ರೀತಿ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬರು ಏಜೆನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಧಾನ ಕಚೇರಿಗಳಿರುವ ಜಾಗದಲ್ಲೇ ದರೋಡೆ: ಇನ್ನು ಗುರುವಾರ ಹಾಡುಹಗಲಲ್ಲೇ ಈ ರೀತಿಯ ಘಟನೆ ನಡೆದಿದೆ ಎನ್ನುವುದು ಒಂದು ಕಡೆಯಾದರೆ. ಬೀದರನ ಪ್ರಮುಖ ಸರ್ಕಾರಿ ಕಚೇರಿಗಳ ಹೃದಯಭಾಗದಲ್ಲೇ ಈ ಘಟನೆ ನಡೆದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬ್ಯಾಂಕ್‌ನ ಸಮೀಪದಲ್ಲೇ ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯೂ ಇದೆ. ಇಂತಹ ಪ್ರಮುಖ ಕಚೇರಿಗಳು ಸುತ್ತಮುತ್ತ ಇರುವ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಆತಂಕ ಹಾಗೂ ಆಶ್ಚರ್ಯಕ್ಕೂ ಕಾರಣವಾಗಿದೆ.
ಇನ್ನು ಮೃತಪಟ್ಟವರನ್ನು ಗಿರೀಶ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ವಿವರ ಇನ್ನಷ್ಟೇ ಬಹಿರಂಗಪಡಿಸಬೇಕಾಗಿದೆ. ಈ ಘಟನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದಾರೆ.
ಹಣ ತೆಗೆದುಕೊಂಡು ಹೋಗಲು ಪರದಾಟ: ಇನ್ನು ದರೋಡೆಕೋರರು ಹಣ ತೆಗೆದುಕೊಂಡು ಹೋಗುವುಕ್ಕೆ ಪರದಾಡಿರುವ ದೃಶ್ಯಗಳು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಬಂದಿದ್ದಾರೆ. ಆದರೆ ಅವರಿಗೆ ಬೈಕ್‌ನಲ್ಲಿ ದುಡ್ಡಿನ ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆಗಿಲ್ಲ. ಬಾಕ್ಸ್ ಎರಡು ಬಾರಿ ಕೆಳಗೆ ಬಿದ್ದಿದೆ. ಹಣ ಸಹ ಚೆಲ್ಲಾಪಿಲ್ಲಿಯಾಗಿದೆ. ಇಷ್ಟಾದರೂ ಕೆಲವೇ ನಿಮಿಷದಲ್ಲಿ ದುಡ್ಡು ತೆಗೆದುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ಮತ್ತೊಬ್ಬರ ಸಾವು: ಇನ್ನು ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬ ಏಜೆನ್ಸಿ ಸಹ ಮೃತಪಟ್ಟಿದ್ದಾರೆ. ಇದರಿಂದ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಂತಾಗಿದೆ. ಮೃತ ಕುಟುಂಬದವರ ಕಣ್ಣೀರು ಮುಗಿಲು ಮುಟ್ಟಿದೆ.












Click it and Unblock the Notifications